ಯಾವ ಏಕಾದಶಿ ಮಾಡದೆ ಇದ್ದರು ವೈಕುಂಠ ಏಕಾದಶಿ ಮಾಡುವುದರಿಂದ ಪುಣ್ಯ ಹೆಚ್ಚಾಗುತ್ತದೆ ಎಂಬ ಮಾತಿದೆ. ಹೀಗಾಗಿಯೇ ಸಾಕಷ್ಟು ಜನ ವೈಕುಂಠ ಏಕಾದಶಿಯನ್ನ ಆಚರಿಸಲು ಕಾಯುತ್ತಿರುತ್ತಾರೆ. ವಿಷ್ಣು ದೇವಸ್ಥಾನ, ತಿಮ್ಮಪ್ಪನ ದೇವಸ್ಥಾನದಲ್ಲಿ ವಿಶೇಷ ಪೂಜೆ ಇರಲಿದೆ. ಅದರಲ್ಲೂ ತಿರುಪತಿಯಲ್ಲಿ ವಿಶೇಷ ಅಲಂಕಾರವನ್ನು ಮಾಡಿರುತ್ತಾರೆ. ಈ ವರ್ಷ ಜನವರಿ 10 ಅಂದ್ರೆ ನಾಳೆ ವೈಕುಂಠ ಏಕಾದಶಿ ಆಚರಣೆ ನಡೆಯಲಿದೆ.
ವೈಕುಂಠ ಏಕಾದಶಿಯ ಸಮಯದಲ್ಲಿ ಸತ್ತವರಿಗೆ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಉಪವಾಸವಿದ್ದು, ದಾನ ಧರ್ಮ ಮಾಡುವ ಪದ್ಧತಿಯೂ ಇದೆ. ಹಿಂದೂ ಧಾರ್ಮಿಕ ಗ್ರಂಥಗಳಲ್ಲಿ ವೈಕುಂಠ ಏಕಾದಶಿಯನ್ನು ಬಹಳ ಮುಖ್ಯವೆಂದೇ ಭಾವಿಸಿದ್ದಾರೆ.
* ವೈಕುಂಠ ಏಕಾದಶಿಯಂದು ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಸ್ನಾನ ಮಾಡಬೇಕು. ಇದರ ನಂತರ ಶುದ್ಧವಾದ ಬಟ್ಟೆಗಳನ್ನು ಧರಿಸಬೇಕು.
* ನಂತರ ಪೂಜಾ ಸ್ಥಳವನ್ನು ಅಲಂಕರಿಸಿ, ಅಲ್ಲಿ ವಿಷಗಣುವಿನ ವಿಗ್ರಹ ಅಥವಾ ಫೋಟೋ ಇಡಬೇಕು.
* ವಿಷ್ಣುವಿನ ವಿಗ್ರಹವಾದರೆ ನೀರಿನಿಂದ ಅಭಿಷೇಕ ಮಾಡಬೇಕು. ಅದಕ್ಕೆ ಶ್ರೀಗಂಧ, ಸಿಂಧೂರವನ್ನು ಹಚ್ಚವೇಕು. ಹೂಗಳಿಂದ ಅಲಂಅಕರ ಮಾಡಬೇಕು.
* ಓಂ ನಾರಾಯಣ ವಿದ್ಮಹೇ ಎಂಬ ಸ್ತೋತ್ರಗಳ ಜೊತೆಗೆ ನಾರಾಯಣನಿಗೆ ಸಂಬಂಧಿಸಿದ ಮಂತ್ರಗಳನ್ನು ಜಪಿಸಬೇಕು.
* ಹಣ್ಣುಗಳು, ಸಿಹಿತಿಂಡಿಗಳನ್ನು ಅರ್ಪಿಸಿ, ನಾರಾಯಣನಿಗೆ ಪೂಜೆ ಮಾಡಬೇಕು.
ಈ ರೀತಿ ಮಾಡುವುದರಿಂದ ಪಾಪ ಕರ್ಮಗಳ ನಿವಾರಣೆಯಾಗುತ್ತದೆ ಎಂದು ನಂಬುತ್ತಾರೆ. ವೈಕುಂಠ ಏಕಾದಶಿಯಂದು ದೇವಾಸ್ಥಾನಗಳಲ್ಲಿ ವಿಶೇಷ ಪೂಜೆ ಇರಲಿದೆ. ಈ ದಿನ ಮಾಂಸಾಹಾರ ತ್ಯಜಿಸಿ, ಈರುಳ್ಳಿ ಬೆಳ್ಳುಳ್ಳಿ ಬಳಸದೆ ಹಲವರು ಅಡುಗೆ ತಯಾರಿ ಮಾಡುತ್ತಾರೆ. ಈ ದಿನದಂದು ದಾನ ಧರ್ಮ ಮಾಡುವುದು ಒಳ್ಳೆಯದೆ. ಅದರಲ್ಲೂ ತುಳಸಿ ಗಿಡವನ್ನು ದಾನವಾಗಿ ನೀಡಬಹುದು.