ಕಿಂಗ್ ಕೊಹ್ಲಿ ಬಗೆಗಿರುವ ಕ್ರೇಜ್ ಎಂಥದ್ದು ಎಂಬುದು ಗೊತ್ತೆ ಇದೆ. ಆಟದಲ್ಲೂ, ಅಭಿಮಾನಿಗಳ ವಿಚಾರದಲ್ಲೂ ಕಿಂಗ್ ಕೊಹ್ಲಿ ಸದಾ ಮುಂದೆ. ಆದರೆ ಐಸಿಸಿ ಟೆಸ್ಟ್ ಬ್ಯಾಟರ್ ರ್ಯಾಂಕಿಂಗ್ ನಲ್ಲಿ ಕೆಳಮಟ್ಟಕ್ಕೆ ಕುಸಿದಿದ್ದಾರೆ. ಹೌದು ಐಸಿಸಿ ಬ್ಯಾಟರ್ ರ್ಯಾಂಕಿಂಗ್ ವರದಿ ಬಿಡುಗಡೆ ಮಾಡಿದ್ದು, ವಿರಾಟ್ ಕೊಹ್ಲಿ ಅತ್ಯಂತ ಕೆಳ ಹಂತಕ್ಕೆ ಕುಸಿದಿದ್ದಾರೆ.
12 ವರ್ಷಗಳಲ್ಲಿ ಇದೇ ಅತ್ಯಂತ ಕಡಿಮೆ ಶ್ರೇಯಾಂಕ ಪಡೆದಿರುವುದು. ವಿರಾಟ್ ಕೊಹ್ಲಿ ಈ ಬಾರಿ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದರು. 5 ಪಂದ್ಯಗಳಲ್ಲಿ 9 ಇನ್ನಿಂಗ್ಸ್ ಆಡಿದ ಕೊಹ್ಲಿ 190 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಅಂದರೆ 23.75ರ ಸರಾಸರಿಯಲ್ಲಿ ರನ್ ಕಲೆಹಾಕಿದ್ದರು. ಈ ಕಳಪೆ ಪ್ರದರ್ಶನದ ಫಲವಾಗಿ ಇದೀಗ ಐಸಿಸಿ ಟೆಸ್ಟ್ ಬ್ಯಾಟರ್ ಗಳ ಶ್ರೇಯಾಂಕದಲ್ಲುಯ ಕುಸಿತ ಕಂಡಿದ್ದಾರೆ. ವಿರಾಟ್ ಕೊಹ್ಲು ಕಳೆದ 12 ವರ್ಷಗಳಲ್ಲಿ ಒಮ್ಮೆಯೂ ಟೆಸ್ಟ್ ಬ್ಯಾಟರ್ ಗಳ ಪಟ್ಟಿಯಲ್ಲಿ ಟಾಪ್ 25ರಿಂದ ಕೆಳಗೆ ಇಳಿದಿರಲಿಲ್ಲ. ಆದರೆ ಈಗ 27ಕ್ಕೆ ಕುಸಿದಿದ್ದಾರೆ. ಇದು ಅಭಿಮಾನಿಗಳಿಗೂ ಬೇಸರ ತರಿಸಿದೆ.
2011ರಲ್ಲಿ ತಮ್ಮ ಕೆರಿಯರ್ ಆರಂಭಿಸಿದ ಕೊಹ್ಲಿ, 2012ರ ಐಸಿಸಿ ಟೆಸ್ಟ್ ಬ್ಯಾಟರ್ ಗಳ ಪಟ್ಟಿಯಲ್ಲಿ 36ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದರು. ಇದಾದ ಬಳಿಕ ಅವರ ರ್ಯಾಂಕಿಂಗ್ ಏರುಮುಖದತ್ತಲೇ ಸಾಗುತ್ತಾ ಇತ್ತು. ಇದರ ನಡುವೆ ಆಗಸ್ಟ್ 2018ರಲ್ಲಿ ತಮ್ಮ ವೃತ್ತಿ ಜೀವನದಲ್ಲು ಅತ್ಯುತ್ತಮ ಟೆಸ್ಡ್ ರೇಟಿಂಗ್ ಪಡೆದುಕೊಂಡಿದ್ದರು. ಆ ಬಳಿಕ ಟಾಪ್ ಲೀಸ್ಟ್ ನಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಂಡಿದ್ದ ಕಿಂಗ್ ಕೊಹ್ಲಿ ಇದೀಗ ಕುಸಿತ ಕಂಡಿದ್ದಾರೆ.