ಹೆಣ್ಣಾಗಲೀ.. ಗಂಡಾಗಲಿ ತಲೆಯಲ್ಲಿ ಕೂದಲಿದ್ದರೇನೆ ಸೌಂದರ್ಯ ಚೆನ್ನಾಗಿ ಕಾಣುವುದು. ಅಂದ ಹೆಚ್ಚಾಗುವುದು. ಶಾಲೆ, ಕಾಲೇಜು ಓದುವಾಗ ಅಂದ ಸಂಪಾಗಿಯೇ ಇರುತ್ತದೆ. ಯಾಕಂದ್ರೆ ಒತ್ತಡಗಳಿರಲ್ಲ, ಜವಾಬ್ದಾರಿಯ ಭಾರ ಇರಲ್ಲ.. ಅಮ್ಮನ ಹಾರೈಕೆ, ಆರೋಗ್ಯಯುತ ಆಹಾರ ತಿಂದು ಚೆನ್ನಾಗಿಯೇ ಇರುತ್ತೇವೆ. ಆದರೆ ಕೆಲಸಕ್ಕೆಂದು ಬಂದ ಅದೆಷ್ಟೋ ಹೆಣ್ಣು ಮಕ್ಕಳ ಮನದ ನೋವು ಇದು. ಮೊದಲೆಲ್ಲಾ ದಪ್ಪ ಇದ್ದ ತಲೆ ಕೂದಲು ಈಗ ಎಲ್ಲಾ ಉದುರಿ ಹೋಗಿದೆ ಎಂದು.
ನಮ್ಮ ಆರೋಗ್ಯವನ್ನ ನಾವೇ ಕಾಪಾಡಿಕೊಳ್ಳಬೇಕು. ಅದರಲ್ಲೂ ತಲೆ ಕೂದಲ್ಲನ್ನು ಸಂಪಾಗಿ ಬೆಳೆಸಬೇಕೆಂದರೆ ಒಂದಷ್ಟು ಆರೋಗ್ಯಯುತ ಟಿಪ್ಸ್ ಅನ್ನು ಫಾಲೋ ಮಾಡಲೇಬೇಕಾಗುತ್ತದೆ. ಆಗ ಕೂದಲಿನ ಹಾರೈಕೆಯೂ ಚೆನ್ನಾಗಿ ಆಗಲಿದೆ. ದಟ್ಟವಾದ, ಸುಂದರವಾದ ಕೂದಲು ನಿಮ್ಮದಾಗುತ್ತದೆ. ಅದಕ್ಕೆ ನೀವೂ ಮಾಡಬೇಕಾಗಿರೋದು ಇಷ್ಟೆ. ಖರ್ಜೂರದ ಬಳಕೆ. ಹೇಗೆ ಎಂಬುದನ್ನ ಹೇಳ್ತೀವಿ ನೋಡಿ.
* ಖರ್ಜೂರದಲ್ಲಿ ವಿಟಮಿನ್ ಬಿ ಅತ್ಯಧಿಕವಾಗಿ ಅಡಗಿದೆ. ಹೀಗಾಗಿ ಇದು ಮನುಷ್ಯನ ದೇಹಕ್ಕೆ ಬೇಕಾದ ಪೌಷ್ಠಿಕಾಂಶವನ್ನು ನೀಡುತ್ತದೆ.
* ತಲೆ ಕೂದಲು ಉದುರುತ್ತಿದ್ದರೆ ಅದಕ್ಕೆ ವಿಟಮಿನ್ ಬಿ ಅಂಶವೂ ಕಡಿಮೆಯಾಗಿರುತ್ತದೆ. ಖರ್ಜೂರ ತಿನ್ನುವುದರಿಂದ ಅದಕ್ಕೆ ಪರಿಹಾರ ಸಿಗಲಿದೆ.
* ದಿನಕ್ಕೆ ಮೂರು ಖರ್ಜೂರ ತಿಂದರು ಸಾಕು ವಿಟಮಿನ್ ಬಿ ಕೊರತೆಯನ್ನು ನಿವಾರಿಸುತ್ತದೆ.
* ಬರೀ ಕೂದಲಿನ ಹಾರೈಕೆ ಮಾತ್ರವಲ್ಲ ಇದರಿಂದ ಚರ್ಮದ ಹಾರೈಕೆಯೂ ಆಗುತ್ತದೆ.
* ಖರ್ಜೂರಗಳಲ್ಲಿ ಚರ್ಮದ ಹಾರೈಕೆಗೆ ಬೇಕಾದ ವಿಟಮಿನ್ ಸಿ ಅಂಶವೂ ಇದೆ. ಹೀಗಾಗಿ ಖರ್ಜೂರಗಳನ್ನು ಪ್ರತಿನಿತ್ಯ ಸೇವಿಸಿ. ಇದರಿಂದ ಚರ್ಮದ ಮೇಲೆ ಆದಂತ ಕಲೆಗಳು ಕಡಿಮೆಯಾಗುತ್ತವೆ. ದೇಹದ ಚರ್ಮ ಹೊಳೆಯುತ್ತದೆ. ಪ್ರತಿ ದಿನ ಮೂರು ಕರ್ಜೂರಗಳನ್ನು ತಿಂದರೆ ಸಾಕು.