ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಕೋಪದ ಕೈಗೆ ಬುದ್ದಿ ಕೊಟ್ಟರೆ ತಲೆಗಳು ಉರುಳುವುದು ಲೆಕ್ಕಕ್ಕೆ ಸಿಗಲ್ಲ. ತಾವೂ ಏನು ಮಾಡುತ್ತಾ ಇದ್ದೀವೆಂಬ ಪರಿಜ್ಞಾನವೂ ಇರುವುದಿಲ್ಲ. ಇಂದು ಪೀಣ್ಯದಲ್ಲೂ ಹಾಗೇ ಆಗಿದೆ. ಕೋಪದ ಕೈಗೆ ಬುದ್ದಿ ಕೊಟ್ಟ ಹೋಂ ಗಾರ್ಡಗ ಹೆಂಡತಿ ಹಾಗೂ ಇಬ್ಬರು ಮಕ್ಕಳನ್ನು ಕೊಂದು ಬಿಸಾಡಿದ್ದಾನೆ. ಅಡುಗೆ ಮನೆಯಲ್ಲಿ ತಲೆಗಳು ನರಳಾಡಿವೆ. ಈ ಘಟನೆಯಲ್ಲಿ ಹೇಮಾವತಿ, ನವ್ಯಾ ಹಾಗೂ ಪತ್ನಿ ಭಾಗ್ಯಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ತಲೆ ಕಡಿದ ಮಚ್ಚನ್ನು ತೆಗೆದುಕೊಂಡು ಹೋಗಿ ಪೀಣ್ಯ ಪೊಲೀಸ್ ಠಾಣೆಯಲ್ಲಿ ಹೋಂ ಗಾರ್ಡ್ ಗಂಗರಾಜು ಸರೆಂಡರ್ ಆಗಿದ್ದಾನೆ.
ಗಂಗರಾಜು ನೆಲಮಂಗಲದವನು. ಕಳೆದ ಆರು ವರ್ಷಗಳಿಂದ ಹೆಂಡತಿ, ಮಕ್ಕಳ ಜೊತೆಗೆ ವಾಸ ಮಾಡುತ್ತಿದ್ದ. ಹೆಬ್ಬಗೋಡಿ ಠಾಣೆಯಲ್ಲಿ ಹೋಂ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ. ಮೂವರ ತಲೆ ಕಡಿದು, ಅಡುಗೆ ಮನೆಯಲ್ಲಿ ಬಿಸಾಡಿ, ಪೀಣ್ಯ ಜನರನ್ನೇ ಬೆಚ್ಚಿ ಬೀಳಿಸಿದ್ದಾನೆ.
ಸರೆಂಡರ್ ಆದಾಗ ತನ್ನ ಹೆಂಡತಿಗೆ ಬೇರೊಂದು ಸಂಬಂಧ ಇತ್ತಿ ಎಂಬ ಆರೋಪ ಮಾಡಿದ್ದಾನೆ. ಈಗಾಗಲೇ ಪೊಲೀಸರು ತನಿಖೆ ನಡೆಸಿದ್ದು, ಗಂಗರಾಜು ನಿನ್ನೆ ಕುಡೊದು ಬಂದು ಹೆಂಡತಿಯ ಮೇಲೆ ಮತ್ತು ಮಗಳು, ಹಾಗೂ ಇನ್ನೊಬ್ಬಳು ಯುವತಿಯ ಮೇಲೆ ಜಗಳ ಮಾಡಿದ್ದಾನೆ. ಈ ವೇಳೆ ಮೂವರು ಮಹಿಳೆಯರು ಸೇರಿ ಗಂಗರಾಜುಗೆ ತಲೆ ಊದಿಕೊಳ್ಳುವಂತೆ ಹೊಡೆದಿದ್ದಾರೆ. ಇಂದು ಮತ್ತೆ ಕುಡಿದ ಮತ್ತಿನಲ್ಲಿ ಮನೆಯಲ್ಲಿದ್ದ ಯುವತಿಯರ ಮೇಲೆ ಹಲ್ಲೆ ನಡೆಸಿದ್ದಾನೆ. ಮಚ್ಚಲ್ಲಿ ತಲೆ ಕಡಿದು ಅಡುಗೆ ಮನೆಯಲ್ಲಿ ಬಿಸಾಡಿದ್ದಾನೆ. ಅದೇ ಸಮಯಕ್ಕೆ ಹೊರಗೆ ಹೋಗಿದ್ದ ಭಾಗ್ಯಾ ಕೂಡ ಮನೆಗೆ ಬಂದಿದ್ದಾರೆ. ಅವರ ತಲೆಯನ್ನು ಕಡಿದು ಬಿಸಾಡಿ, ಪೊಲೀಸ್ ಠಾಣೆಗೆ ಹೋಗಿ ಸರೆಂಡರ್ ಆಗಿದ್ದಾನೆ.