ಪತ್ರಕರ್ತನ ಮೇಲೆ ಮಹಿಳೆಯರ ಹಲ್ಲೆ ಖಂಡಿಸಿ ತಹಶೀಲ್ದಾರ್ ಗೆ ಮನವಿ 

suddionenews
2 Min Read

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳೆಗೆರೆ, ಚಳ್ಳಕೆರೆ,
ಮೊ : 84314 13188

ಸುದ್ದಿಒನ್, ಚಳ್ಳಕೆರೆ, ಜನವರಿ. 08 :ಪಾವಗಡ ತಾಲೂಕಿನ ಸ್ಥಳೀಯ ಪತ್ರಕರ್ತ ರಾಮಾಂಜನೇಯರವರ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಮಾರಣಾಂತಿಕ ಹಲ್ಲೆ ಮಾಡಿರುವವರನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿ ತಾಲೂಕು ಪತ್ರಕರ್ತರ ಗೆಳೆಯರ ಬಳಗ ವತಿಯಿಂದ ತಹಶೀಲ್ದಾರ್ ರವರಿಗೆ ಮನವಿ ಸಲ್ಲಿಸಲಾಯಿತು.

ಈ ವೇಳೆ ಮಾತನಾಡಿದ ಪತ್ರಕರ್ತ ಕೊರಲಕುಂಟೆ ತಿಪ್ಪೇಸ್ವಾಮಿ ಇತ್ತೀಚಿನ ದಿನಗಳಲ್ಲಿ ವರದಿಗಾರರ ಮೇಲೆ ಹಾಡು ಹಗಲೇ ಹಲ್ಲೇ ಮಾಡುವುದು ಅವಾಚ್ಯ ಶಬ್ದಗಳಿಂದ ಸಾರ್ವಜನಿಕವಾಗಿ ನಿಂದಿಸುವುದು ಸರ್ವೇಸಾಮಾನ್ಯವಾಗಿದ್ದು ರಾಜಕಾರಣಿಗಳ ಅಧಿಕಾರಿಗಳ ಭ್ರಷ್ಟಾಚಾರವನ್ನು ಸಮಾಜದ ಮುಖ್ಯ ವಾಹಿನಿಗೆ ತರುವಲ್ಲಿ ಕ್ರಿಯಾಶೀಲವಾಗಿರುವ ಸರ್ಕಾರದ ರಕ್ಷಣೆ ಇಲ್ಲದಿದ್ದರೂ ತಮ್ಮ ಆತ್ಮವಿಶ್ವಾಸದಿಂದ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರ ಮೇಲೆ ಹಲ್ಲೆ ಮಾಡುವ ಘಟನೆಗಳು ರಾಜ್ಯ ಹಾಗೂ ದೇಶದಲ್ಲಿ ನಡೆಯುತ್ತಿವೆ ಇದಕ್ಕೆ ಪೂರಕವಾಗಿ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ರಾಮಾಂಜನೇಯ ಎಂಬ ಪತ್ರಿಕಾ ಸಂಪಾದಕರ ಮೇಲೆ ಮಹಿಳೆಯರು ಚಪ್ಪಲಿಯಿಂದ ಹೊಡೆದಿರುವುದು ಮಹಿಳಾ ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ ಯಾವುದೇ ವ್ಯಕ್ತಿ ತಪ್ಪು ಮಾಡಿದ್ದರೆ ಅಂತಹವರನ್ನು ಶಿಕ್ಷಿಸಲು ಕಾನೂನು ಇದೆ ಕಾನೂನನ್ನು ಕೈಗೆತ್ತಿಕೊಳ್ಳುವುದು ಅಕ್ರಮ ಅಪರಾಧವಾಗಿದೆ ಮಹಿಳೆಯರಿಗೆ ಮೀಸಲಾತಿ ದೊರಕಿಸಿಕೊಡುವಲ್ಲಿ ಪತ್ರಕರ್ತರ ಪಾತ್ರ ಅಪಾರವಾಗಿದ್ದು ಇಂತಹವರ ಮೇಲೆ ಹಲ್ಲೆ ಮಾಡಿರುವುದು ಮಹಿಳೆಯರ ಘನತೆಗೆ ಧಕ್ಕೆ ತಂದಿದೆ ಕೂಡಲೇ ಇವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಪತ್ರಕರ್ತ ಸುರೇಶ ಬೆಳಗೆರೆ ಮಾತನಾಡಿ. ಪತ್ರಕರ್ತರ ಮೇಲೆ ಹಲ್ಲೆ ಮಾಡಿರುವುದು ಸಮಾಜ ತಲೆತಗ್ಗಿಸುವಂತಹ ಕೆಲಸವಾಗಿದೆ . ಸಮಾಜದ ಅಂಕು ಡೊಂಕುಗಳನ್ನು ತಿದ್ದುವಂತಹ ಪತ್ರಕರ್ತರಿಗೆ ಹೆಚ್ಚಿನ ಭದ್ರತೆ ಬೇಕಿದೆ. ಸಮಾಜದಲ್ಲಿ ನಡೆಯುವಂತಹ ಅನ್ಯಾಯಗಳನ್ನ ಎತ್ತಿ ಹಿಡಿಯುವ ಪತ್ರಕರ್ತರಿಗೆ ಭದ್ರತೆ ಇಲ್ಲದಂತಾಗಿದೆ ಕೊಡಲೇ ಸರ್ಕಾರ ಇದರ ಬಗ್ಗೆ ಕ್ರಮ ಕೈಗೊಳ್ಳಬೇಕಿದೆ ಎಂದರು..
ಸಾಮಾಜಿಕ ಹೋರಾಟಗಾರ ಮೈತ್ರಿ ದ್ಯಾಮಣ್ಣ ಮಾತನಾಡಿ ಪತ್ರಕರ್ತವನ್ನು ಸಂವಿಧಾನದ ನಾಲ್ಕನೇ ಅಂಗಕ್ಕೆ ಹೋಲಿಸುತ್ತಾರೆ ಅಂತಹವರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿರುವುದು ಖಂಡಿಸುವಂಥದ್ದು ಅನಂತ್ ಕುಮಾರ್ ಹೆಗಡೆ ಅಂತಹ ರಾಜಕಾರಣಿಗಳು ಪತ್ರಕರ್ತರನ್ನು ತೀರ ಕೆಳಮಟ್ಟದಲ್ಲಿ ನಿಂದಿಸಿರುವುದನ್ನು ನೋಡಿದ್ದೇವೆ ಪತ್ರಕರ್ತರು ತಮ್ಮ ಜೀವದ ಹಂಗನ್ನು ತೊರೆದು ಸಾರ್ವಜನಿಕ ಜೀವನದ ಮೇಲೆ ನಡೆಯುವ ದೌರ್ಜನ್ಯದ ವಿರುದ್ಧ ಹೋರಾಟ ನಡೆಸುತ್ತಾರೆ ಸಾರ್ವಜನಿಕರ ಶ್ರೇಯೋಭಿವೃದ್ಧಿಗೆ ಶ್ರಮಿಸುವ ಪತ್ರಕರ್ತರನ್ನು ತಮ್ಮ ಕುಟುಂಬದ ಬಂಧುವಿನಂತೆ ಗೌರವಿಸುವುದು ಮಹಿಳೆಯರ ಧರ್ಮ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ ಅತ್ಯಾಚಾರ ಇತರೆ ಸಂಬಂಧಿಸಿದ ಎಷ್ಟೋ ಆಪಾದನೆಗಳನ್ನು ಕಾನೂನು ವ್ಯಾಪ್ತಿಗೆ ತಂದು ಶಿಕ್ಷಿಸುವಲ್ಲಿ ಪತ್ರಕರ್ತರ ಗಣನೀಯ ಪಾತ್ರ ವಹಿಸುತ್ತಾರೆ ವೇಶ್ಯಾವಾಟಿಕೆ ಬಾಲ್ಯ ವಿವಾಹದಂತ ಸಾಮಾಜಿಕ ಪಿಡುಗುಗಳ ವಿರುದ್ಧ ಪತ್ರಕರ್ತರು ವರದಿ ಮಾಡಿ ಸರ್ಕಾರದ ಗಮನ ಸೆಳೆದಿದ್ದಾರೆ ಇಂತಹ ಅಮಾನವೀಯ ಘಟನೆ ಸಹಿಸಲು ಸಾಧ್ಯವಿಲ್ಲ ಸಂತ್ರಸ್ತ ಸಂಪಾದಕರಿಗೆ ಮತ್ತು ಅವರ ಕುಟುಂಬದವರಿಗೆ ಸರ್ಕಾರ ಸೂಕ್ತ ರಕ್ಷಣೆ ನೀಡಿ ಹಾಗೂ ಪರಿಹಾರ ಒದಗಿಸಬೇಕು ಇಂತಹ ಪ್ರಕರಣಗಳು ಮುಂದೆ ಮರುಕಳಿಸಿದಂತೆ ಪತ್ರಕರ್ತರಿಗೆ ರಕ್ಷಣೆ ನೀಡಿ ಕಟ್ಟನಟ್ಟಿನ ಕ್ರಮ ಜರುಗಿಸಲು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತರಾದ ಕೊರ್ಲಕುಂಟೆ ತಿಪ್ಪೇಸ್ವಾಮಿ ಬೆಳಗೆರೆ ಸುರೇಶ್ ಕೆ ರಾಮಾಂಜನೇಯ ರಘುನಾಗ್, ಟಿ ವಸಂತಪ್ಪ ದೊಡ್ಡ ಉಳ್ಳಾರ್ತಿ ಕರಿಯಣ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *