ನಟಿ ರಮ್ಯಾ ನಟನೆ ಹಾಗೂ ರಾಜಕೀಯ ಎರಡರಿಂದಾನೂ ದೂರ ಉಳಿದಿದ್ದಾರೆ. ಕನ್ನಡ ಇಂಡಸ್ಟ್ರಿಯ ಪ್ರೇಕ್ಷಕರು ಕಮ್ ಬ್ಯಾಕ್ ಮಾಡ್ತಾರೆ ಅನ್ನೋ ಆಸೆ ಸಿನಿ ಪ್ರೇಮಿಗಳ ಮನಸ್ಸಲ್ಲಿ ಹಾಗೇ ಉಳಿದೇ ಬಿಟ್ಟಿದೆ. ಅದು ಯಶಸ್ಸು ಆಗಲೇ ಇಲ್ಲ. ಹಂಗ್ ಬಂದು ಹಿಂಗೆ ಹೊರಟರು. ತೆರೆ ಮೇಲೆ ಮಾತ್ತ ಬರಲಿಲ್ಲ. ಆದರೆ ಬರೋಬ್ಬರಿ ಏಳು ವರ್ಷಗಳ ಬಳಿಕ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಮಾತ್ರ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾದಲ್ಲಿ. ಇವತ್ತು ಕೋರ್ಟ್ ಗೆ ಹಾಜರಾಗಿದ್ದು ಕೂಡ ಇದೇ ಕೇಸಲ್ಲಿ.
ಹೌದು ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾದಲ್ಲಿ ರಮ್ಯಾ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆದರೆ ಸಿನಿಮಾದಲ್ಲಿ ಅವರ ಕ್ಲಿಪ್ ಅನ್ನ ಫನ್ನಿಯಾಗಿ ಎಲ್ಲಾ ಕಡೆಯಲ್ಲೂ ಬಳಕೆ ಮಾಡಿಕೊಂಡಿದ್ದರು. ‘ನನ್ನ ಅನುಮತಿ ಪಡೆಯದೆ ಸಿನಿಮಾ ಟ್ರೇಲರ್, ಸಿನಿಮಾದಲ್ಲಿ ನನಗೆ ಸಂಬಂಧಿಸಿದ ದೃಶ್ಯದ ತುಣುಕುಗಳನ್ನು ಬಳಕೆ ಮಾಡಿಕೊಂಡಿದ್ದಾರೆ. ಇದಕ್ಕೆ ಯಾವ ಅನುಮತಿ ಪಡೆದುಕೊಂಡಿಲ್ಲ. ನನಗೆ ಪರಿಹಾರವಾಗಿ ಒಂದು ಕೋಟಿ ರೂಪಾಯಿ ಕೊಡಬೇಕೆಂದು’ ಕೋರಿ ರಮ್ಯಾ ವಾಣಿಜ್ಯ ನ್ಯಾಯಾಲಯದ ಮೆಟ್ಟಿಲೇರಿದ್ದರು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಕೋರ್ಟ್ ಗೆ ಹಾಜರಾಗಿದ್ದರು.
ಇಂದು ತಮ್ಮ ಪರವಾದ ವಕೀಲರ ಸಮೇತ ನ್ಯಾಯಾಲಯದ ಮುಂದೆ ಹಾಜರಾಗಿದ್ದರು. ತಾವು ಮಾಡಿರುವ ಆರೋಪಕ್ಕೆ ಸಾಕ್ಷ್ಯಾಧಾರಗಳನ್ನ ಒದಗಿಸುವ ಸಾಧ್ಯತೆ ಇದೆ. ಇನ್ನು ಹಾಸ್ಟೇಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ 2024ರ ಜುಲೈ 24ರಂದು ರಿಲೀಸ್ ಆಗಿತ್ತು. ರಿಲೀಸ್ ಗೂ ಮುನ್ನವೇ ರಮ್ಯಾ ತಡೆ ತಂದಿದ್ದರು. ಆದರೆ ಕೋರ್ಟ್ ರಿಲೀಸ್ ಗೆ ಅನುಮತಿ ನೀಡಿತ್ತು.