ಹುಬ್ಬಳ್ಳಿ : ಕೊರೊನಾ ಮೂರನೆ ಅಲೆಯ ಹೊಡೆತ ಈಗ ಬೀಳುತ್ತಾ ಇದೆ. ಎಲ್ಲೆಲ್ಲೂ ವೈರಸ್ ಜಾಸ್ತಿ ಆಗುತ್ತಿದ್ದು, ಆತಂಕ ಮನೆ ಮಾಡಿದೆ. ಅದರಲ್ಲೂ ವಿದ್ಯಾರ್ಥಿಗಳಲ್ಲೇ ಸೋಂಕಿನ ಲಕ್ಷಣಗಳು ಹೆಚ್ಚಾಗುತ್ತಿದೆ. ಇದೀಗ ಹುಬ್ಬಳ್ಳಿಯ ಶಾಲೆಯೊಂದರಲ್ಲೂ ಮಕ್ಕಳಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಶಾಲೆಯ ಎಲ್ಲಾ ಮಕ್ಕಳಿಗೂ ಟೆಸ್ಟ್ ಮಾಡಿಸಲಾಗುತ್ತಿದೆ.
ಆದರ್ಶನಗರದಲ್ಲಿರು ಖಾಸಗಿ ಶಾಲೆಯಲ್ಲಿ ಇತ್ತೀಚೆಗಷ್ಟೇ ವಿದ್ಯಾರ್ಥಿಯಲ್ಲಿ ಸೋಂಕು ಕಂಡು ಬಂದಿತ್ತು. ವಿದ್ಯಾರ್ಥಿಯ ಅಕ್ಕ ವೈದ್ಯೆಯಾಗಿದ್ದಾರೆ. ಅವರಿಂದ ಈ ವಿದ್ಯಾರ್ಥಿಗೂ ಸೋಂಕು ಕಾಣಿಸಿಕೊಂಡಿದೆ. ಬಳಿಕ ಆತನನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ. ಹೀಗಾಗಿ ಎಲ್ಲಾ ವಿದ್ಯಾರ್ಥಿಗಳಿಗೂ ಪರೀಕ್ಷೆ ನಡೆಸಲಾಗುತ್ತಿದೆ.
ಅಲ್ಲಿನ ತಹಶೀಲ್ದಾರ್ ಸಹ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಕ್ಕಳಿಂದ ಮಕ್ಕಳಿಗೆ ಹಾಗೇ ಪೋಷಕರಿಗೆ ಕೊರೊನಾ ವೈರಸ್ ಅಂಟಿದರೆ ಏನು ಮಾಡೋದು ಎಂಬ ಆತಂಕ ಎಲ್ಲರಲ್ಲೂ ಮನೆ ಮಾಡಿದೆ. ಮುಂಜಾಗ್ರತ ಕ್ರಮವಾಗಿ ಸೋಮವಾರದವರೆಗೂ ಶಾಲೆಗೆ ರಜೆ ನೀಡಿದ್ದು, ಸ್ಯಾನಿಟೈಸ್ ಮಾಡಿಸಲಾಗುತ್ತಿದೆ.