ಮಡಿಕೇರಿ: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಇಳಿಮುಖವಾಗ್ತಾ ಇದ್ರು ಕೂಡ, ಕೊಡಗಿನಲ್ಲಿ ದಿನದಿಂದ ದಿನಕ್ಕೆ ಏರಿಕೆಯಾಗ್ತಾನೆ ಇದೆ. ಇಂದು ಒಂದೇ ಗ್ರಾಮದಲ್ಲಿ 51 ಜನರಿಗೆ ಕೋವಿಡ್ ಪಾಸಿಟಿವ್ ಆಗಿದ್ದು, ಗ್ರಾಮದ ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಸೋಮವಾರ ಪೇಟೆಯ ಹರದೂರು ಗ್ರಾಮಪಂಚಾಯತ್ ವ್ಯಾಪ್ತಿಯ ಅಂಜನಗೇರಿಯಲ್ಲಿ ಈ ಘಟನೆ ನಡೆದಿದೆ. ಇನ್ನೊಂದು ಆಶ್ಚರ್ಯಕರ ಸಂಗತಿ ಎಂದರೆ ಪಾಸಿಟಿವ್ ಬಂದಿರುವ ಜನ ತೋಟ ಬಿಟ್ಟು ಎಲ್ಲಿಯೂ ಹೊರಹೋಗಿಲ್ಲ. ಕಾಫಿ ತೋಟದಲ್ಲಿ ಕೆಲಸ ಮಾಡಿಕೊಂಡಿದ್ದರಷ್ಟೇ. ಎಲ್ಲಿಯೂ ಹೊರಗೆ ಹೋಗದವರಿಗೆ ಹೇಗೆ ಪಾಸಿಟಿವ್ ಬಂತು ಅನ್ನೋದೆ ಎಲ್ಲರ ತಲೆಯಲ್ಲೂ ಹೊಕ್ಕ ಪ್ರಶ್ನೆಯಾಗಿದೆ.
ಇನ್ನು ಈ ಗ್ರಾಮದಲ್ಲಿ 25ಕ್ಕೂ ಹೆಚ್ಚು ಮನೆಗಳಿವೆ. ಇದರಲ್ಲಿ ಇಬ್ಬರು ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟಿವ್ ಹರಡಿತ್ತು. ಆ ಇಬ್ಬರು ವಿದ್ಯಾರ್ಥಿಗಳು ಮಡಿಕೇರಿಗೆ ಕಾಲೇಜಿಗೆ ಹೋಗ್ತಾ ಇದ್ರು. ಈ ಸೋಂಕಿತರೆಲ್ಲಾ ಇತ್ತೀಚೆಗೆ ವೃದ್ಧರೊಬ್ಬರ ಅಂತ್ಯಸಂಸ್ಕಾರಕ್ಕೆ ಹೋಗಿದ್ದರಂತೆ. ಇದರಿಂದಾಗಿ ಸೋಂಕು ಹರಡಿರಬಹುದೆಂದು ಹೇಳಲಾಗ್ತಾ ಇದೆ.