ಹೊಸ ವರುಷ.. ಎಲ್ಲರಿಗೂ ಹೊಸ ಹರುಷ ತರಲೆಂದು ಸುದ್ದಿ ಒನ್ ಪತ್ರಿಕೆ ಹಾರೈಸುತ್ತದೆ. ಆದರೆ ಇದರ ಜೊತೆಗೆ ಒಂದು ಸಣ್ಣ ಎಚ್ಚರಿಕೆಯನ್ನು ನೀಡುತ್ತಿದೆ. ಇತ್ತೀಚಿನ ದಿನಗಳಲ್ಲಿ ಸೈಬರ್ ಹಂತಕರು ಹೇಗೆ ಹಣ ದೋಚುತ್ತಾರೆ ಅನ್ನೋದೇ ಗೊತ್ತಾಗೋದಿಲ್ಲ. ಈ ಮೊದಲೆಲ್ಲಾ ಒಟಿಪಿ ಹೇಳಿದರೆ ಅಕೌಂಟ್ ನಲ್ಲಿದ್ದ ಹಣ ಖಾಲಿಯಾಗ್ತಾ ಇತ್ತು. ಅದರ ಬಗ್ಗೆ ಜನ ಜಾಗೃತರಾದ ಬಳಿಕ ಹೊಸ ಹೊಸ ಹಾದಿ ಹಿಡಿದರು. ಡಿಜಿಟಲ್ ಯುಗ ಬೆಳೆದಷ್ಟು ಕಳ್ಳರ ಐಡಿಯಾಗಳು ಬೆಳೆಯುತ್ತಾ ಹೋಗುತ್ತಿವೆ.

ಈಗಂತೂ ವಾಟ್ಸಾಪ್ ಮೂಲಕವೇ ಹಣ ದೋಚಿ ಬಿಡುತ್ತಾರೆ. ಫ್ರೆಂಡ್ ರೀತಿ ಕರೆ ಮಾಡಿ, ಲಗ್ನ ಪತ್ರಿಕೆ ಕಳುಹಿಸಿ ಹಣ ದೋಚುತ್ತಾರೆ. ಹೀಗಾಗಿ ಅಪರಿಚಿತರ ಮೆಸೇಜ್ ಗಳಿಂದ ಎಚ್ಚರವಾಗಿರಿ. ವಿಡಿಯೋ ಕಾಲ್, ಲಿಂಕ್ ಗಳನ್ನು ಓಪನ್ ಮಾಡುವುದಕ್ಕೂ ಮುನ್ನ ಎಚ್ಚರವಾಗಿರಿ.

ಅದರಲ್ಲೂ ಹೊಸ ವರ್ಷದ ದಿನವೂ ಸೈಬರ್ ಕ್ರೈಂನವರು ಕಾದು ಕುಳಿತಿರುತ್ತಾರೆ. ಶುಭಾಶಯಗಳನ್ನ ಕಳುಹಿಸುವ ಮೂಲಕವೂ ನಿಮ್ಮನ್ನ ಯಾಮಾರಿಸಬಹುದು. ಶುಭಾಶಯಗಳ ಲಿಂಕ್ ಎಂದು ಅಪರಿಚಿತ ನಂಬರ್ ಗಳಿಂದ ಬಂದರೆ ಓಪನ್ ಮಾಡಬೇಡಿ.
ಅನುಮಾನಾಸ್ಪದ ಸಂಖ್ಯೆಯಿಂದ ಬರುವ ಯಾವುದೇ ಲಿಂಕ್ ಮೇಲೆ ಕ್ಲಿಕ್ ಮಾಡಬೇಡಿ
ಯಾವುದಾದರು ಉಡುಗೊರೆ, ಉಚಿತ ಸೇವೆಯ ಆಮಿಷದ ಲಿಂಕ್ ಬಂದ್ರೆ ಹುಷಾರ್
ಅಪರಿಚಿತರು ಕರೆ ಮಾಡಿ ಲಾಟರಿ ಅಥವಾ ಗಿಫ್ಟ್ ಗೆಲ್ಲುವಂತೆ ಪ್ರಚೋದಿಸಿದರೆ ಎಚ್ಚರದಿಂದಿರಿ
ಕ್ಯೂಆರ್ ಕೋಡ್ ಮೂಲಕವೂ ವಂಚನೆ ನಡೆಯುತ್ತಿದೆ ಜಾಗೃತರಾಗಿ
ಅಪರಿಚಿತ ವ್ಯಕ್ತಿಗಳೊಂದಿಗೆ ಸೂಕ್ಷ್ಮ ಮಾಹಿತಿಗಳನ್ನು ಹಂಚಿಕೊಳ್ಳಬೇಡಿ ಇದರಿಂದ ಸೈಬರ್ ಅಪರಾಧಿಗಳಿಗೆ ಸುಲಭವಾಗಿ ಆಹಾರವಾಗುತ್ತೀರಿ.


