ಇತ್ತೀಚಿನ ವರ್ಷಗಳಲ್ಲಿ ಸ್ಟಾರ್ ಸಿನಿಮಾಗಳು ತೆರೆಗೆ ಬರೋದಕ್ಕೆ ತಡವಾಗುತ್ತಿರೋದೆ ಬಜೆಟ್. ಬಿಗ್ ಬಜೆಟ್ ಸಿನಿಮಾಗಳು, ಪ್ಯಾನ್ ಇಂಡಿಯಾ ಲೆವೆಲ್ ಗೆ ಸಿನಿಮಾಗಳನ್ನ ತೆಗೆಯುವುದಕ್ಕೆ ಮಿನಿಮಮ್ ನೂರಾರು ಕೋಟಿ ಬಜೆಟ್ ಬೇಕಾಗುತ್ತದೆ. ಆದರೆ ಸ್ಟಾರ್ ನಟರಿಗೆ ಸಂಭಾವನೆಯೇ ನೂರಾರು ಕೋಟಿ ದಾಟಿ ಬಿಡುತ್ತದೆ. ಅಷ್ಟೇ ಕಲೆಕ್ಷನ್ ಕೂಡ ಮಾಡುತ್ತೆ ಬಿಡಿ. ಹಾಗಾಗಿಯೇ ಸ್ಟಾರ್ ಗಳು ಕೋಟಿ ಕೋಟಿಗೆ ಡಿಮ್ಯಾಂಡ್ ಇಡೋದು. ಈಗ ಬಂದಿರೋ ಬ್ರೇಕಿಂಗ್ ನ್ಯೂಸ್ ಅಂದ್ರೆ ನಟ ಯಶ್ ಅವರ ಬಗ್ಗೆ.
ಹೌದು ಯಶ್ ಟಾಕ್ಸಿಕ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. 2025ರ ಆರಂಭ ಅಥವಾ ಮಧ್ಯ ಭಾಗದಲ್ಲಿ ಸಿನಿಮಾ ರಿಲೀಸ್ ಆಗುವ ನಿರೀಕ್ಷೆ ಇದೆ. ಇದರ ಜೊತೆಗೆ ಬಿಗ್ ಬಜೆಟ್ ಸಿನಿಮಾ ರಾಮಾಯಣದ ಬಗ್ಗೆಯೂ ಸಿಕ್ಕಾಪಟ್ಟೆ ನಿರೀಕ್ಷೆ ಇದೆ. ಅದರಲ್ಲೂ ಯಶ್ ಅವರು ನಿರ್ಮಾಣ ಕೂಡ ಮಾಡ್ತಾ ಇದ್ದಾರೆ ಎಂಬ ಮಾತಿನ ನಡುವೆ ಈಗ ಸಂಭಾವನೆ ವಿಚಾರ ಸದ್ದು ಮಾಡ್ತಾ ಇದೆ.
ಯಶ್ ರಾಮಾಯಣ ಸಿನಿಮಾದಲ್ಲಿ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವಿಲನ್ ಆಗಿ ಎಂಟ್ರಿ ಕಿಡ್ತಾ ಇದಾರೆ. ಈ ವಿಲನ್ ಪಾತ್ರಕ್ಕೆ ನಟ ಯಶ್ ಡಿಮ್ಯಾಂಡ್ ಇಟ್ಟಿರೋದು ಬರೋಬ್ಬರಿ 200 ಕೋಟಿ ಅಂತೆ. ಸಹಜವಾಗಿ ಸಿನಿಮಾದಲ್ಲಿ ಈಗಾಗಲೇ ಖಳನಾಯಕನ ಪಾತ್ರದಲ್ಲಿ ಖ್ಯಾತಿ ಪಡೆದಿರುವ ಬಾಬಿ ಎಇಯೋಲ್, ಫಹಾದ್ ಪಾಸಿಲ್, ವಿಜಯ್ ಸೇತುಪತಿ ಅಂಥವರಿಗೇನೆ ಬಹಳ ಹೆಚ್ಚೆಂದರೆ 10 ಕೋಟಿ ನೀಡಲಾಗುತ್ತದೆ. ಆದರೆ ಯಶ್ ಖಳನಾಯಕನ ಪಾತ್ರಕ್ಕೆ 200 ಕೋಟಿ ಡಿಮ್ಯಾಂಡ್ ಮಾಡಿದ್ದು, ಯಶ್ ದುಬಾರಿ ವಿಲನ್ ಆಗಿದ್ದಾರೆ.OK