‘ಮ್ಯಾಕ್ಸ್’ ಅಪ್ಪಟ ಆ್ಯಕ್ಷನ್ ಮೂವಿ. ಸುದೀಪ್ ಅಭಿಮಾನಿಗಳಿಗೆ ಕ್ರಿಸ್ಮಸ್ ಹಬ್ಬದ ಉಡುಗೊರೆಯಂತೆ ‘ಮ್ಯಾಕ್ಸ್’ ತೆರೆಗೆ ಬಂದು ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಸಿನಿ ಪ್ರೇಕ್ಷಕರಿಗೆ ಎಲ್ಲಿಯೂ ಬೋರ್ ಆಗದಂತೆ ಸುದೀಪ್ ಅಭಿನಯ, ನಿರ್ದೇಶಕ ವಿಜಯ್ ಕಾರ್ತಿಕೇಯ ಅವರ ಚಿತ್ರಕಥೆ, ಕ್ಯಾಮೆರಾಮನ್ ಶೇಖರ್ ಚಂದ್ರ ಕೈಚಳಕ ಹಾಗೂ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಅವರು ಹದವಾಗಿ ತೆಗೆದ ಕುಸುರಿ ಕೆಲಸ ತೆರೆಮೇಲೆ ಅದ್ಧೂರಿಯಾಗಿ ಮೂಡಿ ಬಂದಿದೆ.
ಅರ್ಜುನ್ (ಸುದೀಪ್) ಸಸ್ಪೆಂಡ್ ಪೊಲೀಸ್ ಆಫಿಸರ್. ಬಹಳ ದಿನಗಳ ನಂತರ ಪೋಸ್ಟಿಂಗ್ ಸಿಕ್ಕಿ ಮರುದಿನ ಡ್ಯೂಟಿಗೆ ಜಾಯನ್ ಆಗಲು ತಾಯಿಯೊಂದಿಗೆ ಬರುತ್ತಾನೆ. ಪೊಲೀಸ್ ಹೆಡ್ ಕಾನಸ್ಟೇಬಲ್ ಸ್ಟೇಷನ್ ನೀಟ್ ಆಗಿ ಇಡಬೇಕು. ‘ಮ್ಯಾಕ್ಸ್’ ಹಲವು ಬಾರಿ ಸಸ್ಪೆಂಡ್ ಆದಾಗಲೂ ದೊಡ್ಡ ದೊಡ್ಡ ತಿಮಿಂಗಲಗಳ ಜನುಮ ಜಾಲಾಡಿ ಸಸ್ಪೆಂಡ್ ಆಗಿರುವುದು. ಈಗಲೇ ನಾವು ಅವರನ್ನು ರೈಲ್ವೆ ಸ್ಟೇಷನ್‌ನಿಂದ ಮನೆಗೆ ಡ್ರಾಪ್ ಮಾಡಲು ರೈಲ್ವೆ ಸ್ಟೇಷನ್ ಗೆ ಹೊರಡುತ್ತಾರೆ. ಈ ಮಾರ್ಗದಲ್ಲಿ ಮಿನಿಸ್ಟರ್ಸ್ ಮಕ್ಕಳಿಬ್ಬರು ಡ್ರಗ್ ಸೇವಿಸಿ ಕರ್ತವ್ಯ ನಿರತ ಪೊಲೀಸ್‌ರ ಮೇಲೆ ಕಾರು ಚಲಾಯಿಸಿ, ಲೇಡಿ ಪೊಲೀಸ್ ಮೇಲೆ ಕೈ ಚಲಾಯಿಸುತ್ತಿದ್ದಾಗ ‘ಮ್ಯಾಕ್ಸ್’ ಮಾಸ್ ಎಂಟ್ರಿಯಾಗುತ್ತದೆ.
ಪವರ್ ಫುಲ್ ಮಿನಿಸ್ಟರ್ಸ್ ಫುಲ್ ಸಿಟಿ ತಮ್ಮ ರಣಸೇನೆ ಕಟ್ಟಿಕೊಂಡು ಮಕ್ಕಳನ್ನು ರಕ್ಷಿಸುವುದಕ್ಕೆ ಪೊಲೀಸ್ ಸ್ಟೇಷನ್ ಹಿಂದೆ ಬಿದ್ದಿರುತ್ತಾರೆ. ವಿಲನ್ (ಸುನೀಲ್) ಹಾಗೂ ಕ್ರೈಮ್ ಪೊಲೀಸ್ ಅಧಿಕಾರಿ (ವರಲಕ್ಷ್ಮಿ ಶರತ ಕುಮಾರ್) ಅವರ ಆರ್ಭಟದ ಮಧ್ಯೆ ‘ಮ್ಯಾಕ್ಸ್’ ಹೇಗೆ ತನ್ನ ಯುದ್ಧ ಆರಂಭಿಸುತ್ತಾನೆ. ರೌಡಿ ಸೇನೆಯಿಂದ ಪೊಲೀಸ್ ಅಧಿಕಾರಿಗಳು ತಮ್ಮ ಪ್ಯಾಮಿಲಿಯನ್ನು ಹೇಗೆ ರಕ್ಷಿಸಿಕೊಳ್ಳುತ್ತಾರೆ. ‘ಮ್ಯಾಕ್ಸ್’ ರಾತ್ರಿ ಕಳೆಯುವ ವರೆಗೆ ಏನು ಕರಾಮತ್ತು ನಡೆಸುತ್ತಾನೆ ಎಂಬುದೇ ಸಿನಿಮಾದ ಮುಖ್ಯ ಹೈಲೈಟ್.
‘ಮ್ಯಾಕ್ಸ್’ ಒಂದೇ ಲೊಕೇಷನ್‌ನಲ್ಲಿ ನಡೆಯುವ ರೋಚಕ ದೃಶ್ಯಗಳನ್ನು ಹೆಣೆದಿರುವುದೇ ನಿರ್ದೇಶಕರ ಮೊದಲ ಪ್ರಯತ್ನದಲ್ಲಿಯೇ ಗೆದ್ದಿದ್ದಾರೆ. ಕೆಂಪೇಗೌಡ ಸಿನಿಮಾದ ನಂತರ ಹೆಚ್ಚು ಮಾಸ್ ಕಂಟೆAಟ್ ಇರುವ ಸಿನಿಮಾವಾಗಿದ್ದರೆ ಅದು ‘ಮ್ಯಾಕ್ಸ್’ ಎನ್ನಬಹುದು. ಉಗ್ರಂ ಮಂಜು, ಪ್ರಮೋದ್ ಶೆಟ್ಟಿ, ಪೊಲೀಸ್ ಕಾನ್ಸ್ಟೇಬಲ್ ಪಾತ್ರದಲ್ಲಿ ಸಂಯುಕ್ತ ಬೆಳವಾಡಿ, ಸುಕೃತ ವಾಗ್ವೆ ಇವರಿಬ್ಬರ ಅಭಿನಯದಲ್ಲೂ ನ್ಯಾಯ ಒದಗಿಸಿದ್ದಾರೆ. ಒಟ್ಟಿನಲ್ಲಿ ಈ ಸಿನಿಮಾ ಮ್ಯಾಕ್ಸಿಮಮ್ ಪವರ್ ಫುಲ್ ಮ್ಯಾಕ್ಸ್ ಎನ್ನಬಹುದು.
ರಾಜೇಶ್ ಗಣಪತಿ