ಸುದ್ದಿಒನ್, ಹೊಸದುರ್ಗ, ಡಿಸೆಂಬರ್. 25 : ಚಿತ್ರದುರ್ಗದ ಕರ್ನಾಟಕ ಗ್ರಾಮೀಣ ಬ್ಯಾಂಕ್, ಐ.ಯು.ಡಿ.ಪಿ. ಲೇಔಟ್, ಕರೆನ್ಸಿ ಚೆಸ್ಟ್ ಶಾಖೆ ವತಿಯಿಂದ ಡಿಸೆಂಬರ್ 30 ರಂದು ಬೆಳಿಗ್ಗೆ 11:00 ರಿಂದ ಸಂಜೆ 04:00 ಗಂಟೆಯವರೆಗೆ ಆಯೋಜಿಸಲಾಗಿದೆ.
ಸಾರ್ವಜನಿಕರ ಅನುಕೂಲಕ್ಕಾಗಿ ರೂ. 1/-, 2/-, 5/-, 10/- ಹಾಗೂ 20/- ರ ಮುಖಬೆಲೆಯ ನಾಣ್ಯಗಳ ಮೇಳ ಹಾಗೂ ನೋಟ್ ಎಕ್ಸ್‌ಚೇಂಜ್ ಮೇಳವನ್ನು ಹೊಸದುರ್ಗ ಶಾಖೆಯ ಆವರಣದಲ್ಲಿ ಆಯೋಜಿಸಲಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಗ್ರಾಹಕರ ಅನುಕೂಲಕ್ಕೋಸ್ಕರ ಹೆಚ್ಚಿನ ರೂ. 10 ಮತ್ತು 20ರ ಮುಖಬೆಲೆಯ ನಾಣ್ಯಗಳನ್ನು ನೀಡಿರುತ್ತದೆ. ಗ್ರಾಹಕರು ಗರಿಷ್ಠ ಸಂಖ್ಯೆಯಲ್ಲಿ ರೂ. 10 ಮತ್ತು 20ರ ನಾಣ್ಯಗಳನ್ನು ಪಡೆಯಲು ಈ ಮೂಲಕ ತಿಳಿಸಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಶಾಖಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.