ಬೆಂಗಳೂರು: ಕೊರೊನಾ ಮೊದಲು ಮತ್ತು ಎರಡನೇ ಅಲೆಯಿಂದಾಗಿ ಜನ ಸಂಕಷ್ಟ ಅನುಭವಿಸಿದ್ದು ಅಷ್ಟಿಷ್ಟಲ್ಲ. ಮೂರನೆ ಅಲೆ ಕಾಣಿಸಿಕೊಳ್ಳೋದು ತುಂಬಾನೆ ವಿರಳ ಅಂತ ಹೇಳಲಾಗ್ತಾ ಇತ್ತು. ತಜ್ಞರು ಹೇಳಿದ ಸಮಯಕ್ಕೆ ಮೂರನೆ ಅಲೆಯ ಸೂಚನೆ ಇಲ್ಲದೆ ಇದ್ದ ಕಾರಣ, ಮೂರನೆ ಅಲೆ ಬರಲ್ಲ ಎಂದೇ ಭಾವಿಸಲಾಗಿತ್ತು. ಆದ್ರೆ ಇದೀಗ ಇದ್ದಕ್ಕಿದ್ದ ಹಾಗೆ ಮೂರನೇ ಅಲೆಯ ದರ್ಶನ ಎಲ್ಲೆಲ್ಲೂ ಹಬ್ಬುತ್ತಿದೆ.
ಮೂರನೇ ಅಲೆ ತಪ್ಪಿಸಲು ಸರ್ಕಾರ ಅಲರ್ಟ್ ಆಗಿದೆ. ಬಿಬಿಎಂಪಿ ಕೂಡ ಸಜ್ಜಾಗಿದೆ. ಮೂರನೇ ಅಲೆ ತಡೆಗೆ ಬಿಬಿಎಂಪಿ ಸೂಪರ್ ಪ್ಲಾನ್ ಮಾಡಿಕೊಂಡಿದೆ. ಹೊಸ ತಳಿ ತಡೆಗಟ್ಟೋಕೆ ಪಾಲಿಕೆಯಿಂದ ಸರ್ಕಾರಕ್ಕೆ ಹೊಸ ಪ್ರಸ್ತಾವನೆ ಸಲ್ಲಿಸಿದೆ. ಕೊರೊನಾದಿಂದ ಬಚಾವ್ ಆಗಲು ವ್ಯಾಕ್ಸಿನ್ ಒಂದೇ ಮಾರ್ಗವೆಂದು ಭಾವಿಸಲಾಗಿದ್ದು, ಎಲ್ಲರಿಗೂ ವ್ಯಾಕ್ಸಿನ್ ನೀಡುವ ಗುರಿ ಹೊಂದಿದೆ.
ಎರಡನೇ ಡೋಸ್ ಪಡೆಯದಿದ್ರೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲು ಅವಕಾಶವನ್ನೇ ತಪ್ಪಿಸಲು ನಿರ್ಧರಿಸಿದೆ. ಎರಡು ಡೋಸ್ ವ್ಯಾಕ್ಸಿನ್ ಪಡೆಯದವರು ಸಾರ್ವಜನಿಕರ ಸ್ಥಳಗಳಲ್ಲಿ ಹೋಗುವಂತಿಲ್ಲ ಎನ್ನಲಾಗಿದೆ.
ಅಷ್ಟೇ ಅಲ್ಲ ಬೆಂಗಳೂರು ಜನರ ಜೀವನಾಡಿ ಬಿಎಂಟಿಸಿ ಬಸ್ ಗೆ ಕೂಡ ಹತ್ತಿಸಲ್ಲವಂತೆ. ಬಿಎಂಟಿಸಿ ಹತ್ತಬೇಕು ಅಂದ್ರೂ ಸೆಕೆಂಡ್ ಡೋಸ್ ವ್ಯಾಕ್ಸಿನ್ ಪಡೆದಿರಬೇಕು. KSRTC, ಮೆಟ್ರೋ, ಮಾಲ್ ಗೆ ಹೋಗ್ಬೇಕಾದ್ರೂ ಎರಡನೇ ಡೋಸ್ ಪಡೆದಿರಲೇಬೇಕು ಎನ್ನಲಾಗಿದೆ.
ಈ ಕುರಿತು ಬಿಬಿಎಂಪಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ ಮಾಡಿದೆ. ಸಿನೆಮಾ ಮಂದಿರ, ಮಾಲ್, ಮೆಟ್ರೋ, BMTC, KSRTCಗೆ ಈ ಕುರಿತ ಸೂಚನೆ ನೀಡಲು ಪಾಲಿಕೆ ಇಚ್ಛಿಸಿದೆ. ಆದೇಶ ಉಲ್ಲಂಘನೆ ಮಾಡಿದ್ರೆ ಸಂಬಂಧಪಟ್ಟ ಆಡಳಿತ ಮಂಡಳಿ ವಿರುದ್ಧ ಕ್ರಮ ತೆಗೆದುಕೊಳ್ಳಲು ನಿರ್ಧರಿಸಿದೆ.