ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್. 24 : ನಗರದ ಪ್ರತಿಷ್ಠಿತ ಹೋಟೆಲ್ ದುರ್ಗದ ಸಿರಿಯಲ್ಲಿ ಡಿ.31ರಂದು ರಾತ್ರಿ 9:30 ರ ವೇಳೆಗೆ ಸ್ಟ್ಯಾಂಡಪ್ ಕಾಮಿಡಿ ಶೋ ಹಮ್ಮಿಕೊಳ್ಳಲಾಗಿದೆ.
ಹೊಸವರ್ಷವನ್ನು ಅದ್ದೂರಿಯಾಗಿ ಸ್ವಾಗತಿಸುವ ಹಿನ್ನೆಲೆಯಲ್ಲಿ ಅಂದಿನ ದಿನದಂದು ವಿಜೃಂಭಣೆಯಿಂದ ಆಚರಿಸಲು ಈ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಅಂದಿನ ಕಾರ್ಯಕ್ರಮಗಳು :
ಡಿಜೆ ನೈಟ್ಸ್, ಸ್ಟ್ಯಾಂಡಪ್ ಕಾಮಿಡಿ ಶೋ,
ಲೈವ್ ಮ್ಯೂಸಿಕ್,
ಡ್ಯಾನ್ಸ್ ಫ್ಲೋರ್,
ಫೈರ್ ವರ್ಕಿಂಗ್ ಜೊತೆಗೆ ಅನಿಯಮಿತವಾಗಿ ವೆಜ್ ಮತ್ತು ನಾನ್ವೆಜ್ ಊಟದ ವ್ಯವಸ್ಥೆ ಕೂಡಾ ಇರುತ್ತದೆ. ಹೊಸ ವರ್ಷವನ್ನು ವಿಶೇಷ ಹಾಗೂ ಸಂಭ್ರಮದಿಂದ ಆಚರಿಸುವ ಮೂಲಕ ಸ್ಮರಣೀಯಗೊಳಿಸುವ ಪ್ರಯತ್ನ ಇದಾಗಿದೆ. ಒಬ್ಬರಿಗೆ ಪ್ರವೇಶ ಶುಲ್ಕ ರೂ. 1499/- ಆಗಿರುತ್ತದೆ. ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ 9845938375 ಸಂಪರ್ಕಿಸಬಹುದಾಗಿದೆ.