Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಮತ್ತೊಂದು ಚಿನ್ನದ ಕೇಸ್ ದಾಖಲು : ಡಿಕೆ ಸುರೇಶ್ ಧ್ವನಿಯಲ್ಲಿ ಮಾತಾಡಿದರಾ ನಟ ಧರ್ಮ.. 9 ಕೋಟಿ ವಂಚಿಸಿದ ಐಶ್ವರ್ಯಾ..!

Facebook
Twitter
Telegram
WhatsApp

ಬೆಂಗಳೂರು: ಗೋಲ್ಡ್ ರೇಟ್ ದಿನೇ ದಿನೇ ಜಾಸ್ತಿ ಆಗ್ತಾ ಇರೋದಕ್ಕೋ ಏನೋ ಚಿನ್ನದ ಮೇಲೆಯೇ ವಂಚನೆ ಕೇಸುಗಳು ದಾಖಲಾಗುತ್ತಿವೆ. ಇತ್ತೀಚೆಗೆ ವರ್ತೂರು ಪ್ರಕಾಶ್ ಅವರ ಆಪ್ತೆಯಿಂದ ಕೋಟಿ ಕೋಟಿ ಚಿನ್ನದ ವ್ಯಾಪಾರಿಗೆ ವಂಚನೆ ಕೇಸ್ ಬೆನ್ನಲ್ಲೇ ಇದೀಗ ಡಿಕೆ ಸುರೇಶ್ ತಂಗಿ ಅಂತ ಹೇಳಿಕೊಂಡು ಕೋಟಿ ಕೋಟಿ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ‌.

ಬೆಂಗಳೂರಿನ ಚಂದ್ರಾ ಲೇಔಟ್ ನಲ್ಲಿ ವಾರಾಹಿ ಎಂಬ ಚಿನ್ನದ ಮಳಿಗೆ ಇದೆ. ವನಿತಾ ಐತಾಳ್ ಎಂಬುವವರು ಇದರ ಮಾಲೀಕರು. ಈ ಜ್ಯುವೆಲ್ಲರಿ ಶಾಪ್ ಗೆ ಐಶ್ಚರ್ಯ ಗೌಡ ಅಲಿಯಾಸ್ ನವ್ಯಶ್ರೀ ಎಂಬುವವರು 9 ಕೋಟಿ 82 ಲಕ್ಷ ವಂಚನೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಐಶ್ಚರ್ಯಾ, ತಾನು ಡಿಕೆ ಸುರೇಶ್ ತಂಗಿ ಎಂದು ನಂಬಿಸಿದ್ದಾರೆ.

ಈ ಸಂಬಂಧ ಐಶ್ವರ್ಯಾ ಹಾಗೂ ನಟ ಧರ್ಮ ಅವರ ವಿರುದ್ಧ ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಕಳೆದ 2023ರಿಂದ 2024ರ ಏಪ್ರಿಲ್ ವರೆಗೂ ಐಶ್ಚರ್ಯಾ ಹಂತ ಹಂತವಾಗಿ ಚಿನ್ನವನ್ನು ಪಡೆದಿದ್ದಾರೆ. ಹಣ ಕೇಳಿದರೆ ಡಿಕೆ ಸುರೇಶ್ ಅವರಿಂದ ಕರೆ ಮಾಡಿಸಿ ಕಾಲಾವಕಾಶ ಕೋರಿದ್ದಾರೆ. ಒಂಭತ್ತು ಕೋಟಿ ಮೌಲ್ಯದ ಚಿನ್ನ ಖರೀದಿ ಮಾಡಿ ವಂಚನೆ ಮಾಡಲಾಗಿದೆ ಎಂದು ಎಫ್ಐಆರ್ ನಲ್ಲಿ ದಾಖಲಿಸಲಾಗಿದೆ.

ಹಾಗೇ ಡಿಕೆ ಸುರೇಶ್ ಅವರ ಧ್ವನಿಯಲ್ಲಿ ನಟ ಧರ್ಮ ಅವರಿಂದ ಕರೆ ಮಾಡಿಸಲಾಗಿದೆ. ಧರ್ಮ ಎನ್ನುವವರು ಕೊಲೆ ಮಾಡಿಸೋದಾಗಿ ಬೆದರಿಕೆ ಹಾಕಿದ್ದಾರೆಂದು ಎಫ್ಐಆರ್ ನಲ್ಲಿ ದಾಖಲಿಸಿದ್ದು, ಐಶ್ವರ್ಯಾ ಗೌಡ, ಪತಿ ಹರೀಶ್ ಕೆ.ಎನ್ ಹಾಗೂ ಸಿನಿಮಾ ನಟ ಧರ್ಮ ವಿರುದ್ಧ ಎಫ್ಐಆರ್ ದಾಖಲಾಗಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಸಾರ್ವಜನಿಕರ ಗಮನಕ್ಕೆ : ಹೊಸದುರ್ಗದಲ್ಲಿ ಡಿಸೆಂಬರ್ 30 ರಂದು ನಾಣ್ಯಗಳು ಹಾಗೂ ನೋಟ್ ಎಕ್ಸ್‌ಚೇಂಜ್ ಮೇಳ

  ಸುದ್ದಿಒನ್, ಹೊಸದುರ್ಗ, ಡಿಸೆಂಬರ್. 25 : ಚಿತ್ರದುರ್ಗದ ಕರ್ನಾಟಕ ಗ್ರಾಮೀಣ ಬ್ಯಾಂಕ್, ಐ.ಯು.ಡಿ.ಪಿ. ಲೇಔಟ್, ಕರೆನ್ಸಿ ಚೆಸ್ಟ್ ಶಾಖೆ ವತಿಯಿಂದ ಡಿಸೆಂಬರ್ 30 ರಂದು ಬೆಳಿಗ್ಗೆ 11:00 ರಿಂದ ಸಂಜೆ 04:00 ಗಂಟೆಯವರೆಗೆ

ಸುದೀಪ್ ‘ಮ್ಯಾಕ್ಸ್’ ಅಬ್ಬರ : ಫ್ಯಾನ್ಸ್ ಫುಲ್ ಖುಷಿ..!

ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ಮ್ಯಾಕ್ಸ್ ಸಿ‌ನಿಮಾ ಇಂದು ಎಲ್ಲಾ ಭಾಷೆಯಲ್ಲೂ ರಿಲೀಸ್ ಆಗಿದೆ. ಸುಮಾರು ಎರಡೂವರೆ ವರ್ಷಗಳ ಬಳಿಕ ಸುದೀಪ್ ಬೆಳ್ಳಿ ತೆರೆ ಮೇಲೆ ಕಾಣಿಸಿಕೊಂಡಿದ್ದಾರೆ. ಬೆಳಗ್ಗೆ ಏಳು ಗಂಟೆಯಿಂದಾನೇ ಶೋ ಶುರುವಾಗಿದೆ.

ಹಿರಿಯೂರು | ಶಿಕ್ಷಕ ಅಮಾನತು

ಸುದ್ದಿಒನ್, ಹಿರಿಯೂರು, ಡಿಸೆಂಬರ್. 25 : ತಾಲೂಕಿನ ಬಬ್ಬೂರು ಫಾರಂನ ಸರ್ಕಾರಿ ಶಾಲೆಯ ಶಿಕ್ಷಕ ಬಿ. ರಮೇಶ್ ಅವರನ್ನು ಅಮಾನತು ಮಾಡಿ ಕ್ಷೇತ್ರ ಶಿಕ್ಷಣಾಧಿಕಾರಿ ಸಿಎಂ. ತಿಪ್ಪೇಸ್ವಾಮಿ ಆದೇಶ ಹೊರಡಿಸಿದ್ದಾರೆ. ಶಾಲೆಯಲ್ಲಿ 4 ನೇ

error: Content is protected !!