ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳೆಗೆರೆ, ಚಳ್ಳಕೆರೆ, ಮೊ: 84314 13188
ಸುದ್ದಿಒನ್, ಚಳ್ಳಕೆರೆ, ಡಿಸೆಂಬರ್. 24 : ನಿಲುಗಡೆಗೆ ಅನುಮತಿ ಇದ್ದರೂ KSRTC ಬಸ್ ನಿಲ್ಲಿಸದೆ ಇದ್ದ ಕಾರಣ ಸಾಣಿಕೆರೆ ಗ್ರಾಮಸ್ಥರು ಕೆ ಎಸ್ ಆರ್ ಟಿಸಿ ಬಸ್ ತಡೆದು ಪ್ರತಿಭಟನೆ ನಡೆಸಿದ್ದಾರೆ.
ಸಾಣಿಕೆರೆ ಗ್ರಾಮದಲ್ಲಿ ಹಾದು ಹೋಗಿರುವ ರಾಷ್ಟೀಯ ಹೆದ್ದಾರಿ 150 ಎ ರಲ್ಲಿ ಬಸ್ಸಿಗೆ ಅಡ್ಡ ಹಾಕಿ ಸಾಣಿಕೆರೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಗ್ರಾಮಕ್ಕೆ ಬರುವ ಸರ್ವಿಸ್ ರಸ್ತೆ ಇದ್ದರೂ ಹೈವೆಯ ಪ್ಲೈಓವರ್ ಮೇಲೆಯೇ ಬಸ್ಸುಗಳ ಸಂಚಾರ ಮಾಡುತ್ತಿರುವುದನ್ನ ವಿರೋಧಿಸಿದ್ದಾರೆ
ಸರ್ವಿಸ್ ರಸ್ತೆ ಮೂಲಕ ಗ್ರಾಮಕ್ಕೆ ಬಸ್ ಬಾರದೆ ವಿದ್ಯಾರ್ಥಿಗಳಿಗೆ ಕಾಲೇಜುಗಳಿಗೆ ಹೊಇಗಲು ತೊಂದರೆ ಯಾಗುತ್ತದೆ ಎನ್ನುವ ಹಿನ್ನೆಲೆಯಲ್ಲಿ ಸಾಣಿಕೆರೆ ಗ್ರಾಮಸ್ಥರಿಂದ ಬಸ್ಸಿಗೆ ತಡೆ ಹಾಕಿದ್ದಾರೆ.
ಹಲವು ಭಾರಿ ಬಸ್ ನಿಲುಗಡೆ ಕೋರಿ ಇಲ್ಲಿನ ಜನರು ಮನವಿ ಸಲ್ಲಿಸಿದ್ದರು. ಆದರೆ ಗ್ರಾಮದ ವಿದ್ಯಾರ್ಥಿಗಳು, ಜನರ ಸಮಸ್ಯೆ ಆಲಿಸದೆ ನಿರ್ಲಕ್ಷಕ್ಕೆ ಆಕ್ರೋಶ ವ್ಯಕ್ತವಾಗಿದೆ. ಪ್ರತಿನಿತ್ಯ ಬಸ್ಸುಗಳನ್ನ ನಿಲ್ಲಿಸಿ ಮುಂದೆ ತೆರಳಬೇಕು ಎಂದು ಆಗ್ರಹಿಸಿದ್ದಾರೆ. ಬಸ್ ನಿಲ್ಲಿಸಲು KSRTC ಅಧಿಕಾರಿಗಳಿಗೆ ಗ್ರಾಮಸ್ಥರ ಒತ್ತಾಯಿಸಿದ್ದಾರೆ.