ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ, ಡಿ. 21 : ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಇತ್ತಿಚೆಗೆ 39ನೇ ಟ್ವೆಕಾಂಡೋ ರಾಜ್ಯ ಮಟ್ಟದ ಸಬ್ ಜೂನಿಯರ್ ಜೂನಿಯರ್ ಮತ್ತು ಸೀನಿಯರ್ ಪಂದ್ಯಾವಳಿಗಳು ನಡೆದವು.
ಇದರಲ್ಲಿ ಭಾಗವಹಿಸಿದ್ದ ಚಿತ್ರದುರ್ಗದ ಕ್ರೀಡಾಪಟುಗಳು, 11 ಬಂಗಾರ, 15 ಬೆಳ್ಳಿ ಹಾಗೂ 05 ಕಂಚಿನ ಪದಕಗಳನ್ನು ಮುಡಿಗೇರಿಸಿದ್ದಾರೆ.
ಮಕ್ಕಳನ್ನು ಉತ್ತಮವಾಗಿ ತರಬೇತು ಮಾಡಿ ಅವರನ್ನು ಪಂದ್ಯಾವಳಿಗೆ ಕರೆದುಕೊಂಡು ಹೋದ ತರಬೇತಿದಾರರಾದ ಎಂ.ಸುನೀತ ಪ್ರವೀಣ್ ಕುಮಾರ್ ಹಾಗೂ ಎಂ.ಅನಿತ ಮಹಾಂತೇಶ್ ಮತ್ತು ಮಕ್ಕಳನ್ನು ಟೈಕ್ವೊಂಡೋ ಕಲಿಯಲು ಸಹಕಾರ ನೀಡಿದ ಪೋಷಕರಿಗೆ ಅಭೀನಂದನೆಯನ್ನು ಸಲ್ಲಿಸಿದ್ದಾರೆ.