Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಚಿತ್ರದುರ್ಗ | ಮೂಲಭೂತ ಸೌಲಭ್ಯಗಳಿಗೆ ಒತ್ತಾಯಿಸಿ ಅಲೆಮಾರಿ ಬುಡ್ಗ ಜಂಗಮರ ಪ್ರತಿಭಟನೆ

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್. 21 : ಮೂಲಭೂತ ಸೌಲಭ್ಯಗಳಿಗೆ ಒತ್ತಾಯಿಸಿ ಅಲೆಮಾರಿ ಬುಡ್ಗ ಜಂಗಮರು ಜಿಲ್ಲಾಧಿಕಾರಿ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿದರು.

ಪ್ರವಾಸಿ ಮಂದಿರದಿಂದ ಮೆರವಣಿಗೆ ಮೂಲಕ ಆಗಮಿಸಿದ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿ ಸಹಾಯಕರಿಗೆ ಮನವಿ ಸಲ್ಲಿಸಿ ಮೂಲಸೌಲಭ್ಯಗಳನ್ನು ಕಲ್ಪಿಸಬೇಕೆಂದು ಆಗ್ರಹಿಸಿದರು.
ನಗರ ಹಾಗೂ ಸುತ್ತಮುತ್ತಲಿನ ಬಯಲು ಪ್ರದೇಶಗಳಲ್ಲಿ ಟೆಂಟ್‍ಗಳನ್ನು ನಿರ್ಮಿಸಿಕೊಂಡು ಮಳೆ, ಚಳಿ-ಗಾಳಿಯನ್ನು ಲೆಕ್ಕಿಸದೆ ಜೀವಿಸುತ್ತಿರುವ ಅಲೆಮಾರಿ ಬುಡ್ಗ ಜಂಗಮರು ಮೂಲಭೂತ ಸೌಲಭ್ಯಗಳಾದ ರಸ್ತೆ, ನೀರು, ದೀಪ, ಚರಂಡಿ ವ್ಯವಸ್ಥೆಯಿಂದ ವಂಚಿತರಾಗಿದ್ದಾರೆ. ದಾವಣಗೆರೆ ರಸ್ತೆಯಲ್ಲಿರುವ ಕಾಪ್ರಾ ಪೆಟ್ರೋಲ್ ಬಂಕ್ ಸಮೀಪ ಹಲವು ದಶಕಗಳಿಂದ ಬುಡ್ಗ ಜಂಗಮರು ಟೆಂಟ್‍ಗಳಲ್ಲಿ ಜೀವನ ಸಾಗಿಸುತ್ತಿದ್ದು, ಕತ್ತಲೆಯಾಗಿರುವುದರಿಂದ ರಾತ್ರಿ ವೇಳೆಯಲ್ಲಿ ವಿಷ ಜಂತುಗಳಿಂದ ಕಚ್ಚಿಸಿಕೊಂಡಿರುವುದುಂಟು. ಕರಡಿ ಹಾವಳಿಯಿಂದಲೂ ಹೆದರುತ್ತಿದ್ದಾರೆ. ಜಿಲ್ಲಾಡಳಿತ ಇತ್ತ ಗಮನಹರಿಸಿ ಮೂಲಭೂತ ಸೌಲಭ್ಯಗಳನ್ನು ಒದಗಿಸುವಂತೆ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಧಮ್ಮ ಸಾಂಸ್ಕøತಿಕ ಕೇಂದ್ರ ಆರ್.ವಿಶ್ವಸಾಗರ್, ಭ್ರಷ್ಠಾಚಾರ ವಿರೋಧಿ ಆಂದೋಲನ ಜಿಲ್ಲಾಧ್ಯಕ್ಷ ಹನುಮಂತಪ್ಪ ದುರ್ಗ ಇವರುಗಳು ಒತ್ತಾಯಿಸಿದರು.

ಕರ್ನಾಟಕ ಶಾಂತಿ ಮತ್ತು ಸೌಹಾರ್ಧ ವೇದಿಕೆ ಅಧ್ಯಕ್ಷ ನರೇನಹಳ್ಳಿ ಅರುಣ್‍ಕುಮಾರ್, ಜಿಲ್ಲಾ ಅಲೆಮಾರಿ ಬುಡ್ಗ ಜಂಗಮ ಒಕ್ಕೂಟದ ಜಿಲ್ಲಾಧ್ಯಕ್ಷ ವಸಂತಕುಮಾರ್, ಕೆ.ಎನ್.ನಾಗರಾಜ, ವೀರೇಶ್, ವಿ.ಮಾರಪ್ಪ, ವಸಂತ, ಸುಜಾತಮ ಸುಂಕಮ್ಮ, ವಿಜಯಮ್ಮ ಇನ್ನು ಅನೇಕರು ಪ್ರತಿಭಟನೆಯಲ್ಲಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ವಿಶೇಷ ವರದಿ : ಮೂರನೇ ಬಾರಿಗೆ ಕೋಡಿ ಬೀಳಲಿರುವ ವಿವಿಸಾಗರ : ಕಣ್ತುಂಬಿಕೊಳ್ಳಲು ಕಾಯುತ್ತಿರುವ ಜನಸಾಗರ

ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್. 22 : ಜಿಲ್ಲೆಯ ಏಕೈಕ ಜೀವನಾಡಿ ವಾಣಿ ವಿಲಾಸ ಸಾಗರ ಜಲಾಶಯ ಮತ್ತೊಮ್ಮೆ ಮೈದುಂಬಿ ಕೋಡಿಬೀಳಲು ದಿನಗಣನೆ ಆರಂಭವಾಗಿದ್ದು, ಇನ್ನು ಒಂದು ಅಡಿಗಿಂತಲೂ ಕಡಿಮೆ ನೀರು ಬರಬೇಕಿದೆ. ಬಹುತೇಕ ಜನವರಿ

ಹುರುಳಿಕಾಳು : ಆರೋಗ್ಯ ಪ್ರಯೋಜನಗಳು

  ಸುದ್ದಿಒನ್ : ಹುರುಳಿಯನ್ನು ನಿಯಮಿತವಾಗಿ ಸೇವಿಸುವುದರಿಂದ ತೂಕ ನಷ್ಟವಾಗುತ್ತದೆ. ಮೆಂತ್ಯದಲ್ಲಿರುವ ಫೈಬರ್ ಹೃದಯದ ಆರೋಗ್ಯಕ್ಕೆ ಒಳ್ಳೆಯದು ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ. ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಈ ರಾಶಿಯವರಿಗೆ ಧನಪ್ರಾಪ್ತಿ, ವಿದೇಶ ಪ್ರಯಾಣ, ಕೆಲಸದ ಯೋಗ, ಮದುವೆ ಯೋಗ ಕೂಡಿ ಬರಲಿದೆ.

ಈ ರಾಶಿಯವರಿಗೆ ಧನಪ್ರಾಪ್ತಿ, ವಿದೇಶ ಪ್ರಯಾಣ, ಕೆಲಸದ ಯೋಗ, ಮದುವೆ ಯೋಗ ಕೂಡಿ ಬರಲಿದೆ. ಭಾನುವಾರ-ಡಿಸೆಂಬರ್-22,2024 ಸೂರ್ಯೋದಯ: 06:46, ಸೂರ್ಯಾಸ್: 05:43 ಶಾಲಿವಾಹನ ಶಕೆ -1946 ಸಂವತ್-2080 ಕ್ರೋಧಿನಾಮ ಸಂವತ್ಸರ, ದಕ್ಷಿಣ ಅಯಣ, ಶುಕ್ಲ

error: Content is protected !!