Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಚಾರ್ಜ್ ಶೀಟ್ ನಲ್ಲಿ ಅನುಶ್ರೀ ಬಗ್ಗೆ ಹೇಳಿಕೆ : ಇದೀಗ ನಾನ್ ಹೇಳೆ ಇಲ್ಲ ಎಂದ ಕಿಶೋರ್..!

Facebook
Twitter
Telegram
WhatsApp

ಮಂಗಳೂರು: ಸ್ಯಾಂಡಲ್ ವುಡ್ ಡ್ರಗ್ ಕೇಸ್ ಗೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರು ಸಲ್ಲಿಸಿದ್ದ ಚಾರ್ಜ್ ಶೀಟ್ ನಲ್ಲಿ ಅನುಶ್ರಿ ಹೆಸರು ಉಲ್ಲೇಖವಾಗಿತ್ತು. ಡ್ರಗ್ ಪೆಡ್ಲರ್ ಕಿಶೋರ್ ಶೆಟ್ಟಿ ಹೇಳಿಕೆ ಆಧರಿಸಿ ಅನುಶ್ರೀ ಹೆಸರು ಉಲ್ಲೇಖ ಮಾಡಲಾಗಿತ್ತು.

ಅನುಶ್ರೀ ಕೂಡ ಡ್ರಗ್ಸ್ ಸೇವನೆ ಮಾಡ್ತಾ ಇದ್ರು. ಜೊತೆಗೆ ಆಕೆ ಮಾರಾಟವನ್ನು ಮಾಡ್ತಾ ಇದ್ಲು. ಡ್ರಗ್ಸ್ ಸೇವಿಸಿದ್ರೆ ಎನರ್ಜಿ ಹೆಚ್ಚು ಸಮಯ ಇರ್ತಾ ಇತ್ತು ಅಂತ ಆಕೆಯೇ ಹೇಳ್ತಾ ಇದ್ಲು. ಊಟಕ್ಕೂ ಮುನ್ನ ಡ್ರಗ್ಸ್ ಸೇವನೆ ಮಾಡ್ತಾ ಇದ್ರು ಅಂತ ಕಿಶೋರ್ ಹೇಳಿಕೆ ನೀಡಿರುವ ರೀತಿ ಚಾರ್ಜ್ ಶೀಟ್ ನಲ್ಲಿ ಉಲ್ಲೇಖವಾಗಿದೆ.

ಆದ್ರೆ ಕಿಶೋರ್ ಆ ಹೇಳಿಕೆಗೆ ಉಲ್ಟಾ ಹೊಡೆದಿದ್ದಾರೆ. ಅನುಶ್ರೀ ಡ್ರಗ್ಸ್ ತಂದು ಕೊಟ್ಟಿದ್ದಾರೆಂದು ಎಲ್ಲೂ ಹೇಳಿಲ್ಲ
ಪೊಲೀಸ್ರು ಸುಳ್ಳು ಸುಳ್ಳು ಚಾರ್ಜ್​​ಶೀಟ್ ಸಲ್ಲಿಸಿದ್ದಾರೆ. ಸಹಿ ಹಾಕು ಅಂತ ಪೊಲೀಸ್ರು ಹೇಳಿದ್ರು ಹಾಕಿದೆ ಅಷ್ಟೆ. ಅವರು ಏನ್ ಟೈಪ್ ಮಾಡಿಕೊಂಡಿದ್ದಾರೆಂದು ನನಗೆ ಗೊತ್ತಿಲ್ಲ. ಪೊಲೀಸರು ನನ್ನ ಹೇಳಿಕೆಯನ್ನು ಓದಲು ಕೂಡಾ ಬಿಡಲಿಲ್ಲ. ನಾನು ಎರಡು ಸಾರಿ ಡ್ರಗ್ಸ್ ತಗೊಂಡಿರೋದು ನಿಜ. ಒಮ್ಮೆ ಪಾರ್ಟಿಯಲ್ಲಿ ಡ್ರಗ್ಸ್ ಸೇವನೆ ಮಾಡಿದ್ದು ನಿಜ. ಅನುಶ್ರೀ ಅವರಿಗೂ ನಾನು ಡ್ರಗ್ಸ್ ಸೇವಿಸಿದಕ್ಕೂ ಸಂಬಂಧವಿಲ್ಲ. ಅನುಶ್ರೀ ನನಗೆ ಯಾವತ್ತೂ ಡ್ರಗ್ಸ್ ತಂದು ಕೊಟ್ಟಿಲ್ಲ . ಡ್ರಗ್ಸ್ ಸೇವಿಸಿರೋದು ನಿಜ ಆದ್ರೆ ಯಾರಿಗೂ ಮಾರಾಟ ಮಾಡಿಲ್ಲ.

2019ರಲ್ಲಿ ನಾನು ಎರಡು ಬಾರಿ ಡ್ರಗ್ಸ್ ಸೇವಸಿದ್ದೆ. ಡ್ರಗ್ಸ್ ತಗೊಂಡು ಡ್ಯಾನ್ಸ್ ಮಾಡೋದಕ್ಕೆ ಸಾಧ್ಯ ಇಲ್ಲ. ಜಾಕೀರ್ ಕಡೆಯಿಂದ ನಾನು ಡ್ರಗ್ಸ್ ತಗೆದುಕೊಳ್ತಿದ್ದೆ. ನಾನು, ಅನುಶ್ರೀ ಮತ್ತೆ ಅವರು ಯಾವತ್ತೂ ಪಾರ್ಟಿನೇ ಮಾಡಿಲ್ಲ ಎಂದಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಪ್ರಜ್ವಲ್ ರೇವಣ್ಣ ಕೇಸ್: ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಇದ್ದಾಗ ಮಾಡಿಕೊಂಡ ವಿಡಿಯೋ.. ಪ್ರಜ್ವಲ್ ಗೆ ಶಿಕ್ಷೆಯಾಗಲೇಬೇಕು : ಮೋದಿ ಒತ್ತಾಯ..!

ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋಗಳಿಗೆ ಸಂಬಂಧಿಸಿದಂತೆ ಈಗಾಗಲೇ ಎಸ್ಐಟಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಸಂಬಂಧಪಟ್ಟವರಿಗೆ ನೋಟೀಸ್ ನೀಡಿ, ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ. ಜೊತೆಗೆ ಸಂತ್ರಸ್ತೆಯರನ್ನು ಕರೆಸಿ, ಹೇಳಿಕೆಗಳನ್ನು ಪಡೆಯುತ್ತಿದ್ದಾರೆ. ಇದರ ನಡುವೆ ಪ್ರಧಾನಿ

ಸಂಜೆ ವೇಳೆಗೆ ಮಳೆಯಾಗುವ ಸಾಧ್ಯತೆ : ಬೇಗ ಬೇಗ ವೋಟ್ ಮಾಡಿ ಬಿಡಿ

ಬೆಂಗಳೂರು: ನಿನ್ನೆಯಿಂದ ಎಲ್ಲೆಡೆ ಜೋರು ಮಳೆಯಾಗುತ್ತಿದೆ. ಇಂದು ಕೂಡ ಹವಮಾನ ಇಲಾಖೆ ಮಳೆಯ ಮುನ್ಸೂಚನೆಯನ್ನು ನೀಡಿದೆ. ಸಂಜೆ ವೇಳೆಗೆ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಮಾನ ಇಲಾಖೆ ಸೂಚನೆ ನೀಡಿದೆ. ಚಾಮರಾಜನಗರ ಮತ್ತು ರಾಮನಗರದ

ಶಿಕ್ಷಕ ಎಸ್. ಶಿವಕುಮಾರ್ ನಿಧನ

    ಸುದ್ದಿಒನ್, ಚಳ್ಳಕೆರೆ, ಮೇ. 07 : ತಾಲ್ಲೂಕಿನ ತಿಮ್ಮಣ್ಣನಹಳ್ಳಿಯ  ಸಿ.ಪಿ. ಮೂಡಲಗಿರಿಯಪ್ಪ ಗ್ರಾಮಾಂತರ ಪ್ರೌಢಶಾಲೆಯಲ್ಲಿ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ಎಸ್. ಶಿವಕುಮಾರ್ (55 ವರ್ಷ) ಅವರು ಲೋ ಬಿಪಿಯಿಂದ ಸರ್ಕಾರಿ ಆಸ್ಪತ್ರೆಯಲ್ಲಿ

error: Content is protected !!