Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ಅಶ್ಲೀಲ ಪದ ಬಳಕೆ : ಸಿಟಿ ರವಿ ಅರೆಸ್ಟ್..!

Facebook
Twitter
Telegram
WhatsApp

ಬೆಳಗಾವಿ: ಇಂದು ಮಧ್ಯಾಹ್ನದಿಂದಾನೂ ಸಿಟಿ ರವಿ ಆಡಿದ್ದಾರೆ ಎನ್ನಲಾದ ಮಾತುಗಳ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ಬಳಸಿರುವ ಅಶ್ಲೀಲ ಪದಕ್ಕೆ ಎಲ್ಲರಿಂದಾನೂ ವಿರೋಧ ವ್ಯಕ್ತವಾಗಿದೆ. ಈ ಬೆನ್ನಲ್ಲೇ ಸಿಟಿ ರವಿ ಅರೆಸ್ಟ್ ಆಗಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್ ನೀಡಿದ ದೂರಿನ ಮೇರೆಗೆ ಸಿಟಿ ರವಿ ಅವರನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ.

ಎಂಎಲ್​ಸಿ ಸಿ.ಟಿ ರವಿ ವಿರುದ್ಧ ಬಿಎನ್​ಎಸ್​​​ ಆ್ಯಕ್ಟ್​​​ ಸೆಕ್ಷನ್​​ 75 ಮತ್ತು ಸೆಕ್ಷನ್​​ 79 ಅಡಿಯಲ್ಲಿ ಎಫ್​ಐಆರ್​ ದಾಖಲು ಮಾಡಲಾಗಿದೆ. ಸೆಕ್ಷನ್​​ 75 ಲೈಂಗಿಕ ದೌರ್ಜನ್ಯ ಮತ್ತು ಮಹಿಳೆಗೆ ನಿಂದನೆ ಹಾಗೂ ಸೆಕ್ಷನ್​​ 79 ಕೈ ಸನ್ನೆ ಮತ್ತು ಅಶ್ಲೀಲ ಪದ ಪ್ರಯೋಗ ಆಗಿದ್ದು, ಜಾಮೀನು ರಹಿತ ಕೇಸ್​​ ಇದಾಗಿದೆ. ಹಿರೇಬಾಗೇವಾಡಿ ಠಾಣೆ ಪೊಲೀಸ್ರು ಎಫ್​ಐಆರ್​ ಮಾಡಿದ್ದಾರೆ. ಹೀಗಾಗಿ ಸಿ.ಟಿ ರವಿ ಬಂಧನವಾಗಿದೆ.

ಇಂದು ವಿಧಾನ ಪರಿಷತ್ ಅಧಿವೇಶನದ ವೇಳೆ ಸಿಟಿ ರವಿ ಅವರು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅಶ್ಲೀಲ ಪದ ಬಳಕೆ ಮಾಡಿದ್ದಾರೆ ಎಂಬ ಆರೋಪವಿದೆ. ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ವೇ.. ಎಂಬ ಪದ ಬಳಕೆ ಮಾಡಿದ್ದಾರೆ ಎನ್ನಲಾಗಿದೆ. ಈ ಪದ ಬಳಕೆಯಿಂದ ಲಕ್ಷ್ಮೀ ಹೆಬ್ಬಾಳ್ಕರ್ ಅಧಿವೇಶನದಲ್ಲಿಯೇ ಕಣ್ಣೀರು ಹಾಕಿದ್ದಾರೆ. ಯಾವುದೇ ಹೆಣ್ಣು ಮಗುವಿಗಾಗಲೀ ಅಂಥಹ ಕೆಟ್ಟ ಪದ ಬಳಕೆ ಮಾಡಿದರೆ ಸಹಿಸುವುದಾದರೂ ಹೇಗೆ..? ಸಿಎಂ ಸಿದ್ದರಾಮಯ್ಯ ಅವರಿಂದ ಹಿಡಿದು ಉಮಾಶ್ರೀ ಸೇರಿದಂತೆ ಕಾಂಗ್ರೆಸ್ ನಾಯಕರು ಸಿಟಿ ರವಿ ನಡೆಯನ್ನು ವಿರೋಧಿಸಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಮೊಳಕೆಯೊಡೆದ ಹಾಲುಗಡ್ಡೆ ತಿಂದರೆ ವಾಂತಿ-ಬೇಧಿ ಆಗಬಹುದು ಎಚ್ಚರ..!

ಸಾಮಾನ್ಯವಾಗಿ ಆಲೂಗಡ್ಡೆಯನ್ನು ಹೆಚ್ಚು ದಿನ ಒಂದೇ ಕಡೆ ಇಟ್ಟರೆ ಮೊಳಕೆಯೊಡೆಯುವುದು ಸಹಜ. ಕೆಲವೊಮ್ಮೆ‌ ಗೃಹಿಣಿಯರು ಮೊಳಕೆ ತಾನೇ ಎಂದು ಮೊಳಕೆಯನ್ನು ಕಿತ್ತಾಕಿ ಬಳಿಕ ಅದರಲ್ಲಿ ಅಡುಗೆ ಮಾಡುತ್ತಾರೆ. ಆದರೆ ಇದರಿಂದ ಏನೆಲ್ಲಾ ಆರೋಗ್ಯ ಸಮಸ್ಯೆಗಳು

ಈ ರಾಶಿಯವರಿಗೆ ಉದ್ಯೋಗದಲ್ಲಿ ತುಂಬಾ ಅಡಚಣೆಯಿಂದ ಬೇಸರ

ಈ ರಾಶಿಯವರ ಕುಟುಂಬದಲ್ಲಿ ಬಿರುಕು, ಈ ರಾಶಿಯವರಿಗೆ ಉದ್ಯೋಗದಲ್ಲಿ ತುಂಬಾ ಅಡಚಣೆಯಿಂದ ಬೇಸರ, ಶುಕ್ರವಾರರಾಶಿ ಭವಿಷ್ಯ ಡಿಸೆಂಬರ್-20,2024 ಸೂರ್ಯೋದಯ: 06:45, ಸೂರ್ಯಾಸ್ತ : 05:42 ಶಾಲಿವಾಹನ ಶಕೆ -1946 ಸಂವತ್-2080 ಕ್ರೋಧಿನಾಮ ಸಂವತ್ಸರ, ದಕ್ಷಿಣ

ನನ್ನನ್ನ ಗಟ್ಟಿಗಿತ್ತಿ ಅಂತಿದ್ರು.. ಬಹಳ ನೋವಾಗಿದೆ: ಲಕ್ಷ್ಮೀ ಹೆಬ್ಬಾಳ್ಕರ್ ಫಸ್ಟ್ ರಿಯಾಕ್ಷನ್..!

ಬೆಳಗಾವಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅಶ್ಲೀಲ ಪದಗಳನ್ನ ಬಳಸಿದ್ದಾರೆ ಎಂಬ ಆರೋಪದ ಮೇಲೆ ಸದ್ಯಕ್ಕೆ ಬೆಳಗಾವಿ ಪೊಲೀಸರು ಸಿಟಿ ರವಿ ಅವರನ್ನ ಬಂಧಿಸಿದ್ದಾರೆ. ಈ ಸಂಬಂಧ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರತಿಕ್ರಿಯೆ ನೀಡಿದ್ದು,

error: Content is protected !!