ಸುದ್ದಿಒನ್, ದಾವಣಗೆರೆ, ಡಿಸೆಂಬರ್. 18 : ಕುಕ್ಕವಾಡ ಮತ್ತು ಶ್ಯಾಗಲೆ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ಕಾರ್ಯವನ್ನು ಹಮ್ಮಿಕೊಂಡಿರುವುದರಿಂದ ಡಿ.19 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಕುಕ್ಕವಾಡ, ಕೊಲಕುಂಟೆ, ಗಿರಿಯಾಪುರ, ಕೈದಾಳೆ, ಹದಡಿ, ಕಲಬಂಡೆ, ಲೋಕಿಕೆರೆ, ಬಲ್ಲೂರು, ಕನಗೊಂಡನಹಳ್ಳಿ, ಮತ್ತಿ, ನಾಗರಸನಹಳ್ಳಿ, ಹೂವಿನಮಡು ಗ್ರಾಮಗಳು ಹಾಗೂ ಸುತ್ತಮುತ್ತಲಿನ ಗ್ರಾಮಗಳು, ಶ್ಯಾಗಲೆ, ಕಂದ್ಗಲ್ಲು, ಕೋಡಿಹಳ್ಳಿ, ಗೋಣಿವಾಡ ಗ್ರಾಮಗಳು ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.
ಡಿ.19 ರಂದು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಸರಸ್ವತಿ ಬಡಾವಣೆ ಎ ಮತ್ತು ಬಿ ಬ್ಲಾಕ್, ಜಯನಗರ ಎ,ಬಿ& ಸಿ ಬ್ಲಾಕ್ ಭೂಮಿಕ ನಗರ, ಜಯಂತ್ ಕಾನ್ವೆಂಟ್ ಕೆಎಸ್‍ಎಸ್ ಕಾಲೇಜ್ ಮತ್ತು ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.