ಚಿನ್ನದ ದರದಲ್ಲಿ ಇನ್ನು ಹಾವು ಏಣಿ ಆಟ ಆಡುವುದು ನಿಂತಿಲ್ಲ. ಇಂದು ಚಿನ್ನದ ಬೆಲೆಯಲ್ಲಿ ಕೊಂಚ ಇಳಿಕೆಯಾಗಿದೆ. ಒಂದು ಗ್ರಾಂಗೆ ಹದಿನೈದು ರೂಪಾಯಿ ಅಷ್ಟು ಕಡಿಮೆಯಾಗಿದೆ. ಈ ಮೂಲಕ 22 ಕ್ಯಾರಟ್ ನ ಒಂದು ಗ್ರಾಂ ಚಿನ್ನದ ಬೆಲೆ 7,35 ರೂಪಾಯಿ ಆಗಿದೆ. ಬೆಳ್ಳಿ ಬೆಲೆಯಲ್ಲೂ ಇಳಿಕೆಯಾಗಿದ್ದು ಗ್ರಾಂಗೆ 50 ಪೈಸೆಯಷ್ಟು ಕಡಿಮೆಯಾಗಿದೆ.
ಇನ್ನು ಅಪರಂಜಿ ಚಿನ್ನ ಅಂದ್ರೆ 24 ಕ್ಯಾರಟ್ ಚಿನ್ನ ಒಂದು ಗ್ರಾಂಗೆ 7,784 ರೂಪಾಯಿ ಇದೆ. ಭಾರತದಲ್ಲಿ ಹತ್ತು ಗ್ರಾಂ 22 ಕ್ಯಾರಟ್ ಚಿನ್ನ ಸದ್ಯಕ್ಕೆ 71,350 ರೂಪಾಯಿ ಇದೆ. ಬೆಳ್ಳಿ ನೂರು ಗ್ರಾಂಗೆ 9,250 ರೂಪಾಯಿ ಇದೆ. ಉಳಿದಂತೆ ಬೇರೆ ಬೇರೆ ನಗರದಲ್ಲಿ ಚಿನ್ನದ ದರ ಹೇಗಿದೆ ಎಂಬುದನ್ನು ನೋಡೋಣಾ.
ಬೆಂಗಳೂರು, ಚೆನ್ನೈ, ಮುಂಬಯು, ಕೊಲ್ಕತ್ತಾ, ಕೇರಳ, ಭುವನೇಶ್ವರ ನಗರದಲ್ಲಿ ಹತ್ತು ಗ್ರಾಂನ 22 ಕ್ಯಾರಟ್ ಗೆ 71,350 ರೂಪಾಯಿ ಇದ್ರೆ, ದೆಹಲಿ, ಜೈಪುರ, ಲಕ್ನೋದಲ್ಲಿ ಹತ್ತು ಗ್ರಾಂಗೆ 71,500 ಎಊಪಾತಿ ಆಗಿದೆ. ಉಳಿದಂತೆ ವಿದೇಶಗಳಲ್ಲಿ ಚಿನ್ನದ ಬೆಲೆ ಕಡಿಮೆ ಇದೆ. ಮಲೇಷ್ಯಾದಲ್ಲಿ 69 ಸಾವಿರ ಇದ್ರೆ ದುಬೈನಲ್ಲಿ 68,380 ರೂಪಾಯಿ ಇದೆ. ಅಮೆರಿಕಾದಲ್ಲಿ 66,250 ರೂಪಾಯಿ ಇದೆ. ಬೆಳ್ಳಿ ಬೆಲೆಯೂ ಬೇರೆ ಬೇರೆ ನಗರದಲ್ಲಿ ವ್ಯತ್ಯಾಸದ ಬೆಲೆ ತೋರಿಸುತ್ತಿದೆ. ಬೆಂಗಳೂರು, ಮುಂಬೈ, ದೆಹಲಿ, ಕೋಲ್ಕತಾ, ಅಹ್ಮದಾಬಾದ್, ಜೈಪುರದಲ್ಲಿ ನೂರು ಗ್ರಾಂ ಬೆಳ್ಳಿಗೆ 9,250 ರೂಪಾಯಿ ಇದೆ. ಉಳಿದಂತೆ ಚೆನ್ನೈ, ಕೇರಳದಲ್ಲಿ ನೂರು ಗ್ರಾಂ ಬೆಳ್ಳಿಗೆ 10 ಸಾವಿರ ಆಗಿದೆ.