ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ. ಡಿ. 14 : ಶ್ರೀ ಪಾರ್ಶ್ವನಾಥ ವಿದ್ಯಾ ಸಂಸ್ಥೆಯಲ್ಲಿ ಡಿ.14ರ ಶನಿವಾರ ಮಕ್ಕಳಲ್ಲಿ ಸಂತೆಯ ಕಲ್ಪನೆ ವ್ಯವಹಾರಿಕ ಜ್ಞಾನವನ್ನು ತಿಳಿಸುವ ಉದ್ದೇಶದಿಂದ ಮಕ್ಕಳ ಸಂತೆಯನ್ನು ಹಮ್ಮಿಕೊಳ್ಳಲಾಗಿತ್ತು.
ಮಕ್ಕಳು ವಿವಿಧ ರೀತಿಯ ತರಕಾರಿ, ಹೂ, ಹಣ್ಣು, ಸಪ್ಪು, ದಿನಸಿ ಸಾಮಾನು, ತೆಂಗಿನಕಾಯಿ ಮನೆಯಲ್ಲಿ ತಯಾರಿಸಿದ ಸಿಹಿ ತಿಂಡಿಗಳು, ಕಾಳುಗಳು, ಪಾನೀಯಗಳು ಸುಮಾರು 300 ವಿದ್ಯಾರ್ಥಿಗಳು ಪೂರ್ವ ಪಾಥಮಿಕ ತರಗತಿಯಿಂದ 9ನೇ ತರಗತಿಯ ವಿದ್ಯಾರ್ಥಿಗಳು ಮಕ್ಕಳ ಸಂತೆಯಲ್ಲಿ ಭಾಗವಹಿಸಿದ್ದರು.ಮಕ್ಕಳ ಪೋಷಕರು, ಸಾರ್ವಜನಿಕರು ಭಾಗವಹಸಿ ವಸ್ತುಗಳನ್ನು ಖರೀದಿ ಮಾಡಿ ಮಕ್ಕಳಿಗೆ ಪ್ರೋತ್ಸಹಿಸಿದರು.
ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಬಾಬುಲಾಲ್ ಜೀ ಪಟಿಯಾತ್, ಉಪಾಧ್ಯಕ್ಷರಾದ ಉತ್ತಮ್ ಚಂದ್ ಸುರಾನ,ಕಾರ್ಯದರ್ಶಿಗಳಾದಸುರೇಶ್ ಕುಮಾರ್ ಸಿಸೋಡಿಯಾ , ಹಾಗೂ ಮುಖ್ಯೋಪಾಧ್ಯಾಯರು ಶಿಕ್ಷಕರು, ಹಾಗೂ ಪೋಷಕರು ಸಹ ಭಾಗವಹಿಸಿದರು.