ಸುದ್ದಿಒನ್, ಚಿತ್ರದುರ್ಗ ಡಿ. 12 : ಹಾಲಿ ಸರ್ಕಾರಿ ನೌಕರರಾಗಿ ಮೃತಪಟ್ಟಲ್ಲಿ ಅವರ ಅಂತ್ಯಕ್ರಿಯೆಗೆ ಸಂಘದಿಂದ 5000, ಚಿತ್ರದುರ್ಗದಲ್ಲಿ ಸರ್ಕಾರಿ ನೌಕರರ ಭವನ ನಿರ್ಮಾಣ, ಸರ್ಕಾರಿ ನೌಕರರಿಗೆ ಜ್ಯೋತಿ ಸಂಜೀವಿನಿ ಯೋಜನೆ ಜಾರಿ, ಎನ್.ಪಿ.ಎಸ್ ರದ್ದು ಹಳೇ ಪದ್ದತಿಯಂತೆ ಪಿಂಚಿಣಿ ಜಾರಿ ಹಾಗೂ ರಾಜ್ಯ ಸರ್ಕಾರಿ ನೌಕರರಿಗೂ ಸಹ ಕೇಂದ್ರ ಮಾದರಿ ವೇತನ ನೀಡುವಂತೆ ಸರ್ಕಾರಕ್ಕೆ ಒತ್ತಾಯ ಮಾಡುವ ಸಲುವಾಗಿ ರಾಜ್ಯ ಸಂಘದ ಜೊತೆಯಲ್ಲಿ ಹೋರಾಟವನ್ನು ಮಾಡಲಾಗುವುದೆಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಮಾಲತೇಶ್ ಮುದ್ದಜ್ಜಿ ತಿಳಿಸಿದರು.
ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, 2024 ರಿಂದ 2029ರವರೆಗೆ ನಮ್ಮ ನೂತನ ಪದಾಧಿಕಾರಿಗಳು ಕಾರ್ಯ ನಿರ್ವಹಿಸಲಿದ್ದು, ಇದರಲ್ಲಿ ಸಾಧ್ಯವಾದಷ್ಟು ಸರ್ಕಾರಿ ನೌಕರರಿಗೆ ಅನುಕೂಲವಾಗುವಂತೆ ಕಾರ್ಯವನ್ನು ಮಾಡಲಾಗುವುದು. ಈ ಹಿನ್ನಲೆಯಲ್ಲಿ ಈ ಹಿಂದಿನ ಕಾರ್ಯಕಾರಿ ಸಮಿತಿಯು ಚಿತ್ರದುರ್ಗ ತಾಲ್ಲೂಕಿನ ಸರ್ಕಾರಿ ನೌಕರರು ಮೃತಪಟ್ಟಲ್ಲಿ ಅವರ ಅಂತ್ಯ ಸಂಸ್ಕಾರಕ್ಕೆ 2000 ರೂ.ಗಳನ್ನು ನೀಡಲಾಗುತ್ತಿತ್ತು, ನಮ್ಮ ಮೊದಲನೇ ಸಭೆಯಲ್ಲಿ ಈ ಮೊತ್ತವನ್ನು 5000 ರೂ.ಗಳನ್ನು ನೀಡಲು ತೀರ್ಮಾನ ಮಾಡಲಾಯಿತು. ಇದರೊಂದಿಗೆ ಸರ್ಕಾರಿ ನೌಕರರ ಭವನ ನಿರ್ಮಾಣಕ್ಕೆ ಸೂಕ್ತವಾದ ಜಾಗವನ್ನು ನೋಡಲಾಗುತ್ತಿದೆ ಮಂಜೂರಾದ ತಕ್ಷಣ ಸಮುದಾಯ ಭವನÀವನ್ನು ನಿರ್ಮಾಣ ಮಾಡಲು ಕಾರ್ಯಕಾರಿ ಸಮಿತಿ ಮುಂದಾಗಲಿದೆ ಎಂದರು.
ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರದಿಂದ ಜ್ಯೋತಿ ಸಂಜೀವಿನಿ ಯೋಜನೆಯನ್ನು ಜಾರಿ ಮಾಡಲು ಮುಂದಾಗಿದೆ, ಇದನ್ನು ಜನವರಿಯಲ್ಲಿ ಜಾರಿ ಮಾಡಲು ಸರ್ಕಾರ ಮುಂದಾಗಿದ್ದು, ಇದನ್ನು ಸಾಧ್ಯವಾದಷ್ಟು ಶೀಘ್ರವಾಗಿ ಜಾರಿ ಮಾಡುವಂತೆ ಸರ್ಕಾರವನ್ನು ರಾಜ್ಯ ಸಮಿತಿಯ ಸಹಯೋಗದೊಂದಿಗೆ ಒತ್ತಾಯ ಮಾಡಲಾಗುವುದು. 2006ರ ನಂತರದ ನೇಮಕಾತಿಯವರಿಗೆ ಪಿಂಚಣಿಯನ್ನು ರದ್ದು ಮಾಡಿರುವ ಸರ್ಕಾರದ ಎನ್.ಪಿ.ಎಸ್‍ನ್ನು ರದ್ದು ಮಾಡಿ ಹಳೇಯ ಪದ್ದತಿಯ ಪಿಂಚಿಣಿಯ ವ್ಯವಸ್ಥೆಯನ್ನು ಜಾರಿ ಮಾಡುವಂತೆ ಸರ್ಕಾರವನ್ನು ಆಗ್ರಹಿಸಲಾಗುವುದು ಎಂದು ತಿಳಿಸಿದರು.
ರಾಜ್ಯ ಸರ್ಕಾರದ ನೌಕರರಿಗೂ ಕೇಂದ್ರ ಸರ್ಕಾರದ ನೌಕರರಿಗೂ ವೇತನ ತಾರತಮ್ಯ ಇದೆ, ಇದನ್ನು ಹೋಗಲಾಡಿಸಲು ಸರ್ಕಾರ ಮಂದಾಗಬೇಕಿದೆ. ಕೇಂದ್ರ ಸರ್ಕಾರ ತನ್ನ ನೌಕರರಿಗೆ ಯಾವ ರೀತಿ ವೇತನವನ್ನು ನೀಡುತ್ತದ್ದೇಯೇ ಅದೇ ಮಾದರಿಯಲ್ಲಿ ರಾಜ್ಯ ಸರ್ಕಾರ ತನ್ನ ನೌಕರರಿಗೂ ಸಹಾ ವೇತನವನ್ನು ನೀಡುವಂತೆ ಹೋರಾಟವನ್ನು ಮಾಡಲಾಗುವುದು ಎಂದು ಅಧ್ಯಕ್ಷ ಮಾಲತೇಶ್ ತಿಳಿಸಿದರು.
ಈ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದ ಜಿಲ್ಲಾ ಖಂಜಾಚಿ ಮಲ್ಲಿಕಾರ್ಜನ್, ರಾಜ್ಯ ಪರಿಷತ್ ಸದಸ್ಯರಾದ ರಾಜಪ್ಪ, ಕಾರ್ಯದರ್ಶಿ ಶ್ರೀನಿವಾಸ್, ನಿರ್ದೆಶಕರಾದ ಜಗ್ಗೇಶ್ ಉಪಸ್ಥಿರಿದ್ದರು.