ವೈದ್ಯರ ನಿರ್ಲಕ್ಷ್ಯದಿಂದ ಮಗು ಜನನ : ದಂಡ ವಿಧಿಸಿದ ಕನ್ಸ್ಯೂಮರ್ ಕೋರ್ಟ್

suddionenews
1 Min Read

 

 

ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್. 06 : ಚಿತ್ರದುರ್ಗ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಜಿಲ್ಲಾ ಆಸ್ಪತ್ರೆಯ ಹಿರಿಯ ಪ್ರಸೂತಿ ತಜ್ಞ ಡಾ.ಶಿವಕುಮಾರ್.ಕೆ. ಅವರ ಸೇವಾ ನಿರ್ಲಕ್ಷ್ಯತೆಗೆ ರೂ. 55,000/- ಪರಿಹಾರವನ್ನು ದೂರುದಾರರಿಗೆ ನೀಡುವಂತೆ ಆದೇಶಿಸಿದೆ.

ಚಿತ್ರದುರ್ಗದ ಶ್ರೀಮತಿ ಲಕ್ಕಮ್ಮ ಇವರಿಗೆ ಕೈಗೊಂಡ ಸಂತಾನ ಹರಣ ಶಸ್ತ್ರಚಿಕಿತ್ಸೆ ವಿಫಲಗೊಂಡು ಮತ್ತೊಂದು 3ನೇ ಮಗುವಿಗೆ ಗರ್ಭ ಧರಿಸಿದ್ದು, ಇದು ವೈದ್ಯರ ಸೇವಾ ನಿರ್ಲಕ್ಷ್ಯತೆಯಿಂದ ಸಂತಾನ ಹರಣ ಶಸ್ತ್ರಚಿಕಿತ್ಸೆ ವಿಫಲತೆಯಿಂದ ಉಂಟಾಗಿರುವ ಸೇವಾ ನಿರ್ಲಕ್ಷ್ಯತೆ ಎಂದು
ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ತೀರ್ಪು ನೀಡಿದೆ.

ಘಟನೆ ಹಿನ್ನೆಲೆ :

ದೂರುದಾರರಾದ ಲಕ್ಷ್ಮಮ್ಮ ಅವರು ದಿನಾಂಕ:28/04/2014ರಂದು ಡಾ.ಕೆ.ಶಿವಕುಮಾರ್ ಪ್ರಸೂತಿ ತಜ್ಞರು ಜಿಲ್ಲಾ ಆಸ್ಪತ್ರೆ ಚಿತ್ರದುರ್ಗ ಮತ್ತು ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯ ಮೇಲಾಧಿಕಾರಿಗಳ ಸೇವಾ ನಿರ್ಲಕ್ಷತೆಯಿಂದ 28/04/2014ರಲ್ಲಿ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಫಲಕಾರಿಯಾಗದೆ ದೂರುದಾರರು ಗರ್ಭಧರಿಸಿ 3ನೇ ಮಗುವಿಗೆ ದಿನಾಂಕ:26/01/2020ರಂದು ಜನ್ಮ ನೀಡಿದ್ದು ಇದು ವೈದ್ಯರ ನಿರ್ಲಕ್ಷ್ಯತೆಯಿಂದ 3ನೇ ಮಗುವಿಗೆ ಕಾರಣವಾಗಿರುತ್ತದೆ.

ದೂರುದಾರರು ಎದುರುದಾರರ ವೈದ್ಯಕೀಯ ಸೇವಾ ನಿರ್ಲಕ್ಷ್ಯಕ್ಕೆ ಪರಿಹಾರ ಕೋರಿ ಚಿತ್ರಮರ್ಗ ಜಿಲ್ಲಾ ಗ್ರಾಹಕರ ಆಯೋಗದಲ್ಲಿ ದಿನಾಂಕ:17/02/2021ರಂದು ದೂರನ್ನು ದಾಖಲಿಸಿರುತ್ತಾರೆ. ಆಯೋಗವು ದೂರುದಾರರು ಹಾಜರುಪಡಿಸಿದ ದಾಖಲೆಗಳು ಮತ್ತು , ದಿನಾಂಕ : 28/04/2014 ಹರಣ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗದ ಕಾರಣ ದೂರುದಾರರು 26/01/2020ರಲ್ಲಿ 3ನೇ ಮಗುವಿಗೆ ಜನ್ಮ ನೀಡಿರುತ್ತಾರೆ ಇದು ವೈದ್ಯರ ನಿರ್ಲಕ್ಷ್ಯತೆಗೆ ಕಾರಣ ಎಂದು ಆಯೋಗವು ಅಭಿಪ್ರಾಯಪಟ್ಟು ನೊಂದ ದೂರುದಾರರಿಗೆ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಫಲಕಾರಿಯಾಗದಿರುವುದಕ್ಕೆ ಪರಿಹಾರ ರೂಪವಾಗಿ ರೂ.30,000/- ಮತ್ತು ಮಾನಸಿಕ, ದೈಹಿಕ ಹಿಂಸೆಗೆ ದೂರು ಖರ್ಚು 25,000/- ಗಳನ್ನು ಒಟ್ಟು 55,000/- ಗಳನ್ನು ಪಾವತಿಸಲು ಆದೇಶಿಸಿ ದಂಡವನ್ನು ವಿಧಿಸಿರುತ್ತದೆ. ಈ ಆದೇಶದ ದಿನಾಂಕದಿಂದ 30 ದಿನಗಳಲ್ಲಿ ಮೇಲ್ಕಂಡ ಪರಿಹಾರ ಮೊತ್ತವನ್ನು ಪಾವತಿಸುವಂತೆ  ಜಿಲ್ಲಾ ಗ್ರಾಹಕರ ಆಯೋಗದ ಅಧ್ಯಕ್ಷರಾದ ಕುಮಾರಿ ಹೆಚ್.ಎನ್. ಮೀನಾ ಮತ್ತು ಮಹಿಳಾ ಸದಸ್ಯರಾದ ಶ್ರೀಮತಿ ಬಿ.ಹೆಚ್.ಯಶೋಧರವರು ಆದೇಶ ಹೊರಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *