ಅಣ್ಣಾವ್ರು ಹೇಳಿದ್ರು ಅಭಿಮಾನಿಗಳು ದೇವ್ರು ಅಂತ.. ಸಿದ್ದರಾಮಯ್ಯರವರು ಹೇಳ್ತಿದ್ದಾರೆ ಮತದಾರರೇ ದೇವರು ಅಂತ..!

suddionenews
1 Min Read

ಹಾಸನದಲ್ಲಿ ಇಂದು ಕಾಂಗ್ರೆಸ್ ನಿಂದ ಬೃಹತ್ ಸಮಾವೇಶ ನಡೆಯುತ್ತಿದ್ದು, ಸಿಎಂ ಸಿದ್ದರಾಮಯ್ಯ ಅವರು ಭಾಷಣದ ವೇಎ ಗುಡುಗಿದ್ದಾರೆ. ಮೊದಲ ಬಾರಿಗೆ ಕಾಂಗ್ರೆಸ್ ಹಾಗೂ ಸ್ವಾಭಿಮಾನಿಗಳ ಒಕ್ಕೂಟ ಜಂಟಿ ಆಶ್ರಯದಲ್ಲಿ ಜನ ವಿಕಾಸ ಸಮಾವೇಶ ನಡೆಯುತ್ತಾ ಇದೆ. ನನ್ನ 40 ವರ್ಷಗಳ ರಾಜಕೀಯ ಜೀವನದಲ್ಲಿ ಹಾಸನ ಜಿಲ್ಲೆಯಲ್ಲಿ ಇಷ್ಟೊಂದು ದೊಡ್ಡ ಸಮಾವೇಶ ಆಗಿರಲಿಲ್ಲ. ಮೊದಲ ಬಾರಿಗೆ ಇಷ್ಟು ದೊಡ್ಡ ಸಮಾವೇಶ ಆಗಿದೆ. ಮಾಧ್ಯಮದವರು ಈಗ ಹಾಸನದಲ್ಯಾಕೆ ಸಮಾವೇಶ ಮಾಡ್ತಾ ಇದಾರೆ ಎಂದು ಚರ್ಚಿಸಿದರು. ಆದರೆ ಇದು ಸ್ವಾಭಿಮಾನಿಗಳ ಒಕ್ಕೂಟದಿಂದ ಮಾಡುತ್ತಾ ಇರುವುದು. ನಿಮಗೆಲ್ಲಾ ಒಂದು ಧನ್ಯವಾದ ಹೇಳಬೇಕಿತ್ತು. ಹೀಗಾಗಿ ಇಷ್ಟು ದೊಡ್ಡ ಸಮಾವೇಶ ನಡೆಯುತ್ತಿದೆ.

ರಾಜ್‍ಕುಮಾರ್ ಅವರು ಅಭಿಮಾನಿಗಳೇ ದೇವರು ಎಂದು ಹೇಳ್ತಾ ಇದ್ರು. ನಮಗೆ ಮತದಾರ ಬಂಧುಗಳೇ ದೇವರು ಎಂಬ ಮಾತನ್ನು ಹೇಳುವುದಕ್ಕೆ ಬಯಸುತ್ತೀನಿ. ಮೂರು ಉಪಚುನಾವಣೆಯನ್ನು ಗೆದ್ದಿದ್ದೇವೆ. ಸಂಡೂರಲ್ಲಿ ಮಾತ್ರ ನಮ್ಮ ಪಕ್ಷ ಗೆದ್ದಿತ್ತು. ಆದರೆ ಶಿಗ್ಗಾಂವಿಯಲ್ಲಿ, ಚನ್ನಪಟ್ಟಣದಲ್ಲಿ ಗೆದ್ದಿರಲಿಲ್ಲ. ಈ ಜಿಲ್ಲೆಗೆ ಸೇರಿದಂತೆ ಮಹಾನಾಯಕ, ಅವರ ಮೊಮ್ಮಗ ನಿಖಿಲ್ ಕುಮಾರ್ ಸ್ಪರ್ಧೆ ಮಾಡಿದ್ದರು. ಶಿಗ್ಗಾಂವಿಯಲ್ಲಿ ಮುಖ್ಯಮಂತ್ರಿಯಾಗಿದ್ದಂತವರ ಮಗ ಸ್ಪರ್ಧೆ ಮಾಡಿದ್ದರು. ಎರಡು ಸ್ಥಾನಗಳನ್ನು ಗೆಲ್ಲುವುದಕ್ಕೆ ನಮ್ಮ ಮತದಾರರು ಮಾಡಿದ ಆಶೀರ್ವಾದವೇ ಕಾರಣ.

 

ನಿಮಗೆ, ನಿಮ್ಮ ಪಕ್ಷದ ಅಧ್ಯಕ್ಷರಾದ ಡಿಕೆ ಶಿವಕುಮಾರ್, ಮತದಾರರಿಗೆ ಕೃತಜ್ಞತೆ ಸಲ್ಲಿಸಬೇಕು ಎಂದರು. ನಾನು ನಮಗೆ ಕೃತಜ್ಞತೆ ಸಲ್ಲಿಸೋದಲ್ಲ ಮತದಾರರಿಗೆ ಸಲ್ಲಿಸಬೇಕು ಎಂದು ಹೇಳಿದ್ದೆ. ಯಾವತ್ತು ಜೆಡಿಎಸ್ ಆಗಲಿ, ಬಿಜೆಪಿ ಆಗಲಿ ತಮ್ಮ ಸ್ವಂತ ಶಕ್ತಿ ಮೇಲೆ, ಜನರ ಆಶೀರ್ವಾದ ಪಡೆದು ಅಧಿಕಾರಕ್ಕೆ ಬಂದಿಲ್ಲ. ಕುಮಾರಸ್ವಾಮಿ ಅವರು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದು ಒಂದು ಬಿಜೆಪಿಯಿಂದ ಮತ್ತೊಂದು ಸಲ ನಮ್ಮ ಸಹಕಾರದಿಂದ ಎಂದು ಜೆಡಿಎಸ್ ಹಾಗೂ ಬಿಜೆಪಿ ವಿರುದ್ಧ ಸಮಾವೇಶದ ವೇದಿಕೆಯಲ್ಲಿ ಗುಡುಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *