ಸುದ್ದಿಒನ್, ಡಿಸೆಂಬರ್. 03 : ಫೆಂಗಸ್ ಸೈಕ್ಲೋನ್ ಕಾರಣಕ್ಕೆ ಚಿತ್ರದುರ್ಗ ಜಿಲ್ಲಾದ್ಯಂತ ಎಡೆಬಿಡದೆ ಸುರಿಯುತ್ತಿರುವ ಮಳೆ ಕಾರಣ ಜಿಲ್ಲೆಯ ಎಲ್ಲ ಅಂಗನವಾಡಿ, ಶಾಲೆಗಳು ಹಾಗೂ ಪಿಯು ಕಾಲೇಜುಗಳಿಗೆ ಮಂಗಳವಾರ ರಜೆ ಘೋಷಿಸಲಾಗಿದೆ.
ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳಿಗೆ ಮಂಗಳವಾರ ಒಂದು ದಿನದ ಮಟ್ಟಿಗೆ ರಜೆ ಘೋಷಿಸಲಾಗಿದೆ.
ಮಳೆಯಿಂದ ಮಕ್ಕಳಿಗೆ ಸಮಸ್ಯೆಯಾಗದಿರಲಿ ಎಂಬ ಕಾರಣಕ್ಕೆ ಜಿಲ್ಲಾಧಿಕಾರಿ ತುರ್ತು ಸೂಚನೆ ಮೇರೆಗೆ ಈ ಆದೇಶ ಮಾಡಲಾಗಿದೆ. ಈ ದಿನ ಪಾಠವನ್ನು ಮುಂದಿನ ಎರಡು ಶನಿವಾರ ಪೂರ್ಣ ಶಾಲೆ ನಡೆಸುವ ಮೂಲಕ ಸರಿದೂಗಿಸುವಂತೆ ಡಿಡಿಪಿಐ ಮಂಜುನಾಥ ಆದೇಶದಲ್ಲಿ ತಿಳಿಸಿದ್ದಾರೆ.