ಬೆಳಗಾವಿ: ಸದ್ಯ ಬಿಜೆಪಿಯಲ್ಲೂ ಒಂದಷ್ಟು ಒಳ ಮುನಿಸು ಜೋರಾಗಿಯೇ ಇದೆ. ಅದರಲ್ಲೂ ಯತ್ನಾಳ್ ಹಾಗೂ ವಿಜಯೇಂದ್ರ ಬಣದ ನಡುವೆ ಫೈಟ್ ಜೋರಾಗಿದೆ. ವಿಜಯೇಂದ್ರ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಬೇಕೆಂದು ಯತ್ನಾಳ್ ಬಣ ಓಡಾಡುತ್ತಿದೆ.
ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾಗಿ ಮುಂದುವರೆಯಬೇಕಾ ಬೇಡವಾ ಎಂಬ ಪ್ರಶ್ನೆಗೆ ಕುಮಾರ ಬಂಗಾರಪ್ಪ ಅವರು, ಈಗ ಏನು ಫಲಿತಾಂಶವನ್ನು ಕೊಟ್ಟಿದ್ದಾರೆ, ಮತ್ತೆ ರಾಜ್ಯದ ಈಗಿನ ಬೆಳವಣಿಗೆ ಇದೆ, ಲೋಕಸಭಾ ಚುನಾವಣೆಗೋಸ್ಕರವೇ ಒಂದು ವರ್ಷದ ಅವಧಿಗೆ ಮಾಡಲಾಗಿತ್ತು. ಈಗ ಸದಸ್ಯತ್ವ ಅಭಿಯಾನ ನಡೆಯುತ್ತಿದೆ. ಬದಲಾವಣೆ ಮಾಡಬೇಕು ಎಂದಾದರೇ ಕೇಂದ್ರವೇ ತೀರ್ಮಾನಿಸುತ್ತದೆ. ಒಂದು ವೇಳೆ ಅವರನ್ನೇ ಮುಂದುವರೆಸಬೇಕು ಅಂದ್ರೆ ಹೇಗೆ ಎಂಬುದನ್ನು ಅವರೇ ತೀರ್ಮಾನ ಮಾಡುತ್ತಾರೆ. ಯಡಿಯೂರಪ್ಪ ಅವರ ಬಗ್ಗೆ ಗೌರವವಿದೆ. ನಮ್ಮ ಪಕ್ಕದ್ದೇ ಕ್ಷೇತ್ರದವರು. ನಾನು ಹಾಗೂ ಅವರ ಮಕ್ಕಳು ಒಟ್ಟಿಗೆ ಕೆಲಸ ಮಾಡಿದ್ದೀವಿ. ಚುನಾವಣೆಯಲ್ಲಿ ರಾಘವೇಂದ್ರ ಅವರನ್ನು ಗೆಲ್ಲಿಸಿಕೊಂಡು ಬಂದಿದ್ದೀವಿ. ಆದರೆ ಅಲ್ಲೇನೋ ದೊಡ್ಡ ಗ್ಯಾಪ್ ಆಗಿದೆ ಎಂಬುದು ಎಲ್ಲರಿಗೂ ಅನ್ನಿಸಿದೆ. ನಾನು ಮಾತಾಡ್ತಾ ಇರೋದು ವೈಯಕ್ತಿಕವಾಗಿ ಅಲಗಲ ಸಂಘಟನೆಯ ದೃಷ್ಟಿಯಿಂದ ಎಂದಿದ್ದಾರೆ.
ಇದೇ ವೇಳೆ ಯತ್ನಾಳ್ ಅವರನ್ನು ಉಚ್ಛಾಟನೆ ಮಾಡಿದರೆ ಎಂಬ ಪ್ರಶ್ನೆಗೆ ಉತ್ತರಿಸಿ, ವಕ್ಫ್ ವಿಚಾರವಾಗಿ ನಮಗೆ ಎಲ್ಲಾರು ನಿಂತಿದ್ದಾರೆ. ಯತ್ನಾಳ್ ಅವರಿಗೆ ನೋಟಿಒಸ್ ಕೊಟ್ಟಿರುವುದು ಯಾವ ವಿಚಾರಕ್ಕೆ ಎಂಬ ಮಾಹಿತಿ ನನಗೆ ಇಲ್ಲ. ವಕ್ಫ್ ವಿಚಾರಕ್ಕೆ ನಾವೆಲ್ಲಾ ಯತ್ನಾಳ್ ಅವರ ಬೆನ್ನಿಗೆ ನಿಂತೆ ನಿಲ್ಲುತ್ತೀವಿ ಎಂದಿದ್ದಾರೆ. ಪಕ್ಷವನ್ಬು ಸ್ಟ್ರಾಂಗ್ ಮಾಡುವುದಕ್ಕಾಗಿ ಜೊತೆಗೆ ನಿಲ್ಲುತ್ತೇವೆ. ಯಾಕಂದ್ರೆ ಚುನಾವಣೆ ಹತ್ತಿರ ಬಂದಾಗ ಒಂದೇ ದಿನಕ್ಕೆ ಎಲ್ಲವನ್ನು ಮಾಡುವುದಕ್ಕೆ ಸಾಧ್ಯವಿಲ್ಲ ಎಂದಿದ್ದಾರೆ.