ವರದಿ : ಸುರೇಶ್ ಪಟ್ಟಣ್
ಚಿತ್ರದುರ್ಗ,(ನ.29) : ಶ್ರೀ ಸದ್ಗುರು ಕಬೀರಾನಂದ ಶ್ರೀಗಳು ಮತ್ತು ಶ್ರೀ ಸದ್ಗುರು ಕಬೀರೇಶ್ವರ ಶ್ರೀಗಳು ಅಲ್ಪಾಯಿಷಿಗಳಾದರು ಸಹಾ ತಮ್ಮ ಜೀವಿತಾವಧಿಯಲ್ಲಿಯೇ ಉತ್ತಮವಾದ ಕಾರ್ಯವನ್ನು ಮಾಡುವುದರ ಮೂಲಕ ಭಕ್ತಾಧಿಗಳ ಮನದಲ್ಲಿ ಮನೆ ಮಾಡಿದ್ದಾರೆ ಎಂದು ಶ್ರೀಗುರು ಕಬೀರಾನಂದಾಶ್ರಮದ ಪೀಠಾಧ್ಯಕ್ಷರಾದ ಶ್ರೀ ಶಿವಲಿಂಗಾನಂದ ಶ್ರೀಗಳು ತಿಳಿಸಿದರು.
ನಗರದ ಶ್ರೀ ಗುರು ಕಬೀರಾನಂದ ಆಶ್ರಮದವತಿಯಿಂದ ಭಾನುವಾರ ಸಂಜೆ ನಡೆದ ಶ್ರೀ ಸದ್ಗುರು ಕಬೀರಾನಂದ ಶ್ರೀಗಳ 64ನೇ ಹಾಗೂ ಶ್ರೀ ಸದ್ಗುರು ಕಬೀರೇಶ್ವರ ಶ್ರೀಗಳವರ 54ನೇ ಪುಣ್ಯಾರಾಧನೆ ಸಮಾರಂಭದ ಸಾನಿಧ್ಯವಹಿಸಿ ಮಾತನಾಡಿದ ಶ್ರೀಗಳು, ಹುಬ್ಬಳಿಯ ಸಿದ್ದಾರೂಢ ಮಠದಿಂದ ಚಿತ್ರದುರ್ಗಕ್ಕೆ ಆಗಮಿಸಿದ ಶ್ರೀಗಳು ಗೋಶಾಲೆಯನ್ನು ತೆರೆಯುವ ಆಶಯವನ್ನು ಹೊಂದಿದ್ದರು ಅದರಂತೆ ಗೋಶಾಲೆಯನ್ನು ತೆರೆದು ಗೋವುಗಳ ಸೇವೆಯನ್ನು ಮಾಡುವುದರ ಮೂಲಕ ಗೋಪಾಲಕರಾದರು ಎಂದರು.
ಗೋವುಗಳ ಸೇವೆಯನ್ನು ಮಾಡುವುದರ ಮೂಲಕ ಜೀವನದಲ್ಲಿ ಪ್ರಗತಿಯನ್ನು ಸಾಧಿಸಲಾಗುತ್ತಿದೆ ಆದರೆ ಅವನತಿಯನ್ನು ಹೊಂದುವುದಿಲ್ಲ, ಇದಕ್ಕೆ ಶ್ರೀಗಳು ಸಾಕ್ಷಿಯಾಗಿದ್ದಾರೆ. ತುಂಬ ಸಣ್ಣದಾಗಿದ್ದ ಈ ಆಶ್ರಮವನ್ನು ತಮ್ಮ ಜೀವಿತಾವಧಿಯಲ್ಲಿ ಸಾಧ್ಯವಾದಷ್ಟು ಪ್ರಗತಿಯನ್ನು ಸಾಧಿಸಿದ್ದಾರೆ. ಗೋವುಗಳನ್ನು ಸಾಕುವುದರ ಮೂಲಕ ಆದರ ಹಾಲನ್ನು ಉಚಿತವಾಗಿ ಹಂಚಿ ಸಾವಿರಾರು ಮಕ್ಕಳ ಬೆಳವಣಿಗೆಗೆ ಕಾರಣರಾಗಿದ್ದಾರೆ. ಕಬೀರಾನಂದ ಶ್ರೀಗಳು ಹಲವರು ಜನತೆಗೆ ಮಾರ್ಗದರ್ಶಕರಾಗಿದ್ದು, 2029ಕ್ಕೆ ಅವರು ಲಿಂಗೈಕ್ಯ ಹೊಂದಿ 100 ವರ್ಷವಾಗಲಿದೆ ಎಂದು ಶಿವಲಿಂಗಾನಂದ ಶ್ರೀಗಳು ಹೇಳಿದರು.
ಇತಿಹಾಸ ಸಂಶೋಧಕರಾದ ಬಿ.ರಾಜಶೇಖರಪ್ಪ ಮಾತನಾಡಿ, ನಮ್ಮ ದೇಶ ಹಲವಾರು ಧರ್ಮ, ದಾರ್ಶನಿಕರು, ಪಂಥಗಳುನ್ನು ಹೊಂದಿದ್ದು, ಶ್ರೀಗಳು, ಜೈನ ಮುನಿಗಳು ಹಾದು ಹೋಗಿದ್ದಾರೆ. ಇವುಗಳು ಕಲುಷಿತವಾದ ನಮ್ಮ ಮನಸ್ಸನ್ನು ತಿಳಿಗೊಳಿಸಲು ಕಾರ್ಯವನ್ನು ತಮ್ಮ ಜೀವನ ಉದ್ದಕ್ಕೂ ಮಾಡಿದ್ದಾರೆ. ಇದರಲ್ಲಿ ಕಬೀರಾನಂದ ಹಾಗೂ ಕಬೀರೇಶ್ವರರು ಸಹಾ ಸೇರಿದ್ದಾರೆ. ತಮ್ಮ ಸುತ್ತ-ಮುತ್ತಲ್ಲಿನ ಕತ್ತಲ್ಲನ್ನು ಹೊಡೆದೂಡಿಸುವ ಕಾರ್ಯವನ್ನು ಮಾಡಿದ್ದಾರೆ ಎಂದರು.
1929ರಲ್ಲಿ ಚಿತ್ರದುರ್ಗಕ್ಕೆ ಬಂದ ಕಬೀರಾನಂದ ಶ್ರೀಗಳು ಇಲ್ಲಿ ಗೋಶಾಲೆಯನ್ನು ತೆರೆಯುವುದರ ಮೂಲಕ ಗೋಪಾಲಕರಾದರು. 1963ರಲ್ಲಿ ತಮ್ಮ ದೇಹ ತ್ಯಾಗ ಮಾಡಿದರು, ಇಷ್ಟರ ವೇಳೆಗೆ ಇಲ್ಲಿ ಉತ್ತಮವಾದ ಕಾರ್ಯವನ್ನು ಮಾಡುವುದರ ಮೂಲಕ ಭಕ್ತಾಧಿಗಳಲ್ಲಿ ಮನೆ ಮಾತಾಗಿದ್ದಾರೆ.
ಇವರ ನಂತರ ಬಂದ ಕಬೀರೇಶ್ವರ ಶ್ರೀಗಳು ಅಹಾ ಇದ್ದ ಕಾಲದಲ್ಲಿಯೇ ಆಶ್ರಮದ ಪ್ರಗತಿಗಾಗಿ ತಮ್ಮ ಶ್ರಮವನ್ನು ಹಾಕಿದರು. ಇದ ನಂತರ ಬಂದವರೇ ಶ್ರೀ ಶಿವಲಿಂಗಾನಂದ ಶ್ರೀಗಳು, ಇವರು ಬಂದ ಮೇಲೆ ಆಶ್ರಮ ಮತ್ತಷ್ಟು ಪ್ರಗತಿಯನ್ನು ಸಾಧಿಸಿ ಶಿಕ್ಷಣ ಸಂಸ್ಥೆಯನ್ನು ಪ್ರಾರಂಭ ಮಾಡಿ ಮಕ್ಕಳ ಶೈಕ್ಷಣಿಕ ಪ್ರಗತಿಗೆ ದಾರಿ ಮಾಡಿಕೊಟ್ಟು ಶಿವರಾತ್ರಿ ಸಪ್ತಾಹವನ್ನು ಆಚರಣೆ ಮಾಡುವುದರ ಮೂಲಕ ಏಳು ದಿನಗಳ ಕಾಲ ಜ್ಞಾನದ ದಾಸೋಹವನ್ನು ಭಕ್ತಾಧಿಗಳಿಗೆ ಹಲವಾರು ವರ್ಷದಿಂದ ನೀಡುತ್ತಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ನಗರಸಭೆಯ ಅಧ್ಯಕ್ಷರಾದ ಶ್ರೀಮತಿ ತಿಪ್ಪಮ್ಮ ವೆಂಕಟೇಶ್, ಎಸ್.ನಿಜಲಿಂಗಪ್ಪ ಮೆಮೋರಿಯಲ್ ಟ್ರಸ್ಟ್‍ನ ಧರ್ಮದರ್ಶಿ ಷಣ್ಮುಖಪ್ಪ, ಬಸವೇಶ್ವರ ಪುನರ್ ಜ್ಯೋತಿ ಐ ಬ್ಯಾಂಕ್ ಸಂಸ್ಥಾಪಕ ಅಧ್ಯಕ್ಷರಾದ ಶ್ರೀಮತಿ ಗಾಯತ್ರಿ ಶಿವರಾಂ, ಮಾತೃಶ್ರೀ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ವಿ.ಎಲ್.ಪ್ರಶಾಂತ್ ನಗರಸಭಾ ಸದಸ್ಯರಾದ ವೆಂಕಟೇಶ್, ಶ್ರೀಮತಿ ಯಶೋಧಾ ರಾಜಶೇಖರಪ್ಪ, ಸಂತೋಷ್, ಭದ್ರಾವತಿಯ ಗೋವಿಂದಪ್ಪ, ರಾಮಮೂರ್ತಿ ಭಾಗವಹಿಸಿದ್ದರು.
ಬೆಳಿಗ್ಗೆ ಬ್ರಾಹ್ಮಿ ಮಹೂರ್ತದಲ್ಲಿ ಶ್ರೀ ಕರ್ತೃ ಗದ್ದುಗೆಗೆ ರುದ್ರಾಭೀಷೇಕ ಕಾರ್ಯಕ್ರಮ ನಡೆಯಿತು.ಪುಣ್ಯಾರಾಧನೆಯ ಅಂಗವಾಗಿ ಕಳೆದ ನ.22ರ ಕಾರ್ತಿಕ ತದಿಗೆಯಿಂದ ನ.28ರ ಕಾರ್ತಿಕ ಬಹುಳ ನವಮಿವರೆಗೆ ಪ್ರತಿ ದಿನ ಸಂಜೆ ಆರೂಢ ಮೇರು ಜೀವನ ಚರಿತ್ರೆ ಪಾರಾಯಣ ಪ್ರವಚನ ಕಾರ್ಯಕ್ರಮ ನಡೆಸಲಾಯಿತು. ವರ್ಷಮತ್ತು ವರುಣ ಕೀರ್ತನೆ ಹಾಗೂ ಚಂದ್ರಪ್ಪ ಮತ್ತು ಸಂಗಡಿಗರಿಂದ ಭಜನಾ ಕಾರ್ಯಕ್ರಮ ನಡೆಯಿತು.
ಸುಬ್ರಾಯ್ ಭಟ್ರ್ ವೇಧ ಘೋಷ ವಾಚಿಸಿದರೆ, ಶ್ರೀಮತಿ ಜ್ಯೋತಿ ಪ್ರಾರ್ಥಿಸಿದರು, ವೀರಣ್ಣ ಸ್ವಾಗತಿಸಿದರು, ಮುರುಗೇಶ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.