Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಭ್ರಷ್ಠಾಚಾರ ಮುಕ್ತ ಚಿತ್ರದುರ್ಗಕ್ಕಾಗಿ ಆಮ್ ಆದ್ಮಿ ಪಾರ್ಟಿಯಿಂದ ಉಪವಾಸ ಸತ್ಯಾಗ್ರಹ : ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಭಾಗಿ

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ನ. 28 :

ಭ್ರಷ್ಠಾಚಾರ ಎನ್ನುವುದು ಇಂದಿನಿಂದಲ್ಲ ಹಿಂದಿನಿಂದಲೂ ಇದೆ ಆದರೆ ಅಗ ಕದ್ದು ಮುಚ್ಚಿ ನಡೆಯುತ್ತಿತ್ತು ಆದರೆ ಈಗ ರಾಜರೋಷವಾಗಿ ನಡೆಯುತ್ತಿದೆ.ಇದಕ್ಕೆ ತಡೆಯನ್ನು ಹಾಕಬೇಕಿದೆ. ಇದನ್ನು ನಿಲ್ಲಿಸುವುದಕ್ಕೆ ಆಗುವುದಿಲ್ಲ ಆದರೆ ಎಲ್ಲರು ಸೇರಿ ಇದನ್ನು ಕಡಿಮೆ ಮಾಡುವ ಕಾರ್ಯವನ್ನು ಮಾಡಬೇಕಿದೆ ಎಂದು ಆಮ್ ಆದ್ಮಿ ಪಾರ್ಟಿಯ ರಾಜ್ಯಾಧ್ಯಕ್ಷರಾದ ಮುಖ್ಯಮಂತ್ರಿ ಚಂದ್ರು ಕರೆ ನೀಡಿದರು.

ಭ್ರಷ್ಠಾಚಾರ ಮುಕ್ತ ಚಿತ್ರದುರ್ಗವನ್ನಾಗಿ ಮಾಡುವ ಸಲುವಾಗಿ ಆಮ್ ಆದ್ಮಿ ಪಾರ್ಟಿ ಚಿತ್ರದುರ್ಗ ಘಟಕದ ವತಿಯಿಂದ ನಡೆಯುತ್ತಿರುವ ಉಪವಾಸ ಸತ್ಯಾಗ್ರಹ ಇಂದಿಗೆ ಮೂರನೇ ದಿನಕ್ಕೆ ಕಾಲಿಟಿದ್ದು, ಇದರಲ್ಲಿ ಭಾಗವ ಹಿಸಿದ್ದ ಅವರು ಮಾತನಾಡಿ, ದೇಶವೂ ಸಹಾ ಭ್ರಷ್ಠ ಮುಕ್ತವಾದ ದೇಶವಾಗಬೇಕಿದೆ, ಇದಕ್ಕೆ ಎಲ್ಲರು ಸಹಾ ಸಹಕಾರವನ್ನು ನೀಡಬೇಕಿದೆ. ಚಿತ್ರದುರ್ಗ ಘಟಕ ನಡೆಸುವ  ಈ ಕಾರ್ಯಕ್ಕೆ ನಮ್ಮ ಪೂರ್ಣವಾದ ಬೆಂಬಲ ಇದೆ, ಇದನ್ನು ಎಲ್ಲರು ಸಹಾ ಬೆಂಬಲಿಸಬೇಕಿದೆ. ಭ್ರಷ್ಠಾಚಾರ ಹೆಚ್ಚಿನ ರೀತಿಯಲ್ಲಿ ತಾಂಡವಾಡುತ್ತಿದೆ ಇದನ್ನು ತಪ್ಪಿಸಲು ಸಾಧ್ಯವಿಲ್ಲ ಆದರೆ ಕಡಿಮೆ ಮಾಡಬಹುದಾಗಿದೆ ಇದಕ್ಕೆ ಎಲ್ಲರೂ ಹೆಚ್ಚಿನ ರೀತಿಯಲ್ಲಿ  ಸಹಕರಿಸಬೇಕಿದೆ. ಇದು ನಡೆದಿರುವುದು ಸಾಂಕೇತಿಕವಾಗಿದೆ ಮುಂದಿನ ದಿನಮಾನದಲ್ಲಿ ಇದರ ಹೋರಾಟವನ್ನು ರಾಜ್ಯಾದ್ಯಾಂದತ ನಡೆಸಲಾಗುವುದು ಎಂದರು.

ದೆಹಲಿಯಲ್ಲಿ ನಮ್ಮ ಪಕ್ಷದ ಸರ್ಕಾರ ಇದ್ದು ಅಲ್ಲಿ ಭ್ರಷ್ಠಾಚಾರಕ್ಕೆ ಕಡಿವಾಣ ಹಾಕಿ ಅಲ್ಲಿ ಉಳಿದ ಹಣವನ್ನು ಅಭೀವೃದ್ದಿಗೆ ಬಳಕೆ ಮಾಡಲಾಗುತ್ತಿದೆ ಅಲ್ಲಿನ ಜನತೆಗೆ ಆರೋಗ್ಯ,ಶಿಕ್ಷಣ,ಸಂಚಾರವನ್ನು ಉಚಿತವಾಗಿ ನೀಡಲಾಗುತ್ತಿದೆ. ಇದೇ ಮಾದರಿಯಲ್ಲಿ ದೇಶದ ಎಲ್ಲಾ ರಾಜ್ಯಗಳಲ್ಲಿಯೂ ಸಹಾ ಆಗಬೇಕಿದೆ ಎನ್ನವುದು ನಮ್ಮ ಅಭಿಪ್ರಾಯವಾಗಿದೆ. ಸ್ವಾತಂತ್ರ್ಯ ಬಂದಾಗಿನಿಂದ ಅಧಿಕಾರವನ್ನು ನಡೆಸಿದ ಎಲ್ಲಾ ಸರ್ಕಾರಗಳು ಸಹಾ ಭ್ರಷ್ಠಾಚಾರ ಮಾಡಿವೆ. ಇದರಲ್ಲಿ ಇಂತಹದೇ ಪಕ್ಷ ಎಂದು ಇಲ್ಲ ಎಲ್ಲಾ ಪಕ್ಷಗಳು ಸಹಾ ಇದರಲ್ಲಿ ಭಾಗಿಯಾಗಿವೆ. ಭ್ರಷ್ಠಾಚಾರವನ್ನು ನಿಲ್ಲಿಸಲು ಸಣ್ಣ ಮಟ್ಟದಲ್ಲಿ ಅಲ್ಲ ದೊಡ್ಡ ಮಟ್ಟದಲ್ಲಿ ಕ್ರಾಂತಿಯಾಗಬೇಕಿದೆ. ಮತದಾರರ ಮುಖೇನ ಉತ್ತರವನ್ನು ನೀಡಬೇಕಿದೆ. ನಮ್ಮ ಪಾರ್ಟಿ ಇನ್ನೂ ಬೆಳೆಯುತ್ತಿರುವ ಕೂಸಾಗಿದೆ. ದೇಶದಲ್ಲಿ ಎಲ್ಲಾ ಪಾರ್ಟಿಗಳು ಸಹಾ ಭ್ರಷ್ಠಾಚಾರವನ್ನು ಮಾಡಿದೆ ಇದಕ್ಕೆ ಪರ್ಯಾಯವನ್ನು ನಾವು ಕಾಣಬೇಕಿದೆ. ಭ್ರಷ್ಠಾಚಾರದಿಂದ ಇಲ್ಲಿನ ಬಡವರ ಮಕ್ಕಳು ಉನ್ನತವಾದ ಸ್ಥಾನವನ್ನಾಗಿ ಶಿಕ್ಷಣವನ್ನಾಗಿ ಪಡೆಯಲು ಸಾಧ್ಯವಾಗಿಲ್ಲ, ಆದೆಎ ಹೂರ ದೇಶದಲ್ಲಿ ಇದರ ವಿರುದ್ದವಾಗಿದೆ ಅಲ್ಲಿ ಪ್ರತಿಭೆಗೆ ಮನ್ನಣೆಯನ್ನು ನೀಡಲಾಗುತ್ತಿದೆ ಪತ್ರಿಭೆ ಇದ್ದರೆ ಆತನಿಗೆ ಸಮಾಜದಲ್ಲಿ ಗೌರವ ಸಿಗುತ್ತಿದೆ ಆದರೆ ನಮ್ಮ ದೇಶದಲ್ಲಿ ಅಧಿಕಾರ ಹಣ ಇದ್ದರೆ ಮಾತ್ರ ಸ್ಥಾನ-ಮಾನ ಗೌರವ ಲಭ್ಯವಾಗುತ್ತದೆ ಎಂದು ವಿಷಾಧಿಸಿದರು.

ಭ್ರಷ್ಠಾಚಾರದಿಂದ ನಡೆದ ಹಲವಾರು ಪ್ರಕರಣಗಳು ಸರಿಯಾದ ರೀತಿಯಲ್ಲಿ ತನಿಖೆಯಾಗಿಲ್ಲ ಅದನ್ನು ಅಲ್ಲಿಯೇ ಮುಚ್ಚಿ ಹಾಕಲಾಗುತ್ತದೆ. ಬೇಲಿಯೇ ಎದ್ದು ಹೊಲವನ್ನು ಮೇಯುತ್ತಿರುವ ರೀತಿಯಲ್ಲಿ ಸರ್ಕಾರಗಳೇ ಭ್ರಷ್ಠಾಚಾರಿಗಳಿಗೆ ಸಹಾಯವನ್ನು ಮಾಡುತ್ತಿವೆ. ಬಿಟ್ಟ್ ಕಾಯಿ,40 ಪರ್ಸೆಂಟ್ ಕಮಿಷನ್, ಕೋವಿಡ್ ಸಮಯದಲ್ಲಿ ಜನರನ್ನು ಉಳಿಸುತ್ತೇವೆ ಎಂದು ಕಡಿಮೆ ದರದಲ್ಲಿನ ವಸ್ತುವನ್ನು ಹೆಚ್ಚಿನ ದರದಲ್ಲಿ ಖರೀದಿ ಮಾಡಿ ಹಣವನ್ನು ಲೂಟಿ ಮಾಡಿದ್ದಾರೆ. ದೊಡವರ ಮನೆಯಲ್ಲಿ ಲೆಕ್ಕ ಇಲ್ಲದೆ ಹಣ ಸಿಕ್ಕಾಗ ಅದನ್ನು ಹಿಡಿಯುತ್ತಾರೆ ನಂತರ ಅದರ ಬಗ್ಗ ಯಾವ ಮಾತು ನಡೆಯುವುದಿಲ್ಲ, ನಮ್ಮ ತೆರಿಗೆ ಹಣವನ್ನು ಲಪಾಟಿಸುತ್ತಿದ್ದಾರೆ, ಜನರ ಅಭೀವೃದ್ದಿಯನ್ನು ಮರೆತ್ತಿದ್ದಾರೆ. ಚುನಾಯಿತ ಪ್ರತಿನಿಧಿಗಳು ಸಹಾ ಸ್ವಚ್ಚವಾಗಿ ಇದ್ದಾರೆ ಎನ್ನುವಂತಿಲ್ಲ ಅವರು ಸಹಾ ಇದರಲ್ಲಿ ಭಾಗಿಯಾಗಿದ್ದಾರೆ ಎಂದು ಮುಖ್ಯಮಂತ್ರಿ ಚಂದ್ರು ದೂರಿದರು.

ಆಮ್ ಆದ್ಮಿ ಪಾರ್ಟಿ ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ಪೃಥ್ವಿರೆಡ್ಡಿ, ರಾಜ್ಯ ಕಾರ್ಯದರ್ಶಿ ಬಸವರಾಜು ಮುದಿಗೌಡ ಹಾಗೂ ಉಷಾ ಮೋಹನ್ ಚಿತ್ರದುರ್ಗ ಘಟಕದ ಅಧ್ಯಕ್ಷರಾದ ಜಗದೀಶ್,  ಪ್ರಧಾನ ಕಾರ್ಯದರ್ಶಿ ಲೋಕೇಶ್ ಕಾರ್ಯದರ್ಶಿ ರಾಮಪ್ಪ, ಮಹಿಳಾ ಘಟಕದ ಅಧ್ಯಕ್ಷರಾದ ಜ್ಯೋತಿ ಲಕ್ಷ್ಮೀ, ಪ್ರಧಾನ ಕಾರ್ಯದರ್ಶಿ ವಿನೋದಮ್ಮ, ಸಂಘಟನಾ ಕಾರ್ಯದರ್ಶಿ ಶಿವಮ್ಮ. ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾದ ಸೈಯದ್ ತನ್ವೀರ್, ಕಾರ್ಯದರ್ಶಿ ಸೈಯದ್ ದಾವೂದ್, ಹೊಳಲ್ಕೆರೆ ಘಟಕದ ಅಧ್ಯಕ್ಷ ಮಲ್ಲಿಕಾರ್ಜನಪ್ಪ, ಜಂಟಿ ಕಾರ್ಯದರ್ಶಿ ಲೋಕೇಶಪ್ಪ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ರವಿ, ಹೊಸದುರ್ಗ ಅಧ್ಯಕ್ಷ ರಾಜು, ಜಿಲ್ಲಾ ಮಾಧ್ಯಮ ಸಲಹೆಗಾರ ಲೋಹಿತ್, ಯುವ ಘಟಕದ ಅಧ್ಯಕ್ಷ ರವಿ, ಚಂದ್ರಮ್ಮ, ಪರಮೇಶ್ವರಪ್ಪ, ಸೇರಿದಂತೆ ಇತರರು ಭಾಗವಹಿಸಿದ್ದರು.

 

 

 

 

Facebook
Twitter
Telegram
WhatsApp
suddionenews

suddionenews

Leave a Comment

Top Stories

ಅದ್ದೂರಿಯಾಗಿ ನಡೆದ ಚಂದನಾ ಅನಂತಕೃಷ್ಣ ಮ್ಯಾರೇಜ್ : ಕಿರುತೆರೆ ನಟ-ನಟಿಯರಿಂದ ಶುಭ ಹಾರೈಕೆ

ಚಂದನಾ ಅನಂತಕೃಷ್ಣ ಅವರ ಅಭಿಮಾನಿಗಳಿಗೆ ಎರಡೆರಡು ಖುಷಿ. ಒಂದು ಕಡೆ ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಚಂದನಾ ತಾಯಿಯಾಗುತ್ತಿರುವ ವಿಚಾರಕ್ಕೆ ಖುಷಿಯಾದರೆ, ಮತ್ತೊಂದು ಕಡೆ ರಿಯಲ್ ಆಗಿ ಮದುವೆಯಾಗಿದ್ದಾರೆ. ಇಂದು ಅದ್ದೂರಿಯಾಗಿ ಚಂದನಾ ಅವೆ ಮದುವೆ

ಅನೂರ್ಜಿತ ಬೆಳೆ ಕಟಾವು ಮಾಡಿದರೆ ಅಧಿಕಾರಿಗಳ ಅಮಾನತು : ಜಿಲ್ಲಾಧಿಕಾರಿ ಟಿ.ವೆಂಕಟೇಶ್

ಚಿತ್ರದುರ್ಗ. ನ.28: ಬೆಳೆ ಕಟಾವು ಪ್ರಯೋಗ ನಡೆಸಿ, ಉದ್ದೇಶ ಪೂರ್ವಕವಾಗಿ ತಪ್ಪು ದತ್ತಾಂಶವನ್ನು ತಂತ್ರಾಂಶದಲ್ಲಿ ನಮೂದು ಮಾಡಿರುವುದು ಕಂಡು ಬಂದರೆ, ಸಂಬಂದಿಸಿದ ಅಧಿಕಾರಿಯ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದಾಗಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಎಚ್ಚರಿಕೆ ನೀಡಿದರು.

ಶೇ.100 ರಷ್ಟು ಜನನ-ಮರಣ ನೋಂದಣಿಗೆ ಕ್ರಮ ವಹಿಸಿ :  ಜಿಲ್ಲಾಧಿಕಾರಿ ಟಿ.ವೆಂಕಟೇಶ್

  ಚಿತ್ರದುರ್ಗ.28:  ಜಿಲ್ಲೆಯಲ್ಲಿ ಶೇ.100 ರಷ್ಟು ಜನನ-ಮರಣ ನೋಂದಣಿ ಪ್ರಕ್ರಿಯೆ ಸಮರ್ಪಕವಾಗಿ ಕೈಗೊಳ್ಳಲು ಅಗತ್ಯ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಜಿಲ್ಲಾ

error: Content is protected !!