ಡಿಸೆಂಬರ್ 25ಕ್ಕೆ‌ ‘ಮ್ಯಾಕ್ಸ್’ ರಿಲೀಸ್ : ಸುದೀಪ್ ಫ್ಯಾನ್ಸ್ ಫುಲ್ ಖುಷಿ

1 Min Read

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿಮಾನಿಗಳು ಈ ದಿನಕ್ಕಾಗಿ ಅದೆಷ್ಟು ದಿನಗಳಿಂದ ಕಾಯುತ್ತಿದ್ದರೋ ಏನೋ. ಮ್ಯಾಕ್ಸ್ ಬಿಗ್ ಅಪ್ಡೇಟ್ ನೀಡಲಿದೆ ಎಂದಾಗಲೇ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಮಾಡಿದ್ದರು. ಇದೀಗ ಅಭಿಮಾನಿಗಳ ಬಯಕೆಗೆ ಟೀಂ ನೀರೆರೆದಿದೆ. ಕಡೆಗೂ ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಆಗಿದೆ‌.

ಸುದೀಪ್ ನಟನೆಯ ಬಹುನಿರೀಕ್ಷಿತ ಸಿನಿಮಾ ಡಿಸೆಂಬರ್ 25 ರಂದು ತೆರೆಗೆ ಬರಲಿದೆ. ಇದು ಪಕ್ಕಾ ಮಾಸ್ ಸಿನಿಮಾ. ವಿಜಯ್ ಕಾರ್ತಿಕೇಯನ್ ನಿರ್ದೇಶನದ ಮ್ಯಾಕ್ಸ್ ನಲ್ಲಿ ಕನ್ನಡದ ತಂತ್ರಜ್ಞರು ಕೂಡ ಸಾಕಷ್ಟು ಕೆಲಸ ಮಾಡಿದ್ದಾರೆ. ಅಜನೀಶ್ ಲೋಕನಾಥ್ ಈ ಸಿನಿಮಾಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದಲ್ಲಿ ಕಿಚ್ಚ ಕ್ರಿಯೇಷನ್ಸ್ ಬ್ಯಾನರ್ ಕೂಡ ಕೈ ಜೋಡಿಸಿದೆ. ಸುದೀಪ್ ಜೊತೆಗೆ ವರಲಕ್ಷ್ಮೀ ಶರತ್ ಕುಮಾರ್, ಸಂಯುಕ್ತ ಹೊರನಾಡು, ಪ್ರಮೋದ್ ಶೆಟ್ಟಿ ಸೇರಿದಂತೆ ಹಲವರು ಈ ಸಿನಿಮಾದಲ್ಲಿದ್ದಾರೆ.

ಕಿಚ್ಚ ಸುದೀಪ್, ವಿಕ್ರಾಂತ್ ರೋಣ ಸಿನಿಮಾ ಆದ್ಮೇಲೆ ಯಾವ ಸಿನಿಮಾವೂ ರಿಲೀಸ್ ಆಗಿರಲಿಲ್ಲ. ಎರಡು ವರ್ಷದಿಂದ ಬೆಳ್ಳಿ ತೆರೆಯಲ್ಲಿ ಸಿನಿಮಾ ಮೂಲಕ ಬಾದ್ ಶಾ ಕಾಣಿಸಿಕೊಂಡಿಲ್ಲ. ಕ್ರಿಕೆಟ್, ಬಿಗ್ ಬಾಸ್ ಮೂಲಕ ಅಭಿಮಾನಿಗಳಿಗೆ ಖುಷಿ ನೀಡಿದ್ದಾರೆ. ಇದೀಗ ಅಭಿಮಾನಿಗಳು ಬಹಳ ಕುತೂಹಲದಿಂದ ಕಾಯುತ್ತಿದ್ದಂತ, ಖುಷಿಯಿಂದ ಬೀಗುತ್ತಿದ್ದ ಗಳಿಗೆ ಬಂದಿದೆ. ಡಿಸೆಂಬರ್ 25ಕ್ಕೆ ಸಿನಿಮಾ ಘೋಷಣೆಯಾಗಿದ್ದು, ಸಿನಿಮಾ ಪ್ರಚಾರ ಕಾರ್ಯವೂ ಇನ್ಮುಂದೆ ಶುರುವಾಗಲಿದೆ. ಮ್ಯಾಕ್ಸ್ ರಿಲೀಸ್ ಗೆ ಕೆಲವೇ ಕೆಲವು ದಿನಗಳು ಬಾಕಿ ಇದಾವೆ. ಅಂದು ಥಿಯೇಟರ್ ಗಳ ಮುಂದೆ ಫ್ಯಾನ್ಸ್ ಹಬ್ಬ ಮಾಡಲು ಎಲ್ಲಾ ಯೋಜನೆಯನ್ನು ಹಾಕಿಕೊಂಡಿವೆ.

Share This Article
Leave a Comment

Leave a Reply

Your email address will not be published. Required fields are marked *