ಟೀಂ ಇಂಡಿಯಾಗೆ ನನ್ನನ್ನ ಆಯ್ಕೆ ಮಾಡಬೇಡಿ ಎಂದಿದ್ದೇಕೆ ಹಾರ್ದಿಕ್ ಪಾಂಡ್ಯಾ..?

2021ರ ಐಪಿಎಲ್ ನಲ್ಲಿ ಹಾರ್ದಿಕ್ ಪಾಂಡ್ಯಾ ಅಂದುಕೊಂಡಂತೆ ಆಟವಾಡಲಿಲ್ಲ. ನಿರೀಕ್ಷೆ ಮಾಡಿದ ಗುರಿ ಮುಟ್ಟಲಿಲ್ಲ. ಇಡೀ ಭಾರತೀಯರಿಗೆ ಬೇಸರ ಆಗಿದ್ದು ಸತ್ಯ. ಆದ್ರೆ ಅದೇಕೋ ಇದ್ದಕ್ಕಿದ್ದ ಹಾಗೇ ಹಾರ್ದಿಕ್ ಪಾಂಡ್ಯಾ ಅವರೇ ನನ್ನನ್ನು ಆಯ್ಕೆ ಮಾಡಬೇಡಿ ಅಂತ ಟೀಂ ಇಂಡಿಯಾ ಆಟಗಾರರ ಬಳಿ ಅವಲತ್ತು ಕೊಂಡಿದ್ದಾರಂತೆ.

ಕ್ರಿಕೆಟ್ ಆಟಗಾರರಿಗೆ ಫಿಟ್ನೆಸ್ ಅನ್ನೋದು ತುಂಬಾನೆ ಮುಖ್ಯ. ಹಾರ್ದಿಕ್ ಪಾಂಡ್ಯ ಸೋಲಿನ ನಂತರ ಸಂಪೂರ್ಣ ಗಮನವನ್ನ ತನ್ನ ಫಿಟ್ನೆಸ್ ಕಡೆಗೆ ಹರಿಸಿದ್ದಾರಂತೆ. ಹೀಗಾಗಿ ಆಟಗಾರರ ಬಳಿ ಸ್ವತಃ ಅವರೇ ಹೇಳಿಕೊಂಡಿದ್ದಾರೆ. ನನ್ನನ್ನು ಈ ಬಾರಿ ಆಯ್ಕೆ ಮಾಡಬೇಡಿ ಎಂದು.

ಐಪಿಎಲ್ 2022 ರ ಹರಾಜಿಗೂ ಮುನ್ನ ಆಟಗಾರರನ್ನು ಉಳಿಸಿಕೊಳ್ಳಲು ತಂಡಗಳು ಯೋಜಿಸುತ್ತಿರುವ ಸಮಯದಲ್ಲಿ ಹಾರ್ದಿಕ್ ಪಾಂಡ್ಯ ಅವರ ಈ ಹೇಳಿಕೆ ಬಂದಿದೆ. ಫಾರ್ಮ್​ನಲ್ಲಿಲ್ಲದ ಹಾರ್ದಿಕ್ ಪಾಂಡ್ಯ ಅವರನ್ನು ಮುಂಬೈ ಇಂಡಿಯನ್ಸ್ ಉಳಿಸಿಕೊಳ್ಳುವುದಿಲ್ಲ ಎಂದು ನಂಬಲಾಗಿದೆ. ಈ ಮಧ್ಯೆ ಈ ಬಗ್ಗೆ ಹೇಳಿರುವ ಹಾರ್ದಿಕ್ ಪಾಂಡ್ಯಾ ಸಂಪೂರ್ಣವಾಗಿ ಫಿಟ್ ಆಗಲು ಸಮಾಯಾವಕಾಶ ಕೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *