ಬೆಂಗಳೂರು: ಚಿನ್ನದ ದರ ದಿನೇ ದಿನೇ ಏರಿಕೆಯಾಗುತ್ತಲೇ ಇದೆ. ಅದರಲ್ಲೂ ಸತತ ಐದನೇ ದಿನಕ್ಕೂ ಏರಿಕೆಯತ್ತಲೇ ಮುಖ ಮಾಡಿದೆ. ದೀಪಾವಳಿಯ ಬಳಿಕ ಕಂಚ ಇಳಿಕೆ ಕಂಡು ಎಲ್ಲರಿಗೂ ಖುಷಿ ಕೊಟ್ಟಿದ್ದ ಚಿನ್ನ ಶಾಕ್ ಆಗಿವಷ್ಟು ಏರಿಕೆಯಾಗುತ್ತಿದೆ. ಇಂದು ಕೂಡ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡಿದ್ದು, 80 ಸಾವಿರಕ್ಕೆ ಸಮೀಪವಿದೆ. ಇಂದು ಚಿನ್ನದ ದರ ಒಂದು ಗ್ರಾಂಗೆ 75 ರೂಪಾಯಿ ಏರಿಕೆಯಾಗಿದೆ. ಈ ಮೂಲಕ ಪ್ರಸ್ತುತ ಒಂದು ಗ್ರಾಂ ಚಿನ್ನದ ಬೆಲೆ 7,300 ರೂಪಾಯಿ ಆಗಿದೆ.
ಹಾವು ಏಣಿ ಆಟದಲ್ಲಿ ಚಿನ್ನದ ದರ ಏರಿಕೆಯತ್ತಲೆ ಸಾಗಿದೆ. ಸದ್ಯ 10 ಗ್ರಾಂ ಚಿನ್ನದ ದರ ಈಗ 73 ಸಾವಿರ ಆಗಿದೆ. ಹೀಗೆ ಏರಿಕೆಯಾದರೆ ಇನ್ನು ಕೆಲವೇ ದಿನಗಳಲ್ಲಿ 10 ಗ್ರಾಂಗೆ 80 ಸಾವಿರ ಸಮೀಪಿಸುವ ದಿನಗಳು ದೂರ ಏನು ಇಲ್ಲ. ಇನ್ನು ಬೆಂಗಳೂರಿನಲ್ಲಿ 24 ಕ್ಯಾರೆಟ್ ಚಿನ್ನ 1 ಗ್ರಾಂಗೆ 80 ರೂಪಾಯಿ ಏರಿಕೆಯಾಗಿದ್ದು, 7,964 ರೂಪಾಯಿ ಆಗಿದೆ. ಹತ್ತು ಗ್ರಾಂಗೆ 79,640 ರೂಪಾಯಿ ಆಗಿದೆ.
ಇನ್ನು ಬೇರೆ ಬೇರೆ ನಗರಗಳಲ್ಲಿ ಚಿನ್ನ ಹಾಗೂ ಬೆಳ್ಳಿ ಬೆಲೆ ಎಷ್ಟಿದೆ ಎಂಬುದನ್ನು ನೋಡುವುದಾದರೆ ಬೆಂಗಳೂರು ನಗರದಲ್ಲಿ ಹತ್ತು ಗ್ರಾಂ ಚಿನ್ನದ ದರ ಒಂದೇ ದಿನಕ್ಕೆ 750 ರೂಪಾಯಿ ಏರಿಕೆಯಾಗಿದೆ. ಈಗ 73 ಸಾವಿರ ಬೆಲೆ ಇದೆ. ಚೆನ್ನೈನಲ್ಲಿ ಒಂದು ಗ್ರಾಂ ಚಿನ್ನದ ಬೆಲೆ 7,300 ರೂಪಾಯಿ ಇದೆ. ಕೇರಳ, ಹೈದ್ರಾಬಾದ್, ಕೋಲ್ಕತಾ, ಮುಂಬೈ ನಗರದಲ್ಲೂ ಒಂದು ಗ್ರಾಂ ಚಿನ್ನದ ಬೆಲೆ 7,300 ರೂಪಾಯಿ ಇದೆ. ದಿಲ್ಲಿಯಲ್ಲಿ ಕೊಂಚ ಬದಲಾವಣೆ ಇದೆ. ಉಳಿದಂತೆ ಬೆಳ್ಳಿ ಬೆಲೆ ಗ್ರಾಂಗೆ 92 ರೂಪಾಯಿ ಇದೆ. ನೂರು ಗ್ರಾಂಗೆ 92 ಸಾವಿರ ಇದೆ.