ಬೆಂಗಳೂರು: ನಕಲಿ ಬಿಪಿಎಲ್ ಕಾರ್ಡ್ ಗಳನ್ನು ರದ್ದು ಮಾಡ್ತೀವಿ ಎಂದು ಸರ್ಕಾರ ಹೇಳಿತ್ತು. ಆದ್ರೆ ಅನರ್ಹರ ಜೊತೆಗೆ ಅರ್ಹರ ಬಿಪಿಎಲ್ ಕಾರ್ಡ್ ಕೂಡ ರದ್ದಾಗಿದೆ. ಇದರಿಂದ ಸಾಕಷ್ಟು ಜನ ನಿಂದಿದ್ದಾರೆ. ಅರ್ಹರ ಬಿಪಿಎಲ್ ಕಾರ್ಡ್ ರದ್ದಾಗಿದ್ರೆ ಅವುಗಳನ್ನು ಹಿಂತಿರುಗಿಸುವುದಾಗಿ ಸರ್ಕಾರ ಹೇಳಿದೆ. ಹೀಗಾಗಿ ಬಡವರ ಬಿಪಿಎಲ್ ಕಾರ್ಡ್ ರದ್ದಾಗಿದ್ರೆ ಹೀಗೆ ಮಾಡಿ ವಾಪಾಸ್ ಬರುತ್ತೆ.
‘ಒಂದು ವೇಳೆ ಬಿಪಿಎಲ್ ಕಾರ್ಡ್ ವಿಚಾರದಲ್ಲಿ ಬಡವರಿಗೆ ತೊಂದರೆಯಾದಲ್ಲಿ ತಹಶೀಲ್ದಾರ್ ಗಮನಕ್ಕೆ ತಂದರೆ ಒಂದು ವಾರದೊಳಗಾಗಿ ಸಮಸ್ಯೆ ಬಗೆಹರಿಸಲಾಗುವುದು. ಅರ್ಹರಿಗೆ ಬಿಪಿಎಲ್ ತಪ್ಪಿ ಹೋಗಬಾರದು. ಆಕಸ್ಮಾತ್ ತಪ್ಪಿ ಹೋಗಿದ್ದರೆ ವಾಪಸ್ ಕೊಡಲಾಗುವುದು. ಹಾಗೆಯೇ ಪಡಿತರ ಚೀಟಿ ಇಲ್ಲವೆಂದು ಆರೋಗ್ಯ ಸೌಲಭ್ಯ ವಿಚಾರದಲ್ಲಿ ಯಾವುದೇ ತೊಂದರೆ ಆಗುವುದಿಲ್ಲ’ ಎಂದು ಆಹಾರ ಸಚಿವರಾದ ಕೆ.ಎಚ್.ಮುನಿಯಪ್ಪ ಅವರು ತಿಳಿಸಿದ್ದಾರೆ.
ಒಂದು ವೇಳೆ ನಿಮ್ಮ ಬಿಪಿಎಲ್ ಕಾರ್ಡ್ ರದ್ದಾಗಿದ್ದರೆ, ಬಡತನ ರೇಖೆಗಿಂತ ಕೆಳಗೆ ಬರುವವರು ಆಗಿದ್ದರೆ, ತಹಶಿಲ್ದಾರರ ಗಮನಕ್ಕೆ ತರುವುದು ಉತ್ತಮ. ಆಗಲೂ ನಿಮ್ಮ ಬಿಪಿಎಲ್ ಕಾರ್ಡ್ ವಾಪಾಸ್ ಸಿಗಲಿದೆ. ಬಡವರಿಗೆ ಬಿಪಿಎಲ್ ಕಾರ್ಡ್ ನಿಂದ ಸಾಕಷ್ಟು ಅನುಕೂಲವಿದೆ. ಸರ್ಕಾರದಿಂದ ಸಿಗುವ ಅಕ್ಕು ಸಿಗಕಿದೆ, ಸರ್ಕಾರಿ ಆಸ್ಪತ್ರೆಯಲ್ಲಿ ಹಕವು ಸೌಲಭ್ಯಗಳು ಸಿಗಲಿದೆ. ಹೀಗಾಗಿ ಬಿಪಿಎಲ್ ಕಾರ್ಡ್ ಬಡವರಿಗೆ ತುಂಬಾನೇ ಅನುಕೂಲವಾಗಲಿದೆ. ಆದ್ರೆ ಬಿಪಿಎಲ್ ಕಾರ್ಡನ್ನ ಶ್ರೀಮಂತ ವ್ಯಕ್ತಿಗಳು ಸಹ ಹೊಂದಿದ್ದಾರೆ ಎಂಬ ವಿಚಾರ ಹಳ್ಳಿ ಹಳ್ಳಿಗಳಲ್ಲಿದೆ. ಈ ಬಾರಿ ಸುಳ್ಳು ದಾಖಲೆ ಕೊಟ್ಟು ಬಿಪಿಎಲ್ ಪಡೆದವರ ಬಿಪಿಎಲ್ ಕಾರ್ಡ್ ರದ್ದು ಮಾಡುತ್ತೇವೆ ಎಂದಿದ್ದ ಸರ್ಕಾರ ಬಡವರ ಕಾರ್ಡನ್ನು ರದ್ದು ಮಾಡಿದೆ.