Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

🔴 ಅಡ್ಮಿಷನ್ ಓಪನ್

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್, ಚಿತ್ರದುರ್ಗ

2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್‌ನಿಂದ 12ನೇ ತರಗತಿವರೆಗೆ)

ಸಂಪೂರ್ಣ ಮಾಹಿತಿ & ದಾಖಲಾತಿಗಾಗಿ ಕ್ಲಿಕ್ ಮಾಡಿ ➔
---Advertisement---

ರಾಜಾಜಿನಗರದ ಎಲೆಕ್ಟ್ರಿಕ್ ಬೈಕ್ ಶೋ ರೂಂಗೆ ಬೆಂಕಿ : ಬರ್ತ್ ಡೇ ಗೂ ಮುನ್ನವೇ ಪ್ರಿಯಾ ಡೆತ್..!

---Advertisement---

ಬೆಂಗಳೂರು: ಇವಿ ಬೈಕ್ ಗಳಿಗೆ ನಿಂತಲ್ಲಿಯೇ ಬೆಂಕಿ ಹೊತ್ತಿಕೊಳ್ಳುತ್ತಿದ್ದ ಘಟನೆಯನ್ನು ಕೇಳಿದ್ದೇವೆ, ನೋಡಿದ್ದೇವೆ. ಆದರೆ ಈಗ ಶೋರೂಮಿಗೆ ಶೋರೂಮೆ ಹೊತ್ತಿ ಉರಿದಿದೆ. ಇದರಿಂದ ಪ್ರಾಣವೂ ಹೋಗಿದೆ. ರಾಜಾಜಿನಗರದ ಡಾ.ರಾಜ್ ಕುಮಾರ್ ರಸ್ತೆಯಲ್ಲಿ ಗ್ರೀನ್ ಸಿಟಿ ಮೋಟಾರ್ಸ್ ಶೋ ರೂಂ ಇದೆ. ಆ ಶೋರೂಮಿನಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿ, ಹೊತ್ತಿ ಉರಿದಿದೆ.

ಈ ಇವಿ ಎಲೆಕ್ಟ್ರಿಕ್ ಶೋ ರೂಮಿಗೆ ಬೆಂಕಿ ಬಿದ್ದಾಗ ಸುಮಾರು ಆರು ಜನ ಒಳಗೆ ಸಿಲುಕಿದ್ದರು. ಪ್ರಿಯಾ ಎಂಬಾಕೆ ಬೆಂಕಿ ಜಾಸ್ತಿಯಾಗುತ್ತಿದ್ದಂತೆ ಹೊರಗೆ ಬರದೆ ಅಲ್ಲಿಯೇ ಕ್ಯಾಶ್ ರೂಮಿಗೆ ಹೋಗಿ ಲಾಕ್ ಹಾಕಿಕೊಂಡಿದ್ದಾರೆ. ಪರಿಣಾಮ ಬೆಂಕಿಯ ಹೊಗೆ ದಟ್ಟವಾಗಿ ಹಬ್ಬಿದ್ದು, ಬೆಂಕಿಯೂ ತೀವ್ರವಾಗಿ ಹಬ್ಬಿದ್ದು, ಪ್ರಿಯಾ ಸಾವನ್ನಪ್ಪಿದ್ದಾರೆ. ಇನ್ನುಳಿದಂತೆ ಹಲವರು ಹೊಗೆಯಿಂದಾಗಿ ಪ್ರಜ್ಞೆ ತಪ್ಪಿದ್ದಾರೆ, ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಶೋ ರೂಮಿನಲ್ಲಿ ಬೆಂಕಿ ನಂದಿಸುವ ವಸ್ತುಗಳು ಸಹ ಇರಲಿಲ್ಲವೆಂದು ಹೇಳಲಾಗುತ್ತಿದೆ. ಕಳೆದ ಐದು ವರ್ಷದಿಂದ ಈ ಶೋ ರೂಮ್ ರಾಜಾಜಿನಗರದಲ್ಲಿಯೇ ಇತ್ತು ಎನ್ನಲಾಗಿದೆ.

ಇನ್ನು ಮೃತ ಪ್ರಿಯಾ ತಂದೆ ಆರ್ಮುಗಂ ಮಗಳನ್ನು ನೆನೆದು ಕಣ್ಣೀರು ಹಾಕಿದ್ದಾರೆ. ನಾಳೆಯಷ್ಟೇ ಪ್ರಿಯಾ ಅವರ ಹುಟ್ಟುಹಬ್ಬವಿದೆಯಂತೆ. ಅದಕ್ಕಾಗಿ ಮಗಳಿಗೆ ಬಟ್ಟೆಯನ್ನು ಕೊಡಿಸಿದ್ದರಂತೆ‌. ನಾಳೆ ಹುಟ್ಟುಹಬ್ಬವಿತ್ತು. ಈಗ ಮಗಳನ್ನು ಕಳೆದುಕೊಂಡಿದ್ದೇವೆ. ಕಳೆದ ಮೂರು ವರ್ಷದಿಂದ ಇದೇ ಶೋ ರೂಮಿನಲ್ಲಿ ಕೆಲಸ ಮಾಡುತ್ತಿದ್ದಳು. ನನ್ನ ಮಗಳಿಗೆ ಏನಾಯಿತು ಎಂದು ಗೊತ್ತಿಲ್ಲ ಎಂದು ಮೃತ ಪ್ರಿಯಾರ ತಂದೆ ಕಣ್ಣೀರು ಹಾಕಿದ್ದಾರೆ.

ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.

✉️ suddionenews@gmail.com

🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...