ಬೆಂಗಳೂರು: ಚಿನ್ನ-ಬೆಳ್ಳಿ ಬೆಲೆ ಒಳ್ಳೆ ಹಾವು ಏಣಿ ಆಟವನ್ನ ಆಡುತ್ತಿದೆ. ಒಂದು ದಿನ ಇಳಿಯುತ್ತಿದೆ ಎಂದು ಖುಷಿ ಪಡುವಾಗಲೇ ದಿಢೀರನೇ ಏರಿಕೆಯಾಗಿ ಬಿಡುತ್ತದೆ. ದೀಪಾವಳಿ ಬಳಿಕ ಇಳಿಕೆಯತ್ತಲೇ ಮುಖ ಮಾಡಿದ್ದ ಚಿನ್ನದ ದರ ಈಗ ದಿಢೀರನೇ ಏರಿಕೆಯಾಗಿದೆ. ನಿನ್ನೆಗಿಂತ ಇಂದು ಒಂದೇ ದಿನಕ್ಕೆ 70 ರೂಪಾಯಿ ಏರಿಕೆ ಕಂಡಿದೆ.
ಬೆಂಗಳೂರಿನಲ್ಲಿ ಇಂದು ಚಿನ್ನ ಬೆಳ್ಳಿ ಬೆಲೆ ಹೇಗಿದೆ ಎಂಬುದನ್ನು ನೋಡುವುದಾದರೆ, 22 ಕ್ಯಾರೆಟ್ ನ 1 ಗ್ರಾಂ ಚಿನ್ನದ ಬೆಲೆ 7,065 ರೂಪಾಯಿ ಆಗಿದೆ. 22 ಕ್ಯಾರೆಟ್ ಚಿನ್ನ ಈಗ 10 ಗ್ರಾಂಗೆ 70,650 ಆಗಿದೆ. ಇನ್ನೂ ಅಪರಂಜಿ ಚಿನ್ನ 10 ಗ್ರಾಂಗೆ 77,070 ರೂಪಾಯಿ ಆಗಿದೆ. ಅಪರಂಜಿ ಚಿನ್ಬದಲ್ಲಿ ಹತ್ತು ಗ್ರಾಂಗೆ 760 ರೂಪಾಯಿ ಆಗಿದೆ.
ಹಲವು ನಗರಗಳಲ್ಲಿ 22 ಕ್ಯಾರೆಟ್ ಚಿನ್ನ ದರ ಹೇಗಿದೆ ಎಂಬುದನ್ನು ನೋಡುವುದಾದರೆ, ಚೆನ್ನೈ -7,065, ಕೇರಳ – 7,065, ದಿಲ್ಲಿ – 7,080, ಹೈದ್ರಾಬಾದ್ – 7,065, ಕೊಲ್ಕತ್ತಾ – 7,065, ಮುಂಬಯಿ – 7,065 ರೂಪಾಯಿ ಇದೆ.
ಇನ್ನು ಬೆಳ್ಳಿ ಬೆಲೆಯನ್ನು ನೋಡುವುದಾದರೆ: 100 ಗ್ರಾಂಗೆ
ಬೆಂಗಳೂರು- 9,150, ಚೆನ್ನೈ -10,100, ಮುಂಬೈ – 9,150, ದೆಹಲಿ – 9,150, ಕೊಲ್ಕತ್ತಾ – 9,150, ಕೇರಳ – 10,100, ಅಹ್ಮದಾಬಾದ್ – 9,150, ಜೈಪುರ್ – 9,150, ಲಕ್ನೋ – 9,150 ರಾಜ್ಯಗಳಲ್ಲಿ ಬೆಳ್ಳಿಯ ಬೆಲೆಯೂ ಏರಿಕೆಯಾಗುತ್ತಲೆ ಇದೆ. ಮದುವೆ ಸೀಸನ್ ಗಳಲ್ಲಿ ಚಿನ್ನ ಬೆಳ್ಳಿಯ ದರ ಇಳಿಕೆಯಾಗಿದ್ದು ಅನೇಕರಿಗೆ, ಅದರಲ್ಲೂ ಮಧ್ಯಮವರ್ಗದವರಿಗೆ ಸಂತಸ ತಂದಿತ್ತು. ಇನ್ನಷ್ಟು ಇಳೆಕಯಾಗುವ ಸಾಧ್ಯತೆ ಇದೆ ಅಂತಾನೂ ಸಂಭ್ರಮಪಟ್ಟಿದ್ದರು. ಈಗ ದಿಢೀರನೇ ಏರಿಕೆಯತ್ತ ಮುಖ ಮಾಡಿದೆ.