ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂದು ಕರ್ನಾಟಕ ರಾಜ್ಯದ ಸಿಎಂ, ಡಿಸಿಎಂ ಕೂಡ ಜೋರು ಪ್ರಚಾರ ನಡೆಸಿದ್ದಾರೆ. ಮಹಾರಾಷ್ಟ್ರ ಚುನಾವಣೆಗೆ ಇನ್ನು ಉಳಿದಿರುವುದು ಎರಡು ದಿನಗಳು ಮಾತ್ರ. ಈ ಬೆನ್ನಲ್ಲೇ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಸ್ಪೋಟಕ ಹೇಳಿಕೆಯೊಂದನ್ನ ನೀಡಿದ್ದಾರೆ.
ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡಿತ್ತು. ಈ ವೇಳೆ ಹದಿನೇಳು ಶಾಸಕರು ಪಕ್ಷಾಂತರ ಮಾಡಿದ ಕಾರಣ ಸರ್ಕಾರ ಉರುಳಿತ್ತು. ಬಳಿಕ ಯಡಿಯೂರಪ್ಪ ಅವರು ಸಿಎಂ ಆಗಿ ಬಿಜೆಪಿ ಸರ್ಕಾರವನ್ನು ರಚನೆ ಮಾಡಿದರು. ಇದೀಗ ಆ ಬಗ್ಗೆ ಮಾತನಾಡಿದ ಜೋಶಿ ಅವರು, ಕಳೆದ ಬಾರಿ ಬಿಜೆಪಿ ಸರ್ಕಾರ ರಚನೆ ಮಾಡುವಾಗ ಕಾಂಗ್ರೆಸ್ ಶಾಸಕರನ್ನು ಕಳುಹಿಸಿದ್ದು ಇದೇ ಸಿದ್ದರಾಮಯ್ಯ ಅವರು. ಕಾಂಗ್ರೆಸ್ ನವರಿಗೆ ಆಡಳಿತ ನಡೆಸುವ ನೈತಿಕತೆ ಇರಲಿಲ್ಲ. ಹೀಗಾಗಿ ನಾವೂ ಸರ್ಕಾರ ರಚನೆ ಮಾಡಿದ್ವಿ. ಈ ಬಾರಿ ಅವರಿಗೆ ಬಹುಮತ ಇದೆ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ಮುಂದುವರೆಯಬಾರದು ಎಂಬ ಕಾರಣಕ್ಕೆ ತಮ್ಮ ಶಾಸಕರನ್ನು ಕಳುಹಿಸಿದ್ದೆ ಕಾಂಗ್ರೆಸ್ ಎಂದಿದ್ದಾರೆ.
ಇದೆ ವೇಳೆ ಕಾಂಗ್ರೆಸ್ ಶಾಸಕರಿಗೆ 100 ಕೋಟಿ ಆಫರ್ ಬಗ್ಗೆ ಮಾತನಾಡಿ, ಶಾಸಕ ರವಿ ಗಾಣಿಗ ದಾಖಲೆ ಇದ್ದರೆ ಬಿಡುಗಡೆ ಮಾಡಲಿ. ಅಂತಹವರ ವಿರುದ್ಧ ಭಾರತ ಸರ್ಕಾರ ಕ್ರಮ ಕೈಗೊಳ್ಳುತ್ತದೆ. ವಿಷಯ ಡೈವರ್ಟ್ ಮಾಡಲು ಸುಮ್ಮನೆ ಮಾತನಾಡುತ್ತಾರೆ. ಕಾಂಗ್ರೆಸ್ ನವರು ಏನಾದರೂ ಬಿಡುಗಡೆ ಮಾಡಲಿ, ಆದರೆ ವಿಷಯ ಡೈವರ್ಟ್ ಮಾಡುವುದಕ್ಕೆ ಏನೇನೋ ಹೇಳೋದಲ್ಲ ಎಂದು ಕಿಡಿಕಾರಿದ್ದಾರೆ.