ಕರಾಟೆಯಲ್ಲಿ ವಿಶ್ವ ಚಾಂಪಿಯನ್‍ ಪಟ್ಟ ಮುಡಿಗೇರಿಸಿಕೊಂಡ ಚಿತ್ರದುರ್ಗದ ಚಿನ್ನದ ಹುಡುಗಿ ಐಸಿರಿ

2 Min Read

ಚಿತ್ರದುರ್ಗ : ನವೆಂಬರ್ 17 : ಕೈಯಲ್ಲಿ ಗೊಂಬೆಗಳನ್ನು ಇಟ್ಟುಕೊಂಡು ಆಡಬೇಕಾದ 11ನೇ ವಯಸ್ಸಿನಲ್ಲಿ ಬಾಲೆ ಬಬ್ಬಳು ಕರಾಟೆಯಲ್ಲಿ ವಿಶ್ವ ಚಾಂಪಿಯನ್ ಆಗುವುದು ಸಾಮಾನ್ಯವಾದ ವಿಷಯವಲ್ಲ. ಈ ಸಾಧನೆ ಮಾಡಿದ ಐಸಿರಿ ಶ್ರೀಹರ್ಷ ಚಿತ್ರದುರ್ಗದ ಹೆಮ್ಮೆಯ ಪುತ್ರಿ. ಎಸ್.ಜೆ.ಎಂ ಪದವಿ ಕಾಲೇಜಿನಲ್ಲಿ ಸೇವೆ ಸಲ್ಲಿಸಿದ ವಿಶ್ರಾಂತಿ ವಾಣಿಜ್ಯ ಶಾಸ್ತ್ರದ ಪ್ರಾದ್ಯಾಪಕರಾದ ಸಿ.ಎಂ.ಚಂದ್ರಪ್ಪ ರವರ ಮೊಮ್ಮಗಳೇ ಐಸಿರಿ.


ಇದೇ ತಿಂಗಳ ಮೊದಲನೇ ವಾರದಲ್ಲಿ ಉಜ್ಬೆಕಿಸ್ಥಾನದ ತಾಷ್ಕೆಂಟ್ ನಗರದಲ್ಲಿ ನಡೆದ 9ನೇ ಅಂತರಾಷ್ಟ್ರೀಯ ಮಾರ್ಷಲ್ ಆಟ್ರ್ಸ್ ಕ್ರೀಡೆಗಳ ಸ್ಪರ್ಧೆಯಲ್ಲಿ ಭಾಗವಹಿಸಿರುತ್ತಾರೆ. ಕರಾಟೆ ಜೂನಿಯರ್ ವಿಭಾಗದಲ್ಲಿ ವಿಶ್ವ ಚಾಂಪಿಯನ್‍ಷಿಪ್ 2024ರ ಪ್ರಶಸ್ತಿ ಗೆದ್ದಿರುತ್ತಾರೆ. ರಷ್ಯಾ, ಚೈನಾ, ಜಪಾನ್, ಕೋರಿಯಾ ಮುಂತಾದ 25 ದೇಶಗಳಿಂದ ಸ್ಪರ್ಧೆಯಲ್ಲಿ ಭಾಗವಹಿಸಿದ ಕ್ರೀಡಾ ಪಟುಗಳನ್ನು ಸೋಲಿಸಿ, ಚಿನ್ನದ ಪದಕವನ್ನು ಗೆದ್ದು ಬಂದಿರುತ್ತಾರೆ. ಭಾರತದ ರಾಷ್ಟ್ರೀಯ ಬಾವುಟವನ್ನು ಕೈಹಿಡಿದು ಹೆಮ್ಮೆಯಿಂದ ಪೋಡಿಯಂ ಮೇಲೆ ನಿಂತಿರುತ್ತಾರೆ.

ಐಸಿರಿ ತನ್ನ ನಾಲ್ಕನೇ ವಯಸ್ಸಿನಿಂದ ಕರಾಟೆ, ಕುಂಗ್ಫೂ ಮುಂತಾದ ಮಾರ್ಷಲ್ ಆಟ್ರ್ಸ್‍ನಲ್ಲಿ ಕೋಚ್ ಮಂಜುನಾಥ್ ಜೈನ್ ಮಾರ್ಗದರ್ಶನದಲ್ಲಿ ತರಬೇತಿ ಪಡೆಯುತ್ತಾ ಇದ್ದಾರೆ. ತನ್ನ ಪ್ರತಿಭೆ, ಸಾಧನೆಯಿಂದ 2023ರಲ್ಲಿ ಬ್ಲಾಕ್ ಬೆಲ್ಟ್‍ಗೆ ಅರ್ಹತೆ ಪಡೆದಿರುತ್ತಾರೆ. ಜೂನಿಯರ್ ವಿಭಾಗದಲ್ಲಿ ಹಲವು ರಾಜ್ಯ, ರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಚಿನ್ನದ ಪದಕಗಳನ್ನು ಗೆದ್ದಿರುತ್ತಾರೆ. ವಿವಿಧ ಕರಾಟೆ ಸ್ಪರ್ಧೆಗಳಲ್ಲಿ ಭಾಗವಹಿಸಿ ಮೂವತ್ತಕ್ಕೂ ಹೆಚ್ಚು ಚಿನ್ನ, ಬೆಳ್ಳಿ, ಪದಕಗಳನ್ನು ಗೆದ್ದಿರುತ್ತಾರೆ. ಐಸಿರಿಗೆ ಸಂಗೀತ ನೃತ್ಯದ ವಿಶೇಷ ಆಸಕ್ತಿ ಇರುತ್ತದೆ. ಭರತನಾಟ್ಯ, ಕುಚುಪುಡಿ, ಜನಪದ ನೃತ್ಯಗಳಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಹಲವಾರು ವೇದಿಕೆಗಳಲ್ಲಿ ಪ್ರದರ್ಶನ ನೀಡಿರುತ್ತಾರೆ.

ಐಸಿರಿಗೆ ತಂದೆ ಶೀಹರ್ಷ ಮತ್ತು ತಾಯಿ ಶ್ವೇತರವರು ಸದಾ ಬೆಂಬಲಕ್ಕೆ ನಿಂತು ಪ್ರೋತ್ಸಾಹ ನೀಡುತ್ತಿದ್ದಾರೆ. ವಿದ್ಯಾರ್ಥಿಗಳ ಮೆಚ್ಚಿದ ಅಧ್ಯಾಪಕರಾದ ಸಿ.ಎಂ.ಚಂದ್ರಪ್ಪ ರವರ ಏಕಮಾತ್ರ ಪುತ್ರ ಶ್ರೀಹರ್ಷ ಸಾಫ್ಟ್‍ವೇರ್ ಇಂಜಿನಿಯರ್ ಆದ ಅವರು ಸದ್ಯ ಬೆಂಗಳೂರಿನಲ್ಲಿ ನೆಲೆಸಿರುತ್ತಾರೆ. ಐಸಿರಿ ಬೆಂಗಳೂರಿನ ಐಟಿಪಿಎಲ್‍ನ ಐಕ್ಯ ಪಬ್ಲಿಕ್ ಶಾಲೆಯಲ್ಲಿ ಪ್ರಸ್ತುತ 6ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಾ ಇದ್ದಾರೆ. ಇವರಿಗೆ ವ್ಯಾಸಾಂಗದ ಜೊತೆಗೆ ಬೇರೆ ಸ್ಪರ್ಧೆಗಳಲ್ಲಿ ಭಾಗವಹಿಸಲು ಶಾಲೆಯಿಂದಲೂ ಪ್ರೋತ್ಸಾಹ ಸಿಗುತ್ತಾ ಇರುತ್ತದೆ. ಓದಿನಲ್ಲಿ ಅಲ್ಲದೆ, ಮಾರ್ಷಲ್ ಆಟ್ರ್ಸ್ ಮತ್ತು ಸಾಂಪ್ರದಾಯಿಕ ನೃತ್ಯಗಳಲ್ಲಿ ವಿಶೇಷ ಸಾಧನೆ ಮಾಡುತ್ತಿರುವ ಐಸಿರಿ ಶ್ರೀಹರ್ಷ ಪ್ರತಿಭಾನ್ವಿತ ಬಾಲ ಪ್ರತಿಭೆ. ಆಕೆಗೆ ಉತ್ತಮ ಭವಿಷ್ಯ ಸಿಗಲೆಂದು ಎಲ್ಲರೂ ಹಾರೈಸೋಣ.

ಲೇಖಕರು
ಕೆ.ರಾಮರಾವ್
ವಿಶ್ರಾಂತ ಪ್ರಾಧ್ಯಾಪಕರು
ಚಿತ್ರದುರ್ಗ
ಮೊ:9448925472

Share This Article
Leave a Comment

Leave a Reply

Your email address will not be published. Required fields are marked *