ಹುಬ್ಬಳ್ಳಿ: ಶಿವಲಿಂಗೇಶ್ವರ ಶ್ರೀಗಳ ಆರೋಗ್ಯದಲ್ಲಿ ಏರುಪೇರಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಆರೋಗ್ಯ ದಿನದಿಂದ ದಿನಕ್ಕೆ ಕ್ಷೀಣಿಸಿತ್ತಾ ಬರುತ್ತಿದೆ. ಹೃದಯಾಘಾತವಾಗಿದ್ರು, ಕಳೆದ ಐದು ದಿನದಿಂದ ನಗರದ ತತ್ವದರ್ಶ ಆಸ್ಪತ್ರೆಯಲ್ಲಿ ಪಡೆಯುತ್ತಿದ್ದಾರೆ. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಶ್ರೀಗಳು ಬೇಗ ಗುಣಮುಖರಾಗಲೆಂದು ಭಕ್ತಗಣ ಪ್ರಾರ್ಥಿಸುತ್ತಿದ್ದಾರೆ.
ಸ್ವಾಮೀಜಿಯ ಇಂಥ ಪರಿಸ್ಥಿತಿಯಲ್ಲಿ ಹುಬ್ಬಳ್ಳಿ ತಾಲೂಕಿನ ಮಂಟೂರು ಶ್ರೀ ಅಡವಿ ಸಿದ್ದೇಶ್ಚರ ಹಾಗೂ ಸೊರಬ ತಾಲೂಕಿನ ಗೇರಕೊಪ್ಪ ಇಂಧುದರೇಶ್ವರ ಮಠದ ಪೀಠಾಧಿಪತಿ ಯಾರು ಎಂಬ ಪ್ರಶ್ನೆ ಕಾಡುವುದಕ್ಕೆ ಶುರು ಮಾಡಿತ್ತು. ಇದರ ಮಧ್ಯೆ ಆಸ್ಪತ್ರೆಯ ಆವರಣದಲ್ಲಿಯೇ ಭಕ್ತರ ಕೋರಿಕೆ ಮೇರೆಗೆ ಹಾಗೂ ಸ್ವಾಮೀಜಿಯವರ ಸಮ್ಮುಖದಲ್ಲಿ ಮಂತ್ರ ಪಠಣದೊಂದಿಗೆ ಸಾಂಕೇತಿಕವಾಗಿ ಅಡವಿಸಿದ್ದೇಶ್ವರ ಮಠದ ಉತ್ತರಾಧಿಕಾರಿಯಾಗಿ ಇಂಧುಧರ ಶ್ರೀಗಳನ್ನು ಉತ್ತರಾಧಿಕಾರಿಯಾಗಿ ನೇಮಕ ಮಾಡಲಾಗಿದೆ. ಎರಡು ಮಠಕ್ಕೆ ಪೂರ್ವ ನಿಯೋಜಿತ ಇಂಧುದರ ದೇವರನ್ನು ಬೊಮ್ಮನಹಳ್ಳಿ ಶಿವಯೋಗೀಶ್ವರ ಶ್ರೀ ಹಾಗೂ ರುದ್ರಾಕ್ಷಿ ಮಠದ ಬಸವಲಿಂಗ ಸ್ವಾಮೀಜಿ ಸಮ್ಮುಖದಲ್ಲಿ ಘೋಷಣೆ ಮಾಡಲಾಗಿದೆ. ಭಕ್ತರು ಆತಂಕಗೊಳ್ಳದೆ ಇರಲಿ ಎಂಬ ಉದ್ದೇಶದಿಂದ ಶಿವಲಿಂಗೇಶ್ವರ ಸ್ವಾಮೀಜಿ ಅವರ ಇಚ್ಛೆಯಮನತೆ ಉತ್ತರಾಧಿಕಾರಿ ನೇಮಕ ಮಾಡಲಾಗಿದೆ.
ಉತ್ತರಾಧಿಕಾರಿಯಾದ ಬಳಿಕ ಮಾತನಾಡಿದ ಇಂದುಧರ ಸ್ವಾಮೀಜಿ, ನಮ್ಮ ಹಿರಿಯ ಶ್ರೀಗಳ ಆರೋಗ್ಯದಲ್ಲಿ ಏರುಪೇರಾಗಿದೆ. ಅವರ ಶಿಷ್ಯ ಬಳಗದಲ್ಲಿ ನಾನು ಇದ್ದ ಕಾರಣ ನಮ್ಮ ಪೀಠಕ್ಕೆ ಆಸ್ಪತ್ರೆಯಲ್ಲಿಯೇ ಉತ್ತರಾಧಿಕಾರಿಯನ್ನು ನೇಮಕ ಮಾಡಿದರು ಎಂದಿದ್ದಾರೆ.
ಇನ್ನು ಹುಬ್ಬಳ್ಳಿ ಸುತ್ತಮುತ್ತಲಿನ ಗ್ರಾಮದ ಭಕ್ತರು ಆಸ್ಪತ್ರೆಗೆ ಬಂದು ಸ್ವಾಮೀಜಿ ಅವರ ಆರೋಗ್ಯವನ್ನು ವಿಚಾರಿಸುತ್ತಿದ್ದಾರೆ. ಅಂಕಲಗಿ ಅಡವಿ ಸಿದ್ದೇಶ್ವರ ಮಠದ ಅಮರಸಿದ್ದೇಶ್ವರ ಸ್ವಾಮೀಜಿ ಹಾಗೂ ಮಂಟೂರು, ಬಮ್ಮುಗಟ್ಟಿ, ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಗೇರಗೊಪ್ಪದ ಭಕ್ತರು ಕೂಡ ಆಸ್ಪತ್ರೆಗೆ ಧಾವಿಸಿ ಸ್ವಾಮೀಜಿ ಆರೋಗ್ಯ ವಿಚಾರಿಸಿದ್ದಾರೆ ಎಂದಿದ್ದಾರೆ.