ಚಿತ್ರದುರ್ಗ: ಕೋಟೆನಾಡಿನ ಜಿಲ್ಲೆಯ ಮಂದಿ ಕಾತುರದ ಕಣ್ಗಳಿಂದ ಕಾಯುತ್ತಿರುವ ದಿನ ಎಂದರೆ ಅದು ವಾಣಿ ವಿಲಾಸ ಜಲಾಶಯ ಕೋಡಿ ಬೀಳುವ ಕ್ಷಣಕ್ಕಾಗಿ. ಚಿತ್ರದುರ್ಗ ರೈತರ ಜೀವನಾಡಿಯಾಗಿದೆ ವಾಣಿ ವಿಲಾಸ ಜಲಾಶಯ. ಇನ್ನು 1.95 ಅಡಿಯಷ್ಟು ನೀರು ಹರಿದು ಬಂದರೆ ಮೂರನೇ ಬಾರಿ ಕೋಡಿ ಬೀಳಲಿದೆ.
ನಿಂತಿದ್ದ ಮಳೆರಾಯ ಮತ್ತೆ ಸುರಿಯಲು ಶುರು ಮಾಡಿದ್ದಾನೆ. ಹೀಗಾಗಿ ಉಳಿದಿರುವ ಒಂದು ಮುಕ್ಕಾಲು ಅಡಿ ತುಂಬುವ ಭರವಸೆಯೂ ಜಿಲ್ಲೆಯ ಜನರಲ್ಲಿ ಜೀವವಾಡುತ್ತಿದೆ. ಅಂದ ಹಾಗೇ ಜಲಾಶಯಕ್ಕೆ ಸದ್ಯಕ್ಕೆ 924 ಅಡಿ ನೀರು ಹರಿದು ಬರುತ್ತಿದೆ. ಇದರಿಂದಾಗಿ ಪ್ರಸ್ತುತ ಜಲಾಶಯದ ಮಟ್ಟ 128.05 ಅಡಿ ತಲುಪಿದೆ. ಇನ್ನು ಕೇವಲ 1.95 ಅಡಿಗಳಷ್ಟು ನೀರು ಜಲಾಶಯಕ್ಕೆ ಹರಿದು ಬಂದರೆ ಮೂರನೇ ಬಾರಿಗೆ ಕೋಡಿ ಬೀಳಲಿದೆ. ಹಿರಿಯೂರು ತಾಲೂಕಿನ ವಾಣಿ ವಿಲಾಸಪುರ ಬಳಿ ವೇದಾವತಿ ನದಿಗೆ ಅಡ್ಡಲಾಗಿ ವಾಣಿ ವಿಲಾಸ ಜಲಾಶಯ ನಿರ್ಮಾಣ ಮಾಡಲಾಗಿದೆ. ಈ ಜಲಾಶಯ ಒಟ್ಟು 135 ಅಡಿಗಳಷ್ಟು ನೀರನ್ನು ಸಂಗ್ರಹಿಸುವ ಸಾಮರ್ಥ್ಯವನ್ನು ಹೊಂದಿದೆ.
ಈ ಬಾರಿ ಮುಂಗಾರು ಹಾಗೂ ಹಿಂಗಾರು ಮಳೆಯ ಅಬ್ಬರ ರಾಜ್ಯದಲ್ಲಿ ಜೋರಾಗಿಯೇ ಇತ್ತು. ಹೀಗಾಗಿ ರಾಜ್ಯದ ಕೆರೆ ಕಟ್ಟೆಗಳು, ಹಲವು ಪ್ರಮುಖ ಜಲಾಶಯಗಳು ತುಂಬಿವೆ. ಆದರೆ ಚಿತ್ರದುರ್ಗದ ಪಾಲಿಗೆ ನೋಡಿದರೆ ಹೇಳಿಕೊಳ್ಳುವಂತ ಮಳೆಯಾಗಿರಲಿಲ್ಲ. ಆದರೂ ವಾಣಿ ವಿಲಾಸ ಜಲಾಶಯಕ್ಕೆ ನೀರು ಹರಿದು ಬಂದಿದ್ದೇ ಆಶ್ಚರ್ಯವಾಗಿತ್ತು. ಒಳಹರಿವು ಇಂದಿಗೂ ಇಂದು ಕೇವಲ ಒಂದು ಮುಕ್ಕಾಲು ಅಡಿ ನೀರು ಬಂದರೆ ಕೋಡಿ ಬೀಳುತ್ತದೆ. ಅದೇ ನಿರೀಕ್ಷೆಯಲ್ಲಿದ್ದಾರೆ ಸ್ಥಳೀಯರು.ವ