ನವದೆಹಲಿ: ಕೆಲವು ದೇಶಗಳಲ್ಲಿ ಕೊರೊನಾ ಹೆಚ್ಚಳ ದೇಶದಲ್ಲೂ ಭೀತಿ ಉಂಟು ಮಾಡುತ್ತಿದೆ. ಈಗಾಗಲೆ ಮೊದಲ ಅಲೆ ಹಾಗೂ ಎರಡನೆ ಅಲೆಯಲ್ಲಿ ಹೊಡೆತ ತಿಂದಿರುವ ಸರ್ಕಾರ ಈಗ ಮೊದಲೇ ಮುಂಜಾಗ್ರತೆ ವಹಿಸಿದೆ. ಕೊರೊನಾ ಹೆಚ್ಚಾಗುತ್ತಿದೆ ಎಂದು ತಿಳಿದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ.
ಪ್ರಧಾನಿ ಮೋದಿ ನಡೆಸಿದ ಈ ಸಭೆಯಲ್ಲಿ ಹಲವು ಮಾರ್ಗಸೂಚಿಗಳ ಬಗ್ಗೆ ತೀರ್ಮಾನ ಮಾಡಲಾಗಿದೆ. 1.1.529 ಅಂತರಾಷ್ಟ್ರೀಯ ನಿರ್ಬಂಧಗಳನ್ನು ಸರಾಗಗೊಳಿಸುವ ಯೋಜನೆ ಬಗ್ಗೆ ಚರ್ಚಿಸಲಾಗಿದೆ. ವಿದೇಶದಿಂದ ಬರುವವರ ಮೇಲೆ ಹಾಗೂ ಈಗಾಗಲೇ ಕೊರೊನಾ ಹೆಚ್ಚಾಗಿರುವ ದೇಶಗಳಿಂದ ಬರುವ ಪ್ರಯಾಣಿಕರ ಮೇಲೆ ನಿಗಾ ವಹಿಸಲು ಸೂಚಿಸಲಾಗಿದೆ.
ರೂಪಾಂತರಿ ತಳಿ ಕಂಡು ಬಂದಿರುವ ದೇಶಗಳ ವಿಮಾನ ಹಾರಾಟದ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಲಸಿಕೆ ಹೊಸ ರೂಪಾಂತರಿ ಮೇಲೆ ಹೇಗೆ ಪ್ರಭಾವ ಬೀರುತ್ತೆ ಎಂಬುದನ್ನು ಚರ್ಚಿಸಲಾಗಿದೆ. ಜೊತೆಗೆ ಕೊರೊನಾ ಪ್ರೋಟೋಕಾಲ್, ಸಾಮಾಜಿಕ ಅಂತರ ಕಾಪಾಡುವುದು, ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸುವಂತೆ ಸೂಚಿಸಿದ್ದಾರೆ.