Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಚಿತ್ರದುರ್ಗದಲ್ಲಿ ಪ್ರೇಕ್ಷಕರ ಮನಗೆದ್ದ ನೀನಾಸಂ ನಾಟಕ ಪ್ರದರ್ಶನ

Facebook
Twitter
Telegram
WhatsApp

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 13 : ನಗರದ ವಿ.ಪಿ ಅಕಾಡೆಮಿ, ದಿನಸಿ ಫೋರ್ಟ್ ಸೂಪರ್ ಮಾರ್ಕೇಟ್ ಹಾಗೂ ರಂಗಸೌರಭ ಕಲಾ ಸಂಘ ಸಹಯೋಗದಲ್ಲಿ ನೀನಾಸಮ್ ತಿರುಗಾಟ 2024 ತರಾಸು ರಂಗಮಂದಿರದಲ್ಲಿ ಮಂಗಳವಾರ ಸಂಜೆ ಸಂಸ್ಕøತ ನಾಟಕಕಾರ ಭವಭೂತಿ ರಚಿಸಿದ, ವಿದ್ಯಾ ಹೆಗಡೆ, ಭಾರ್ಗವ ಕೆ.ಎನ್, ಎಮ್.ಎಚ್.ಗಣೇಶ ಸಂಗೀತ ವಿನ್ಯಾಸ ಹಾಗೂ ಹಿರಿಯ ರಂಗ ನಿರ್ದೇಶಕ ಕೆ.ವಿ.ಅಕ್ಷರ ಇವರ ಕನ್ನಡರೂಪ ಮತ್ತು ನಿರ್ದೇಶನದಲ್ಲಿ ಮಾಲತೀಮಾಧವ ಸಂಸ್ಕøತ ನಾಟಕ ಪ್ರದರ್ಶನ ಕಂಡಿತು.

ಇತಿಹಾಸ ಸಂಶೋಧಕ ಡಾ.ಬಿ.ರಾಜಶೇಖರಪ್ಪ, ಹಿರಿಯ ಪತ್ರಕರ್ತ ಜಿ.ಎಸ್.ಉಜ್ಜಿನಪ್ಪ, ಜಾನಪದ ತಜÐಸಾಹಿತಿ ಡಾ.ಮೀರಾಸಾಬಿಹಳ್ಳಿ ಶಿವಲಿಂಗಪ್ಪ, ನಿವೃತ್ತ ಪ್ರಾಚಾರ್ಯ ಡಾ.ವಿ.ಬಸವರಾಜ್, ಸ.ಕ.ಕಾ.ಸ್ನಾತಕೋತ್ತರ ವಿಭಾಗದ ಪ್ರಾಧ್ಯಾಪಕಿ ಡಾ.ತಾರಿಣೀ ಶುಭದಾಯಿನಿ, ಪ್ರಾಧ್ಯಾಪಕ ಎಮ್.ವಿ.ನಾಗರಾಜ್, ರಂಗನಿರ್ದೇಶಕ ಕೆಪಿಎಮ್.ಗಣೇಶಯ್ಯ, ರಂಗಸಂಘಟಕ ಎಂ.ವಿ.ನಟರಾಜ ನಾಟಕ ಪ್ರದರ್ಶನಕ್ಕೆ ನಗಾರಿ ಬಾರಿಸಿ ಚಾಲನೆ ನೀಡಿ ಮಾತನಾಡಿದರು.

ನೀನಾಸಮ್ ತಿರುಗಾಟದ ಕಲಾವಿದರಾದ ಅಕ್ಷತ್ ನಂದಗೋಕುಲ -ಶಿವ. ಹುಲಿ. ಕಪಾಲ ಕುಂಡಲೆ. ಸೌದಾಮಿನಿ, ಸಿ.ಅಶೋಕ್‍ಕುಮಾರ್ -ನಟ. ಅವಲೋಕಿತೆ. ಮುಂಡ, ಡಿ.ಇಂದು -ಲವಂಗಿಕೆ, ಓಂಕಾರ ಮೇಗಳಾಪುರ -ನಟ. ಬುದ್ಧರಕ್ಷಿತೆ.ಚಂಡ, ಕೆ.ಎಚ್.ಕವಿತಾ –ಮದಯಂತಿಕೆ, ಕೃಷ್ಣ ಅಶೋಕ ಬಡಿಗೇರ್ –ವಾದ್ಯಗಾರ, ಎಮ್.ಎಚ್.ಗಣೇಶ -ಸಂಗೀತಗಾರ, ದುಂಡೇಶ –ಕಲಹಂಸ. ಅಘೋರಘಂಟ, ಪೂಜಿತಾ ಕೇಶವ ಹೆಗಡೆ –ಮಾಲತಿ, ಮಮತಾ ಕಲ್ಮಕಾರ್ -ಸೂತ್ರಧಾರ. ಕಾಮಂದಕಿ, ಕುಣಿಗಲ್ ರಂಗ – ಮಕರಂದ, ಆರ್.ವಿನೋದ್‍ಕುಮಾರ್ –ಮಾಧವ ಮನೋಜÐವಾಗಿ ಅಭಿನಯ ಮಾಡಿದರು. ತಿರುಗಾಟದ ಸಂಚಾಲಕ ರಘು ಪುರಪ್ಪೇಮನೆ, ಚಾಲಕ ಮಹಮ್ಮದ್ ಫಾಜಿಲ್ ನಿರ್ವಹಿಸಿದರು.

 

ಕ್ರಿ.ಶ. 8ನೆಯ ಶತಮಾನದ ಪ್ರಸಿದ್ಧ ಸಂಸ್ಕøತ ನಾಟಕಕಾರ ಭವಭೂತಿಯ ವಿರಚಿತ ಸಂಸ್ಕøತ ನಾಟಕ ಮಾಲತೀಮಾಧವ ಕೃತಿಯು ಮೇಲ್ನೋಟಕ್ಕೆ ಸರಳ ಎಂದೆನಿಸುತ್ತದೆ. ಮಾಲತಿ ಮತ್ತು ಮಾಧವ ಎಂಬ ಪ್ರೇಮಿಗಳು ತಮ್ಮ ಮದುವೆಗಿರುವ ತೊಡಕುಗಳನ್ನೆಲ್ಲ ದಾಟಿ ಸಂಲಗ್ನಗೊಳ್ಳುವುದು ಜೊತೆಗೆ ಇನ್ನೆರಡು ಜೋಡಿ ಮದುವೆಗಳೂ ಸಂಭವಿಸುವುದೂ ಈ ಕತೆಯ ತಿರುಳು. ರಾಜಕೀಯ ಕಾರಣದಿಂದ ಈ ಮದುವೆಗಳಿಗೆ ವಿಘ್ನ ಉಂಟಾಗುವುದು. ಪದ್ಮಾವತಿಯ ರಾಜನು ತನ್ನ ಗೆಳೆಯನಿಗೆ ಮಾಲತಿಯನ್ನು ಮದುವೆ ಮಾಡಿಸಲು ಬಯಸುತ್ತಾನೆ. ಇದರಿಂದ ಮಾಧವ ಹತಾಶನಾಗಿ ನಾಗರಿಕಲೋಕ ತೊರೆದು ಸ್ಮಶಾನ ವಾಸಿಯಾಗುವುದು, ಅಲ್ಲಿ ಕಾಪಾಲಿಕರಿಂದ ನರಬಲಿಗಾಗಿ ಮಾಲತಿಯ ಅಪಹರಣ ಆಗಿರುವುದನ್ನು ತಡೆದು ಅವಳನ್ನು ಉಳಿಸುವುದು. ಆಮೇಲೆ ಮತ್ತೊಮ್ಮೆ ಅವಳ ಅಪಹರಣವಾದಾಗ ಮಾಧವ ಕಾಡುಮೇಡು ಅಲೆಯುವುದು, ಮತ್ತು ಅಚಿತಿಮವಾಗಿ ಸೌದಾಮಿನಿಯೆಂಬ ಬೌದ್ಧ ಸಾಧಕಿ ಆಕೆಯನ್ನು ಉಳಿಸುವುದು ಮತ್ತು ಅಂತಿಮವಾಗಿ ಅವರಿಬ್ಬರ ಸಮಾಗಮವಾಗುವುದು. ಹೀಗೆ ಕಥನ ಸಾಗುತ್ತದೆ.

ಇಂಥ ಅಸಂಭವನೀಯ ಸಂವಿಧಾನವನ್ನು ಹೆಣೆಯಲಿಕ್ಕೆ ಇಲ್ಲಿ ಕಾಮಂದಕಿ ಎಂಬ ಬೌದ್ಧ ಸನ್ಯಾಸಿನಿ ಮತ್ತವಳ ಶಿಷ್ಯರು ಕಾರಣರಾಗುತ್ತಾರೆ. ವೈರಾಗ್ಯಕ್ಕೆ ಮುಖ ಮಾಡಿರುವ ಸನ್ಯಾಸಿಗಳೇ ಸಂಸಾರಗಳನ್ನು ಕಟ್ಟುವ ಸೂತ್ರಧಾರರಾಗುವುದು ಈ ನಾಟಕದ ಮರ್ಮ. ಆ ಮೂಲಕ ಆಗಬಾರದ ಮದುವೆಗಳು ನಿಂತು ಆಗಬೇಕಾದ ಮದುವೆಗಳು ತಂತಾನೇ ನಡೆಯುವುದು ಈ ಕೃತಿಯ ವಿಶಿಷ್ಟ ಮತ್ತು ನಾಟಕೀಯತೆಯಾಗಿದೆ.

ಚಿತ್ರದುರ್ಗ ಜಿಲ್ಲೆಯ ನಾಗರಿಕರು, ರಂಗಾಸಕ್ತರು, ಜಿಲ್ಲಾಮಟ್ಟದ ಅಧಿಕಾರಿಗಳು, ವಿದ್ಯಾರ್ಥಿಗಳು, ಕಲಾವಿದರು, ಸಾಹಿತಿಗಳು ಮುಂತಾದವರು ನೀನಾಸಮ್ ತಿರುಗಾಟದ ಮಾಲತೀ ಮಾಧವ ನಾಟಕವನ್ನು ವೀಕ್ಷಿಸಿದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ರವಿ ಬೆಳಗೆರೆ ವ್ಯಕ್ತಿಯಲ್ಲ, ಶಕ್ತಿ : ಕೊಂಡ್ಲಹಳ್ಳಿ ಮಹಾದೇವ

ಸುದ್ದಿಒನ್, ಮೊಳಕಾಲ್ಮೂರು, ನವೆಂಬರ್. 14 : ತನ್ನ ಮೊನಚು ಬರವಣಿಗೆ,ಮಾತಿನ ಮೂಲಕ ನಾಡಿಗೇ ಪರಿಚಯವಾಗಿದ್ದ ‘ಅಕ್ಷರ ಬ್ರಹ್ಮ’ ರವಿ ಬೆಳಗೆರೆ ಅವರು ಕನ್ನಡ ಪತ್ರಿಕೋದ್ಯಮ ಕಂಡ ‘ಎಂದೂ ಮರೆಯದ ಮಾಣಿಕ್ಯ’ ಎಂದು ಪತ್ರಕರ್ತ ಕೊಂಡ್ಲಹಳ್ಳಿ

ಉತ್ತಮ ಜೀವನಶೈಲಿಯಿಂದ ಮಧುಮೇಹ ನಿಯಂತ್ರಣ : ಡಾ. ಸತೀಶ್

  ಸುದ್ದಿಒನ್, ಚಿತ್ರದುರ್ಗ:ನ. 14 : ಮಧುಮೇಹ ಅಂದರೆ ಭಯ ಪಡಬೇಕಿಲ್ಲ. ಅದು ಜೀವನದ ಕೊನೆಯೂ ಅಲ್ಲ. ಬದುಕಿಯೂ ಬದುಕದಂತೆ ಜೀವಿಸುವುದು ಸರಿಯಲ್ಲ. ಮಧುಮೇಹಿಗಳು ಜೀವನವನ್ನು ನೋಡುವ ದೃಷ್ಟಿಕೋನವನ್ನೂ ಬದಲಾಯಿಸಿಕೊಳ್ಳಬೇಕು. ನಾನು ಮಧುಮೇಹಿ ಎಂಬ

ವಕ್ಫ್ ವಿವಾದ : ಜಮೀರ್‌ ಮೇಲೆ ರೇಣುಕಾಚಾರ್ಯ ಕಿಡಿ..!

ದಾವಣಗೆರೆ: ರಾಜ್ಯದೆಲ್ಲೆಡೆ ವಕ್ಫ್ ವಿವಾದ ಜೋರಾಗಿದೆ. ರೈತರ ಜಮೀನು, ದೇವಸ್ಥಾನಗಳ ಪಹಣಿಗಳೆಲ್ಲಾ ವಕ್ಫ್ ಹೆಸರು ಸೇರ್ಪಡೆಯಾಗಿ ವಿವಾದ ಹುಟ್ಟು ಹಾಕಿದೆ. ಈ ಸಂಬಂಧ ಕೋಪಗೊಂಡ ರೇಣುಕಾಚಾರ್ಯ, ಇದೀಗ ಸಚಿವ ಜಮೀರ್ ಅಹ್ಮದ್ ವಿರುದ್ಧ ಕೆಂಡದಂತ

error: Content is protected !!