ಬೆಳಗಾವಿ : ಜಿಲ್ಲೆಯಲ್ಲಿ ಪರಿಷತ್ ಚುನಾವಣಾ ಬಿಸಿ ಜೋರಾಗಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದ ನಾಯಕರು ತಮ್ಮ ತಮ್ಮ ಅಭ್ಯರ್ಥಿಗಳನ್ನ ಗೆಲ್ಲಿಸಲು ಹರಸಾಹಸ ಪಡುತ್ತಿದ್ದಾರೆ. ಈ ಬೆನ್ನಲ್ಲೇ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಹರಿಹಾಯ್ದಿದ್ದಾರೆ.
ಕಾಂಗ್ರೆಸ್ ನಿಂದ ತಮ್ಮ ಸಹೋದರ ಚನ್ನರಾಜ್ ಹಟ್ಟಿಹೊಳಿ ಅವರನ್ನ ಕಣಕ್ಕೆ ಇಳಿಸಿದ್ದು, ಅಬ್ಬರದ ಪ್ರಚಾರ ಕಾರ್ಯ ಶುರು ಮಾಡಿದ್ದಾರೆ. ಈ ಹಿನ್ನೆಲೆ ಲಕ್ಷ್ಮೀ ಹೆಬ್ಬಾಳ್ಕರ್ ಸಭೆಯನ್ನುದ್ದೇಶಿಸಿ ಮಾತನಾಡಿದ್ದು, ಅವರಿಗೆ ಲಕ್ಷ್ಮೀ ಹೆಬ್ಬಾಳ್ಕರ್ ಸೋಲಿಸೋದಷ್ಟೇ ಗುರಿ. ನಮಗೆ ಪಕ್ಷ ಆಶೀರ್ವಾದ ಮಾಡಿರೋದ್ರಿಂದಾನೇ ಸ್ಪರ್ಧೆಗಿಳಿದಿದ್ದೇವೆ. ಮೂರನೆಯವರದ್ದು ಏನು ಕೆಲಸ ಎಂದು ವ್ಯಂಗ್ಯವಾಡಿದ್ದಾರೆ.
ಹೋದ ಸಲ ನಮ್ಮ ಪಕ್ಷದಲ್ಲೇ ಇದ್ದು ನಮಗೆ ಅನ್ಯಾಯ ಮಾಡಿದ್ರು. ಈಗ ಬಿಜೆಪಿಯಲ್ಲಿದ್ದು ಅವರಿಗೆ ಅನ್ಯಾಯ ಮಾಡುತ್ತಿದ್ದಾರೆ. ಬಿಜೆಪಿಯಿಂದ ಅಧಿಕೃತ ಅಭ್ಯರ್ಥಿಯನ್ನ ಕಣಕ್ಕೆ ಇಳಿಸಲಾಗಿದೆ. ಮೂರನೆಯವರದ್ದು ಏನು ಅಂತ ಪ್ರಶ್ನಿಸಿದ್ದಾರೆ. ಥೂ ಥೂ ಎನ್ನಲು ನಾನೇನು ಮಾಡಿದ್ದೇನೆ. ಬರೀ ನನಗಲ್ಲ ಇಡೀ ಹೆಣ್ಣು ಸಮುದಾಯಕ್ಕೆ ಅವಮಾನ ಮಾಡಿದ್ದಾರೆ ಎಂದಿದ್ದಾರೆ.