Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಮರುಳಾರಾಧ್ಯ ಸ್ವಾಮೀಜಿ ವಿರುದ್ಧ ಕ್ರಮಕ್ಕೆ ಸೂಚನೆ ನೀಡಿದ ಪರಮೇಶ್ವರ್: ಯಾಕೆ ಗೊತ್ತಾ..?

Facebook
Twitter
Telegram
WhatsApp

ಬೆಂಗಳೂರು: ರಾಜ್ಯದಲ್ಲಿ ವಕ್ಫ್ ವಿವಾದ ಕೇಳಿ ಬರುತ್ತಲೆ ಇದೆ. ರೈತರ ಜಮೀನುಗಳಲ್ಲಿ ವಕ್ಫ್ ಹೆಸರು ಕಾಣಿಸುತ್ತಲೆ ಇದೆ‌. ಈ ಬಗ್ಗೆ ಮರುಳಾರಾಧ್ಯ ಸ್ವಾಮೀಜಿ ಪ್ರಚೋದನಕಾರಿ ಹೇಳಿಕೆಯೊಂದನ್ನ ನೀಡಿದ್ದರು. ಮಕ್ಕಳ ಕೈಗೆ ಪೆನ್ನು ಬಿಟ್ಟು ತಲ್ವಾರ್ ಕೊಡಿ ಎಂದಿದ್ದರು. ಇದೀಗ ಈ ಹೇಳಿಕೆ ಸಂಬಂಧ ಮರುಳಾರಾಧ್ಯ ಸ್ವಾಮೀಜಿ ವಿರುದ್ಧ ಕ್ರಮಕ್ಕೆ ಗೃಹ ಸಚಿವ ಜಿ ಪರಮೇಶ್ವರ್ ಮುಂದಾಗಿದ್ದಾರೆ. ಕ್ರಮ ತೆಗೆದುಕೊಳ್ಳಲು ಸೂಚನೆ ನೀಡಿದ್ದಾರೆ.

ಈ ಬಗ್ಗೆ ಮಾತನಾಡಿದ ಡಾ.ಜಿ.ಪರಮೇಶ್ವರ್, ಮರುಳಾರಾಧ್ಯ ಸ್ವಾಮೀಜಿಗಳು ಧರ್ಮವಾಗಿ ನಡೆದುಕೊಳ್ಳಬೇಕು. ಪ್ರಚೋದನಕಾರಿ ಮಾತುಗಳನ್ನು ಆಡಬಾರದು. ಸ್ವಾಮೀಜಿ ಸಮಾಜವನ್ನು ತಿದ್ದಬೇಕು. ದಾರಿ ತಪ್ಪಿದರೆ ಜಾಗೃತಿ ಮೂಡಿಸುವಂತ ಕೆಲಸ ಮಾಡಬೇಕು. ಅದನ್ನು ಬಿಟ್ಟು ಇಂತಹ ಪ್ರಚೋದನಕಾರಿ ಹೇಳಿಕೆ ನೀಡುವುದು ತರವಲ್ಲ. ಈ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದಿದ್ದಾರೆ.

ಈ ಸಂಬಂಧ ಈಗಾಗಲೇ ಕಲಬುರಗಿಯಲ್ಲಿ ಎಫ್ಐಆರ್ ಕೂಡ ದಾಖಲಾಗಿದೆ. ಕಲಬುರಗಿಯಲ್ಲಿ ರೈತರ ಜಮೀನುಗಳ ಪಹಣಿಯಲ್ಲಿ ವಕ್ಫ್ ಎಂದು ನಮೂದಾಗಿದ್ದನ್ನು ತೆಗೆದುಹಾಕಲು ಪ್ರತಿಭಟನೆ ನಡೆಸಲಾಗಿತ್ತು. ಪೊಲೀಸರು ಕೂಡ ಪರಿಸ್ಥಿತಿ ಹತೋಟಿಗೆ ತರಲು ಪ್ರತಿಭಟನೆಯ ಜಾಗದಲ್ಲಿ ಭದ್ರತೆ ಒದಗಿಸಿಕೊಟ್ಟಿದ್ದರು. ಆದರೆ ಪೊಲೀಸರ ಮುಂದೆಯೇ ಭಾಷಣ ಶುರು ಮಾಡಿದ್ದ ಮುರುಳಾರಾಧ್ಯ ಶಿವಚಾರ್ಯ ಸ್ವಾಮೀಜಿ, ಮಕ್ಕಳ ಕೈಯಲ್ಲಿ ಪೆನ್ನು ಬಿಟ್ಟಯ ತಲ್ವಾರ್ ಕೊಡಿ ಎಂದು ಪ್ರಚೋದನಕಾರಿ ಭಾಷಣ ಆರಂಭಿಸಿದರು. ಎಲ್ಲಾ ಯುವಕರ ಮನೆಯಲ್ಲಿ ತಲ್ವಾರ್ ಗಳಿವೆ. ಯಾರು ಬರುತ್ತಾರೋ ಅವರನ್ನು ಕಡಿಯುತ್ತೇವೆ ಎನ್ನುತ್ತಿದ್ದಾರೆ. ಅವರು (ಅಲ್ಪಸಂಖ್ಯಾತರು) ಭಾರತ ದೇಶವನ್ನು ಪಾಕಿಸ್ತಾನ ಮಾಡುತ್ತೇವೆ ಎನ್ನುತ್ತಿದ್ದಾರೆ. ಇನ್ನು ಎಚ್ಚೆತ್ತುಕೊಳ್ಳದೆ ಇದ್ದರೆ ಭಾರತ ದೇಶವೇ ಇರಲ್ಲ. ಅದಕ್ಕೆ ಇನ್ಮುಂದೆ ಮಕ್ಕಳ ಕೈಲಿ ಪೆನ್ನು ಬದಲು ತಲ್ವಾರ್ ಕೊಡಿ ಎಂಬ ಭಾಷಣ ಮಾಡಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗ APMC | ಕಡಲೆ, ಶೇಂಗಾ, ಸೂರ್ಯಕಾಂತಿ ಸೇರಿದಂತೆ ಇತರೆ ಉತ್ಪನ್ನಗಳ ಇಂದಿನ ಮಾರುಕಟ್ಟೆ ಧಾರಣೆ ವಿವಿರ ಇಲ್ಲಿದೆ…!

ಸುದ್ದಿಒನ್, ಚಿತ್ರದುರ್ಗ, ನವಂಬರ್. 15 : ಇಂದಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಶೇಂಗಾ, ಸೂರ್ಯಕಾಂತಿ, ಮೆಕ್ಕೆಜೋಳ ಸೇರಿದಂತೆ ಇತರೆ ಉತ್ಪನ್ನಗಳ (ಸರಕು) ಇಂದಿನ( ನವೆಂಬರ್. 15 ರ, ಶುಕ್ರವಾರ) ಮಾರುಕಟ್ಟೆಯಲ್ಲಿ ಧಾರಣೆ ಯಾದ ಕನಿಷ್ಠ

ಭರ್ಜರಿ ಓಪೆನಿಂಗ್ ಪಡೆದ ಭೈರತಿ ರಣಗಲ್ : ರೆಸ್ಪಾನ್ಸ್ ಕಂಡು ಗೀತಾ ಶಿವರಾಜ್‍ಕುಮಾರ್ ಹೇಳಿದ್ದೇನು..?

  ಬೆಂಗಳೂರು, ನವೆಂಬರ್. 15 : ಇಂದು ರಾಜ್ಯಾದ್ಯಂತ ಭೈರತಿ ರಣಗಲ್ ಸಿನಿಮಾ ಅದ್ದೂರಿಯಾಗಿ ತೆರೆ ಕಂಡಿದೆ. ಶಿವರಾಜ್‍ಕುಮಾರ್ ನಟನೆಯ ಸಿನಿಮಾಗೆ ಮೊದಲ ಶೋನಲ್ಲಿಯೇ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಥಿಯೇಟರ್ ಗೆ ಜನ ಸಾಗರವೇ

ಶಿವಮೊಗ್ಗ, ತುಮಕೂರು ಜೋರು ಮಳೆ.. ಚಿತ್ರದುರ್ಗ, ದಾವಣಗೆರೆ ಸಾಧಾರಣ ಮಳೆ : ಎಲ್ಲೆಲ್ಲಿ ಹೇಗಿದೆ ಮಳೆಯ ಅಬ್ಬರ..?

  ಬೆಂಗಳೂರು: ರಾಜ್ಯದಲ್ಲಿ ಚುಮು ಚುಮು ಚಳಿ ಶುರುವಾಗುತ್ತಿರುವಾಗಲೆ ಮಳೆರಾಯ ಬೇರೆ ಮತ್ತೆ ಎಂಟ್ರಿ ಕೊಟ್ಟಿದ್ದಾನೆ. ಈಗಾಗಲೇ ರಾಜ್ಯದ ಹಲವೆಡೆ ಅಲ್ಲಲ್ಲಿ ಮಳೆಯಾಗುತ್ತಿದೆ. ಹವಮಾನ ಇಲಾಖೆ ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಶಿವಮೊಗ್ಗ,

error: Content is protected !!