Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಈ ಸರ್ಕಾರವನ್ನು ಕಿತ್ತೆಸೆಯುವ ತನಕ ನಾನು ಮಲಗಲ್ಲ : ಮತ್ತೆ ಶಪಥ ಮಾಡಿದ ದೇವೇಗೌಡರು..!

Facebook
Twitter
Telegram
WhatsApp

ಚನ್ನಪಟ್ಟಣ: ಉಪಚುನಾವಣೆಯ ಕಾವು ಜೋರಾಗಿದೆ. ಘಟಾನುಘಟಿ ನಾಯಕರೇ ಪ್ರಚಾರದ ಅಖಾಡಕ್ಕೆ ಇಳಿದಿದ್ದಾರೆ. ಸಿಪಿ ಯೋಗೀಶ್ವರ್ ಗೆಲ್ಲಿಸಲು ಡಿಕೆ ಬ್ರದರ್ಸ್ ಜೋರು ಪ್ರಚಾರ ಮಾಡ್ತಾ ಇದ್ರೆ, ನಿಖಿಲ್ ಕುಮಾರಸ್ವಾಮಿ ಅವರನ್ನ ಗೆಲ್ಲಿಸಲೇಬೇಕೆಂದು ದೊಡ್ಡ ಗೌಡ್ರ ಕುಟುಂಬ ಶತಾಯಗತಾಯ ಪ್ರಯತ್ನ ನಡೆಸುತ್ತಿದೆ. ಇಂದು ದೊಡ್ಡ‌ಗೌಡ್ರೆ ಚುನಾವಣಾ ಪ್ರಚಾರದ ಅಖಾಡಕ್ಕೆ ಇಳಿದಿದ್ದರು. ಈ ವೇಳೆ ಡಿಕೆ ಬ್ರದರ್ಸ್ ಗೆ ಸವಾಲು ಕೂಡ ಹಾಕಿದ್ದಾರೆ ಜೊತೆಗೆ ಸರ್ಕಾರದ ವಿರುದ್ಧ ಮತ್ತೆ ಶಪಥ ಮಾಡಿದ್ದಾರೆ.

ಚನ್ನಪಟ್ಟಣದ ಪ್ರಚಾರ ಕಾರ್ಯದಲ್ಲಿ ಮಾತನಾಡಿದ ದೇವೇಗೌಡರು, ಈ ಸರ್ಕಾರವನ್ನು ಕಿತ್ತು ಎಸೆಯುವ ತನಕ ನಾನು ವಿರಮಿಸುವುದಿಲ್ಲ. ನನ್ನ 62 ವರ್ಷದ ರಾಜಕೀಯ ಬದುಕಿನಲ್ಲಿ ಇಂಥಹ ಸರ್ಕಾರವನ್ನ ನಾನು ನೋಡಿಲ್ಲ. ನಿಖಿಲ್ ಕುಮಾರಸ್ವಾಮಿ ಗೆದ್ದ ಕೂಡಲೇ ದೇವೇಗೌಡರು ಮಲಗುವುದಿಲ್ಲ. ಈ ಸರ್ಕಾರವನ್ನು ಕಿತ್ತೆಸೆಯುವ ತನಕ ದೇವೇಗೌಡ್ರು ಮಲಗುವುದಿಲ್ಲ ಎಂದಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಗುಡುಗಿದ್ದಾರೆ. ಇದೆ ವೇಳೆ ಎಲ್ಲಿಯ ದೇವೇಗೌಡ್ರು..? ಎಲ್ಲಿಯ ಡಿಕೆ..? ಎಲ್ಲಿಯ ಕುಮಾರಣ್ಣ? ಹಿಮಾಲಯ ಪರ್ವತಕ್ಕೂ, ಇಲ್ಲೆ ಎಲ್ಲೋ ಇರುವ ಪಕ್ಕದ ಗುಡ್ಡಕ್ಕೂ ಹೋಲಿಕೆ ಮಾಡಲು ಆಗುತ್ತದೆಯಾ ಎಂದು ಕಿಡಿಕಾರಿದ್ದಾರೆ.

ದೇವೇಗೌಡರ ಮಾತಿಗೆ ಪ್ರತಿಕ್ರಿಯೆ ನೀಡಿರುವ ಡಿಕೆ ಶಿವಕುಮಾರ್ ಅವರು, ಹಾಗೇ ಕಿತ್ತು ಹಾಕಲು ಇದು ಕಡಲೇಕಾಯಿ ಗಿಡವಲ್ಲ. 136 ಶಾಸಕರಿರುವ ಬಲಿಷ್ಠವಾದ ಸರ್ಕಾರ. ಅವರನ್ನೆಲ್ಲ ಜನರೇ ಆಯ್ಕೆ ಮಾಡಿದ್ದಾರೆ. ನಾನು ಬೆಟ್ಟ ಅಲ್ಲ ಸಣ್ಣ ಮಣ್ಣು ನಾನು. ಅವರು ದೇಶದ ಪ್ರಧಾನಿ ಹಾಗೂ ಮುಖ್ಯಮಂತ್ರಿಯಾಗಿದ್ದವರು. ನಾನು ಸಾಮಾನ್ಯ ರೈತನ ಮಗ. ಅವರಿಗೂ ನನಗೂ ಹೋಲಿಕೆಯೇ ಸರಿಯಲ್ಲ. ಅವರು ತುಂಬಾ ದೊಡ್ಡವರು, ನಾನೊಬ್ಬ ಕಾರ್ಯಕರ್ತ. ಅವರು ಹಿಮಾಲಯ.. ನಾನೊಬ್ಬ ಸೇವಕ ಎಂದು ಡಿಕೆ ಶಿವಕುಮಾರ್ ನುಡಿದಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಮತ್ತೆ ಮಂಡ್ಯ ರಾಜಕೀಯದಲ್ಲೇ ಸಕ್ರಿಯರಾಗುವ ಸುಳಿವು ನೀಡಿದ ಸುಮಲತಾ : ಏನಂದ್ರು..?

ಬೆಂಗಳೂರು: ಕಳೆದ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಟಿಕೆಟ್ ಕೈತಪ್ಪಿದ ಹಿನ್ನೆಲೆ ರಾಜಕೀಯ ಚಟುವಟಿಕೆಯಿಂದ ಸುಮಲತಾ ಕೊಂಚ ದೂರವೇ ಸರಿದಿದ್ದಾರೆ. ಇದೀಗ ಮತ್ತೆ ಅದೇ ಮಂಡ್ಯದ ರಾಜಕೀಯದಲ್ಲಿ ಸಕ್ರಿಯವಾಗುವ ಮಾತುಗಳನ್ನಾಡಿದ್ದಾರೆ ಸುಮಲತಾ.   ಲೋಕಸಭಾ ಚುನಾವಣೆಯ

ಈ ಸರ್ಕಾರವನ್ನು ಕಿತ್ತೆಸೆಯುವ ತನಕ ನಾನು ಮಲಗಲ್ಲ : ಮತ್ತೆ ಶಪಥ ಮಾಡಿದ ದೇವೇಗೌಡರು..!

ಚನ್ನಪಟ್ಟಣ: ಉಪಚುನಾವಣೆಯ ಕಾವು ಜೋರಾಗಿದೆ. ಘಟಾನುಘಟಿ ನಾಯಕರೇ ಪ್ರಚಾರದ ಅಖಾಡಕ್ಕೆ ಇಳಿದಿದ್ದಾರೆ. ಸಿಪಿ ಯೋಗೀಶ್ವರ್ ಗೆಲ್ಲಿಸಲು ಡಿಕೆ ಬ್ರದರ್ಸ್ ಜೋರು ಪ್ರಚಾರ ಮಾಡ್ತಾ ಇದ್ರೆ, ನಿಖಿಲ್ ಕುಮಾರಸ್ವಾಮಿ ಅವರನ್ನ ಗೆಲ್ಲಿಸಲೇಬೇಕೆಂದು ದೊಡ್ಡ ಗೌಡ್ರ ಕುಟುಂಬ

ಸೇವಾವಧಿ ಮುಗಿಸಿದ ನ್ಯಾಯಮೂರ್ತಿ ಚಂದ್ರಚೂಢ : ಕೋರ್ಟ್ ಗೆ ಭಾವುಕ ವಿದಾಯ..!

ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಢ ಅವರ ಸೇವಾ ಅವಧಿ ಇಂದಿಗೆ ಮುಕ್ತಾಯವಾಗಿದೆ. ನವೆಂಬರ್ 10ರಂದು ನಿವೃತ್ತಿ ಹೊಂದಲಿದ್ದಾರೆ. ಇಂದು ಸುಪ್ರೀಂ ಕೋರ್ಟ್ ನಲ್ಲಿ ಭಾವುಕ ವಿದಾಯ ಘೋಷಿಸಲಾಯ್ತು. ನಾಳೆ ಚಂದ್ರಚೂಢ ಅವರ ಕಚೇರಿಯಲ್ಲಿ ಬಿಳ್ಕೊಡುಗೆ ಸಮಾರಂಭ

error: Content is protected !!