ಮಕ್ಕಳಿಗೆ ಶಿಕ್ಷಣದ ಜೊತೆ ಸಂಸ್ಕಾರ ಮತ್ತು ಭಾಷೆಯ ಮಹತ್ವ ತಿಳಿಸಬೇಕು : ಬಿಇಒ ಎಸ್.ನಾಗಭೂಷಣ್

2 Min Read

 

ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ನವಂಬರ್. 07 : ಅನ್ಯ ಭಾಷೆಗಳ ಆಕ್ರಮಣವನ್ನು ತಡೆದುಕೊಳ್ಳುವ ಶಕ್ತಿ ಕನ್ನಡ ಭಾಷೆಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ನಾಗಭೂಷಣ್ ಹೇಳಿದರು.

ತುರುವನೂರು ರಸ್ತೆ ಬಿ.ಎಲ್.ಗೌಡ ಲೇಔಟ್‍ನಲ್ಲಿರುವ ಪ್ರಕೃತಿ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಶುಕ್ರವಾರ ಏರ್ಪಡಿಸಲಾಗಿದ್ದ ಎಳೆಯೋಣ ಬನ್ನಿ ಕನ್ನಡಮ್ಮನ ತೇರು ವಿಶೇಷ ಮೆರವಣಿಗೆ ಹಾಗೂ ಪ್ರಕೃತಿ ಹಬ್ಬ ಉದ್ಗಾಟಿಸಿ ಮಾತನಾಡಿದರು.

ಮಕ್ಕಳಿಗೆ ಶಿಕ್ಷಣದ ಜೊತೆ ಸಂಸ್ಕಾರ ಕನ್ನಡ ಭಾಷೆಯ ಮಹತ್ವ ತಿಳಿಸಬೇಕಿದೆ. ನವೆಂಬರ್ ತಿಂಗಳ ಪೂರ್ತಿ ಎಲ್ಲೆಡೆ ಕನ್ನಡ ರಾಜ್ಯೋತ್ಸವವನ್ನು ವರ್ಣರಂಜಿತವಾಗಿ ಆಚರಿಸಲಾಗುವುದು. ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡ ಎಲ್ಲರ ಮನೆ ಮನಗಳಲ್ಲಿ ಪಸರಿಸಬೇಕು. ಕರ್ನಾಟಕದಲ್ಲಿರುವ ಪ್ರತಿಯೊಬ್ಬರು ಕನ್ನಡ ಭಾಷೆ ಬಗ್ಗೆ ಅಭಿಮಾನ ಮೂಡಿಸಿಕೊಂಡು ಸುಂದರವಾದ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಬೇಕು ಎಂದು ಮನವಿ ಮಾಡಿದರು.

ಪ್ರಕೃತಿ ಶಾಲೆ ಕನ್ನಡಮ್ಮನ ತೇರು ವಿಶೇಷ ಮೆರವಣಿಗೆ ಹಾಗೂ ಪ್ರಕೃತಿ ಹಬ್ಬ ಆಚರಿಸುತ್ತಿರುವುದು ನಿಜಕ್ಕೂ ಸಂತೋಷ. ಕನ್ನಡ ಕಳೆಗುಂದುತ್ತಿದೆ. ಅದಕ್ಕೆ ಪರ ಭಾಷಿಕರ ಹಾವಳಿ ಜಾಸ್ತಿಯಾಗಿರುವುದು ಕಾರಣ. ಆದ್ದರಿಂದ ಎಲ್ಲರೂ ಕನ್ನಡಾಭಿಮಾನ ಬೆಳೆಸಿಕೊಳ್ಳಬೇಕೆಂದರು.

ಆರ್ಯವೈಶ್ಯ ಸಂಘದ ಅಧ್ಯಕ್ಷ ಎಲ್.ಈ.ಶ್ರೀನಿವಾಸಬಾಬು ಮಾತನಾಡಿ ಪ್ರತಿ ಶಾಲೆ ಹಾಗೂ ಊರುಗಳಲ್ಲಿ ಈ ರೀತಿಯ ಕನ್ನಡ ಹಬ್ಬವನ್ನು ಆಚರಿಸಿದಾಗ ಪ್ರತಿಯೊಬ್ಬರಲ್ಲಿಯೂ ಕನ್ನಡದ ಬಗ್ಗೆ ಅಭಿಮಾನ ಮೂಡಿಸಿದಂತಾಗುತ್ತದೆ. ಪ್ರಕೃತಿ ಶಾಲೆ ವಿಶೇಷ ಹಬ್ಬ ಆಚರಿಸುತ್ತಿರುವುದು ನಮಗೆಲ್ಲಾ ಸಂತೋಷ ತಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಕೃತಿ ಶಾಲೆ ಅಧ್ಯಕ್ಷ ರೊ.ಎಂ.ಕೆ.ರವೀಂದ್ರ ಅಧ್ಯಕ್ಷತೆ ವಹಿಸಿದ್ದರು.

ಶಾಲೆಯ ಕಾರ್ಯದರ್ಶಿ ಎಂ.ಕಾರ್ತಿಕ್, ಡಾ.ಮಧುಸೂದನ್‍ರೆಡ್ಡಿ, ಮಾರುತಿ ಮೋಹನ್, ವೇದಾ ರವೀಂದ್ರ, ಶ್ವೇತಾ ಎಸ್.ಕಾರ್ತಿಕ್, ಸ್ವಾತಿ ಆನಂದ್, ಉಮೇಶ್ ವಿ.ತುಪ್ಪದ್  ರೋಟರಿ ಕ್ಲಬ್ ಅಧ್ಯಕ್ಷ ಚೇತನ್‍ಬಾಬು, ಕಾರ್ಯದರ್ಶಿ ರಾಜ್‍ಕುಮಾರ್, ನಿಕಟಪೂರ್ವ ಅಧ್ಯಕ್ಷ ಎಂ.ಗಿರೀಶ್, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ರಾಮಲಿಂಗಶೆಟ್ಟಿ, ಆವೋಪ ಅಧ್ಯಕ್ಷ ಪಿ.ಎಲ್.ಸುರೇಶ್‍ರಾಜು, ಆರ್ಯವೈಶ್ಯ ಹಾಸ್ಟೆಲ್ ಅಧ್ಯಕ್ಷ ಮೋಹನ್‌ ಕುಮಾರ್ ಗುಪ್ತ, ವಾಸವಿ ಶಾಲೆ ಕಾರ್ಯದರ್ಶಿ ಅಜಯ್‍ಕುಮಾರ್, ಆರ್ಯವೈಶ್ಯ ಸಂಘದ ಕಾರ್ಯದರ್ಶಿ ಸುನಿಲ್, ವಾಸವಿ ಕ್ಲಬ್ ಅಧ್ಯಕ್ಷ ಕೋಟೇಶ್ವರಗುಪ್ತ, ಸಿ.ಆರ್.ಪಿ.ರವಿಶಂಕರ್, ಶಾಲೆಯ ಮುಖ್ಯ ಶಿಕ್ಷಕಿ ಶಶಿಕಲಾ, ಶಿಕ್ಷಕ ವೃಂದದವರು ಹಾಗೂ ವಾಸವಿ ಮಹಿಳಾ ಸಂಘದವರು ಪ್ರಕೃತಿ ಹಬ್ಬದಲ್ಲಿ ಪಾಲ್ಗೊಂಡಿದ್ದರು.

ಕನ್ನಡಮ್ಮನ ತೇರು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.

Share This Article
Leave a Comment

Leave a Reply

Your email address will not be published. Required fields are marked *