ಸುದ್ದಿಒನ್, ಚಿತ್ರದುರ್ಗ, ನವೆಂಬರ್. 07 : ನಗರದ ಬಿ.ಎಲ್. ಗೌಡ ಲೇಔಟ್ ನಿವಾಸಿ. ಕೆ.ಆರ್. ಸುರೇಶ್ ರೆಡ್ಡಿ (58 ವರ್ಷ) ಇಂದು(ಗುರುವಾರ) ಬೆಳಿಗಿನ ಜಾವ ಹೃದಯಾಘಾತದಿಂದ ನಿಧನರಾದರು.
ಮೃತರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಸೇರಿದಂತೆ ಅಪಾರ ಬಂದುಬಳಗದವರನ್ನು ಅಗಲಿದ್ದಾರೆ. ಅಂತ್ಯಕ್ರಿಯೆಯನ್ನು ನಗರದ ಜೋಗಿಮಟ್ಟಿ ರಸ್ತೆಯ ಮುಕ್ತಿಧಾಮದಲ್ಲಿ ಇಂದು ಸಂಜೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಸುರೇಶ್‍ರೆಡ್ಡಿ ಕೆ.ಆರ್.ರವರ 2 ನೇತ್ರಗಳನ್ನು ಬಸವೇಶ್ವರ ಪುನರ್‍ಜ್ಯೋತಿ ಐ ಬ್ಯಾಂಕ್‍ಗೆ ದಾನ ನೀಡಿ ದುಃಖದಲ್ಲಿಯೂ ಕುಟುಂಬದವರು ಮಾನವೀಯತೆ ಮೆರೆದು ಅಂಧರ ಬಾಳಿಗೆ ಬೆಳಕಾಗಿದ್ದಾರೆ.

ಈ ಸಂದರ್ಭದಲ್ಲಿ ಡಾ.ಐಶ್ವರ್ಯ, ಎಸ್.ವೀರೇಶ್, ಟಿ.ವೀರಭದ್ರಸ್ವಾಮಿ, ಎಸ್.ವಿ.ಗುರುಮೂರ್ತಿ, ಹಾಗೂ ಅನಂತ್‍ರೆಡ್ಡಿ ಇವರುಗಳು ಸುರೇಶ್‍ರೆಡ್ಡಿರವರ ಪತ್ನಿ ಶೀಲಾರೆಡ್ಡಿಗೆ ಪ್ರಶಂಸನಾ ಪತ್ರ ನೀಡಿ ಸಾಂತ್ವನ ಹೇಳಿದರು.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

















