ದೇಶದಾದ್ಯಂತ ಅಮೆರಿಕಾ ಅಧ್ಯಕ್ಷೀಯ ಚುನಾವಣೆ ಗಮನ ಸೆಳೆಯುತ್ತಿದೆ. 47ನೇ ಅಧ್ಯಕ್ಷ ಯಾರಾಗ್ತಾರೆ ಎಂಬ ಕುತೂಹಲ ಮನೆ ಮಾಡಿದೆ. ಯಾಕಂದ್ರೆ ಕಮಲ ಹ್ಯಾರಿಸ್ ಹಾಗೂ ಡೊನಾಲ್ಡ್ ಟ್ರಂಪ್ ನಡುವೆ ನೆಕ್ ಟು ನೆಕ್ ಫೈಟ್ ಇದೆ. ಹೀಗಾಗಿ ಅಮೆರಿಕಾ ಜನ ಯಾರ ಕಡೆಗೆ ಒಲವು ತೋರಿಸುತ್ತಾರೆ ಎಂಬುದನ್ನು ನೋಡಬೇಕಿದೆ. ಇದರ ನಡುವೆ ಬಾಹ್ಯಾಕಾಶದಲ್ಲಿ ಕಷ್ಟಕ್ಕೆ ಸಂಕಷ್ಟದಲ್ಲಿರುವ ಸುನೀತಾ ವಿಲಿಯಮ್ಸ್ ಕೂಡ ಮತದಾನ ಮಾಡಲಿದ್ದಾರೆ.
ಅಮೆರಿಕಾ ಅಧ್ಯಕ್ಷೀಯ ಚುನಾವಣೆಗೆ ಸಂಬಂಧಿಸಿದಂತೆ ಈಗಾಗಲೇ ಅಂಚೆ ಮತದಾನ ಪ್ರಕ್ರಿಯೆ ಪೂರ್ಣಗೊಂಡಿದೆ. ಪ್ಲೋರಿಡಾ ವಿಶ್ವವಿದ್ಯಾಲಯ ಹೇಳಿದ ಪ್ರಕಾರ 82 ಮಿಲಿಯನ್ ಮಂದಿ ವೋಟ್ ಮಾಡಿದ್ದಾರೆ ಎನ್ನಲಾಗಿದೆ. ಈ ಬಾರಿಯ ಅಮೆರಿಕಾ ಚುನಾವಣೆಯಲ್ಲಿ ಪೆನ್ಸಿಲ್ವೇನಿಯಾ, ಆ್ಯರಿಝೋನಾ, ನಾರ್ಥ್ ಕರೊಲಿನಾದಲ್ಲಿ ನಡೆಯುವ ಮತದಾನ ಬಹಳ ಮುಖ್ಯವಾಗಿದೆ. ಈ ರಾಜ್ಯಗಳಲ್ಲಿ ಹೆಚ್ಚು ಮತ ಯಾರಿಗೆ ಬರುತ್ತೋ ಅವರು ಅಧ್ಯಕ್ಷೀಯ ಸ್ಥಾನಕ್ಕೆ ಸನಿಹವಾಗುತ್ತಾರೆ.
ಚುನಾವಣೆಗಳಲ್ಲಿ ಒಂದೊಂದು ಮತವೂ ಬಹಳ ಮುಖ್ಯವಾಗುತ್ತದೆ. ಹೀಗಾಗಿ ಎಲ್ಲರೂ ಮತಾದನ ಮಾಡಿ ಎಂದು ಜಾಗೃತಿಯನ್ನು ಮೂಡಿಸುತ್ತಾರೆ. ಇದರ ನಡುವೆ ಅಮೆರಿಕಾದ ಮತದಾನ ಹಕ್ಕು ಹೊಂದಿರುವ ಸುನೀತಾ ವಿಲಿಯಮ್ಸ್ ಈಗ ಬಾಹ್ಯಾಕಾಶ ನೌಕೆಯಲ್ಲಿದ್ದಾರೆ. ಭೂಮಿಗೆ ಬರುವುದಕ್ಕೆ ಆಗದೆ ಅಲ್ಲಿಯೇ ತೇಲುತ್ತಾ ಬದುಕುತ್ತಿದ್ದಾರೆ. ಇಂಥ ಸಂಕಷ್ಟದಲ್ಲೂ ಮತದಾನ ಮಾಡುವುದನ್ನು ಮರೆತಿಲ್ಲ. ಬಾಹ್ಯಾಕಾಶದಲ್ಲಿರುವ ಸುನೀತಾ ವಿಲಿಯಮ್ಸ್ ಗಾಗಿ ನಾಸಾ ವಿಶೇಷ ವ್ಯವಸ್ಥೆ ಮಾಡಿದೆ. ಗಗನಯಾತ್ರಿಗಳು ಬಾಹ್ಯಾಕಾಶ ನಿಲ್ದಾಣದಲ್ಲಿಯೇ ಮತಯಂತ್ರಗಳ ವ್ಯವಸ್ಥೆ ಮಾಡಲಾಗಿದ್ದು, ಅದರ ಮೂಲಕ ತಮ್ಮಿಷ್ಟದ ಅಭ್ಯರ್ಥಿಗೆ ಮತ ಹಾಕಬಹುದು. ಇದರಿಂದ ಸುನೀತಾ ವಿಲಿಯಮ್ಸ್ ಕೂಡ ಸಂತಸಗೊಂಡಿದ್ದಾರೆ. ಬಾಹ್ಯಾಕಾಶದಲ್ಲಿ ಸಿಲುಕಿರುವ ಇಬ್ಬರು ಗಗನಯಾತ್ರಿಯನ್ನು ಭೂಮಿಗೆ ತರಲು ನಾಸಾ ಇನ್ನಿಲ್ಲದ ಪ್ರಯತ್ನ ಮಾಡುತ್ತಿದೆ.