Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಗ್ರಾ.ಪಂ.ಕಾರ್ಯಪಡೆ ಸಮಿತಿ ಸಕ್ರೀಯವಾಗಿರಲಿ : ಎಸ್.ಎಸ್.ಮಂಜುನಾಥ್

Facebook
Twitter
Telegram
WhatsApp

 

 

ಚಿತ್ರದುರ್ಗ. ನ.05 : ಗ್ರಾಮ ಪಂಚಾಯತಿಯ ಆರೋಗ್ಯ ಕಾರ್ಯಪಡೆ ಸಮಿತಿಗಳು ಪಂಚಾಯಿತಿ ಮಟ್ಟದಲ್ಲಿ ಸಕ್ರಿಯವಾಗಿ ಕಾರ್ಯ ಪ್ರವೃತ್ತರಾದರೆ ಆರೋಗ್ಯವಂತ ಗ್ರಾಮ ರಚನೆ ಮಾಡಬಹುದು ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಎಸ್.ಮಂಜುನಾಥ್ ಹೇಳಿದರು.

ಮಂಗಳವಾರ ಚಿತ್ರದುರ್ಗ ತಾಲ್ಲೂಕು ಡಿ.ಎಸ್.ಹಳ್ಳಿ ಮತ್ತು ಇಂಗಳದಾಳ್ ಗ್ರಾಮ ಪಂಚಾಯ್ತಿಗಳಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಆರೋಗ್ಯ ಇಲಾಖೆ ಮತ್ತು ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆಗಳ ಸಹಯೋಗದೊಂದಿಗೆ ಗ್ರಾಮ ಪಂಚಾಯತಿ ಟಾಸ್ಕ್ ಫೋರ್ಸ್ ಸಮಿತಿ ಸದಸ್ಯರಿಗೆ ಮತ್ತು ಸಮನ್ವಯ ಇಲಾಖೆಯ ಕ್ಷೇತ್ರ ಮಟ್ಟದ ಅಧಿಕಾರಿಗಳಿಗೆ ಆಯೋಜಿಸಿದ್ದ ಗ್ರಾಮ ಆರೋಗ್ಯ ಯೋಜನೆ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಗ್ರಾಮ ಮಟ್ಟದಲ್ಲಿ ತಾಯಿ ಮತ್ತು ಶಿಶು ಮರಣ, ಕ್ಷಯ ರೋಗ, ಕೀಟಜನ್ಯ ರೋಗ ನಿಯಂತ್ರಣ ಮಾಡುವುದರೊಂದಿಗೆ, ಸಾಮಾಜಿಕ ಪಿಡುಗುಗಳಾದ ಬಾಲ್ಯ ವಿವಾಹ ಹಾಗೂ ಭ್ರೂಣ ಹತ್ಯೆ ಕಾಯ್ದೆ ಅನುಷ್ಠಾನ ಕಾಯ್ದೆ ಜಾರಿ ಮಾಡುವಲ್ಲಿ ಕಾರ್ಯಪಡೆಯ ಕೆಲಸ ಮುಖ್ಯವಾಗಿರುತ್ತದೆ. ಇದರೊಂದಿಗೆ ಜೀವನ ಶೈಲಿ ರೋಗಗಳ ನಿಯಂತ್ರಣಕ್ಕೂ ಕಾರ್ಯಪಡೆ ಮಹತ್ವ ನೀಡಬೇಕು.  ವಾರ್ಡ್ವಾರು ಸಮಿತಿಗಳನ್ನ ರಚನೆ ಮಾಡಿ ಪ್ರತಿ ವಾರ್ಡ್ಗಳಲ್ಲಿಯೂ ಆರೋಗ್ಯ ಕಿಟ್ ಬಳಕೆ ಮಾಡಿ ೩೦ ವರ್ಷ ಮೇಲ್ಪಟ್ಟ ಎಲ್ಲಾ ಸಾರ್ವಜನಿಕರ ಆರೋಗ್ಯ ತಪಾಸಣೆ ನಡೆಸಿ,  ಈ ಎಲ್ಲಾ ಮಾಹಿತಿಗಳ ದತ್ತಾಂಶಗಳನ್ನ ಗಣಕೀಕರಣಗೊಳಿಸಿಬೇಕು ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಸಂಪನ್ಮೂಲ ವ್ಯಕ್ತಿ ವಾಸವಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ ಮೂಗಪ್ಪ ಮಾತನಾಡಿದರು.

ಕಾರ್ಯಕ್ರಮದಲ್ಲಿ ಡಿ.ಎಸ್.ಹಳ್ಳಿ ಗ್ರಾ.ಪಂ.ಅಧ್ಯಕ್ಷೆ ಭಾಗ್ಯಮ್ಮ, ಉಪಾಧ್ಯಕ್ಷೆ ಸರೋಜಮ್ಮ, ಇಂಗಳದಾಳ್ ಗ್ರಾ.ಪಂ. ಅಧ್ಯಕ್ಷ ಕೆರುವಲ್ಲಪ್ಪ,  ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶ್ರೀಧರ್, ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿ ರೇಣುಕಮ್ಮ, ಅನಿತಾ, ರೇಖಾ, ಪಿ.ಡಿ.ಓ ಶಿಲ್ಪ ಸೇರಿದಂತೆ ಮತ್ತಿತರರು ಇದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗ | ಗೌಡ್ರು ಮಲ್ಲಿಕಾರ್ಜುನಪ್ಪ ನಿಧನ

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 05 :  ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ತೊಡರನಾಳ್ ಗ್ರಾಮದ ಗೌಡ್ರು ಮಲ್ಲಿಕಾರ್ಜುನಪ್ಪ( 72 ) ಅನಾರೋಗ್ಯದಿಂದ ಮಂಗಳವಾರ ಮೃತಪಟ್ಟಿದ್ದಾರೆ. ಮೃತರು ಪತ್ನಿ, ಪುತ್ರ, ಮೂವರು ಪುತ್ರಿಯರು ಸೇರಿದಂತೆ ಅಪಾರ ಬಂಧು

ಕುಮಾರಸ್ವಾಮಿ ಮೇಲೆ ಎಫ್ಐಆರ್: ಕೇಂದ್ರ ಸಚಿವ ಹೆಚ್ಡಿಕೆ ಶಾಕಿಂಗ್ ರಿಯಾಕ್ಷನ್..?

ಬೆಂಗಳೂರು: ರಾಜ್ಯದಲ್ಲಿ ಮೂರು ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿದೆ. ಅದರಲ್ಲೂ ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ. ಇದರ ನಡುವೆಯೇ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಎಫ್ಐಆರ್ ದಾಖಲಾಗಿದೆ. ಈ ಸಂಬಂಧ ಕುಮಾರಸ್ವಾಮಿ

ಫೋಟೋಗಳನ್ನು ನೋಡಿ ಮೊದಮೊದಲು ಅತ್ತಿದ್ದೆ : ಕೆಟ್ಟ ಟ್ರೋಲ್ ಬಗ್ಗೆ ಮಾನಸ ಸ್ಟ್ರಾಂಗ್ ಟಾಕ್

ಬಿಗ್ ಬಾಸ್ ಸೀಸನ್ 11ರ ಬಹುನಿರೀಕ್ಷಿತ ಸ್ಪರ್ಧಿಯಾಗಿ ಮಾನಸ ಮನೆಯೊಳಗೆ ಎಂಟ್ರಿಯಾಗಿದ್ದರು. ಬಿಗ್ ಬಾಸಚ ಮಾನಸ ವೇದಿಕೆ ಮೇಲೆ ಮಾಡುತ್ತಿದ್ದ ಕಾಮಿಡಿ, ಆ ಕ್ಷಣಕ್ಕೆ ಕೊಡುತ್ತಿದ್ದ ಟಾಂಟ್ ಎಲ್ಲವೂ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಜನರ

error: Content is protected !!