ಬೆಂಗಳೂರು: ವಾಹನ ಸವಾರರು ತಮ್ಮ ವಾಹನಗಳಿಗೆ HSRP ಪ್ಲೇಟ್ ಅಳವಡಿಸಿಕೊಳ್ಳಲು ರಾಜ್ಯ ಸರ್ಕಾರ ಈಗಾಗಲೇ ನಾಲ್ಕು ಬಾರಿ ಗಡುವು ವಿಸ್ತರಿಸಿದೆ. ಇದೀಗ ಐದನೇ ಬಾರಿಯೂ ಗಡುವು ವಿಸ್ತರಣೆ ಮಾಡಿದೆ. ಇದು ಕೊನೆಯ ಗಡುವು ವಿಸ್ತರಣೆ ಮಾಡಿದೆ. ಈ ತಿಂಗಳ ಕೊನೆ ಅಂದ್ರೆ ನವೆಂಬರ್ 30ರ ತನಕ ಗಡುವು ವಿಸ್ತರಣೆ ಮಾಡಿದೆ. ಅಷ್ಟರೊಳಗೆ ವಾಹನ ಸವಾರರು HSRP ನಂಬರ್ ಪ್ಲೇಟ್ ಅಳವಡಿಸಬೇಕಾಗಿದೆ. ಇಲ್ಲವಾದಲ್ಲಿ ದಂಡ ತೆರಬೇಕಾಗುತ್ತದೆ.
ರಾಜ್ಯದಲ್ಲಿ HSRP ಪ್ಲೇಟ್ ಹಾಕದ ವಾಹನಗಳು 1.90 ಕೋಟಿ ಇದಾವೆ. ನಾಲ್ಲು ಬಾರಿ ಗೆಉವು ವಿಸ್ತರಣೆ ಮಾಡಿದರು ಸಹ 55 ಲಕ್ಷ ವಾಹನಗಳು ಮಾತ್ರ ನಂಬರ್ ಪ್ಲೇಟ್ ಅಳವಡಿಕೆ ಮಾಡಿಕೊಂಡಿವೆ. ಇನ್ನು ಕೋಟ್ಯಾಂತರ ಸಂಖ್ಯೆಯಲ್ಲಿ ವಾಹನಗಳು ನಂಬರ್ ಪ್ಲೇಟ್ ಅಳವಡಿಕೆ ಮಾಡಿಕೊಳ್ಳಬೇಕಿದೆ. ರಾಜ್ಯ ಸರ್ಕಾರ ಅಂತವರಿಗೆ ಮತ್ತೆ ಅವಕಾಶ ನೀಡಿದೆ. ಇದು ಕಡೆಯ ಗಡುವು ವಿಸ್ತರಣೆಯಾಗಿದ್ದು, ಪ್ಲೇಟ್ ಅಳವಡಿಸಿಕೊಳ್ಳದೇ ಹೋದಲ್ಲಿ ದಂಡ ವಿಧಿಸಲು ಸಾರಿಗೆ ಇಲಾಖೆ ತೀರ್ಮಾನಿಸಿದೆ. ಹೀಗಾಗಿ ಗಡುವು ಮುಗಿಯುವುದರೊಳಗೆ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಬೇಕಿದೆ.
ಭದ್ರತೆ ಹಾಗೂ ಸುರಕ್ಷತೆಯ ದೃಷ್ಟಿಯಿಂದ HSRP ನಂಬರ್ ಪ್ಲೇಟ್ ಅಳವಡಿಸಲು ಸೂಚನೆ ನೀಡಲಾಗಿದೆ. ಮೋಟಾರು ವಾಹನ ಕಾಯ್ದೆ 1989 ಸೆಕ್ಷನ್ 50 ಹಾಗೂ 51ರ ಅನ್ವಯ ಎಲ್ಲಾ ವಾಹನಗಳಿಗೂ ಗರಿಷ್ಠ ಭದ್ರತೆಯ ನಂಬರ್ ಪ್ಲೇಟ್ ಅಳವಡಿಸಬೇಕಿದೆ. ಹೈ ಸೆಕ್ಯುರಿಟಿ ನಂಬರ್ ಅಳವಡಿಸಬೇಕಿದೆ. ಕರ್ನಾಟಕ ವಾಹನಗಳಿಗೆ ಇದನ್ನು ಕಡ್ಡಾಯಗೊಳಿಸಲಾಗಿದೆ. ಹೀಗಾಗಿ ಐದನೇ ಬಾರಿಗೆ ನಂಬರ್ ಪ್ಲೇಟ್ ಅಳವಡಿಸಲು ಗಡುವು ವಿಸ್ತರಣೆ ಮಾಡಲಾಗಿದೆ.